ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರ ಹಣಕ್ಕೆ ಕೈ ಹಾಕಿದ ಸಿದ್ರಾಮಣ್ಣಾ, ನಿನಗೆ ತಾಕತ್ ಇದ್ದರೆ ಅಲ್ಪಸಂಖ್ಯಾತರ ಕಮಿಟಿ ಮುಟ್ಟಬೇಕಿತ್ತಪಾ? ಆಗ ನಿಮ್ಮ ಅಧಿನಾಯಕಿ ಸೋನಿಯಾಗಾಂಧಿಯೇ ನಿನ್ನ ತಲೆಮೇಲೆ ಇಕ್ಕುತ್ತಿದ್ದರು. ಕಾಂಗ್ರೆಸ್ ಪಕ್ಷ ರಚನೆ ಆದಾಗಿನಿಂದಲೂ ದಲಿತ ಸಮುದಾಯದ ಮತಗಳನ್ನು ಓಟ್‌ಬ್ಯಾಂಕ್ ಮಾಡಿಕೊಂಡಿದ್ದೀರಿ. ದಲಿತರನ್ನು ಕೇವಲ ಚುನಾವಣೆಗೆ ಬಳಸಿಕೊಳ್ಳುತ್ತಿದ್ದೀರಿ. ನಿಮಗೆ ಅಷ್ಟು ದಲಿತರ ಮೇಲೆ ಅಭಿಮಾನ ಇದ್ದರೆ, ನೀವು ಗ್ಯಾರಂಟಿಗೆ ಬಳಸಿಕೊಂಡ ಎಸ್‌ಸಿಇಪಿ, ಟಿಎಸ್‌ಪಿಯ ₹ 25ಸಾವಿರ ಕೋಟಿ ಹಣವನ್ನು ಮರಳಿ ಅದೇ ಯೋಜನೆಗೆ ಹಾಕಿ ಪ್ರಮಾದ ಸರಿಪಡಿಸಿ ನೊಡೋಣ ಎಂದು ಸವಾಲು ಹಾಕಿದರು. ನೀವು ದಲಿತರ ಹಣ ದಲಿತರಿಗೆ ಕೊಡುವವರೆಗೂ ನಾನು ಬಿಡೋದಿಲ್ಲ ಎಂದು ಎಚ್ಚರಿಸಿದರು.
ಕಾಂಗ್ರೆಸ್‌ನಲ್ಲಿ ಖರ್ಗೆಗೆ ಅನ್ಯಾಯ:ಚುನಾವಣೆ ವೇಳೆ ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆಗೆ ಒಳಗೆ ಹೋಗುವ ವೇಳೆ ಪ್ರಿಯಾಂಕಾ ಗಾಂಧಿ, ರಾಹುಲಗಾಂಧಿ, ಸೋನಿಯಾಗಾಂಧಿ, ಮತ್ತಿಬ್ಬರು ಅವರ ಸಂಬಂಧಿಕರೇ ಒಳಗೆ ಹೋದರು. ಪಾಪ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಿಟಕಿಯಲ್ಲಿ ನಿಂತು ನೋಡುತ್ತಿದ್ದರು. ಇದು ಕಾಂಗ್ರೆಸ್‌ನಲ್ಲಿ ಖರ್ಗೆ ಅವರಿಗೆ ಮಾಡಿದ ಅನ್ಯಾಯವಲ್ಲವೇ? ಅಮಿತ್ ಶಾ ಅಂಬೇಡ್ಕರ ಅವರಿಗೆ ಒಂದು ಶಬ್ದ ಅಂದಿದ್ದಕ್ಕೆ ದೇಶಾದ್ಯಂತ 70 ದಲಿತ ಸಂಘಟನೆಗಳೆಲ್ಲ ಸೇರಿ ಹೋರಾಟ ಮಾಡಿದಿರಿ. ಅದೇ ಕಾಂಗ್ರೆಸ್ ಖರ್ಗೆಗೆ ಅನ್ಯಾಯ ಮಾಡಿದರೆ ಯಾಕೆ ಸುಮ್ಮನೆ ಕುಳಿತಿದ್ದೀರಿ? ಈಗ ಅವರ ವಿರುದ್ಧ ಹೋರಾಟ ಮಾಡುವುದಿಲ್ಲವೇ ಎಂದು ದಲಿತ ಸಮುದಾಯವನ್ನು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಪ್ರತಾಪಗೌಡ ಪಾಟೀಲ, ಬಳ್ಳಾರಿ ಹನುಮಂತಪ್ಪ, ರಾಮಣ್ಣ ಬನ್ನಹುಣ್ಸೆ, ಸೋಮನಗೌಡ ಪಾಟೀಲ ಸಾಸನೂರ, ವಿಜುಗೌಡ ಪಾಟೀಲ, ಸಂಜೀವ ಐಹೊಳ್ಳಿ, ಕಾಸುಗೌಡ ಬಿರಾದಾರ, ವಿಜಯ ಜೋಶಿ ಉಪಸ್ಥಿತರಿದ್ದರು.
ಕೋಟ್....
- ರಮೇಶ ಜಿಗಜಿಣಗಿ, ಸಂಸದ