ಹಸಿರೀಕರಣದ ನೆಪಕ್ಕೆ ಅರಣ್ಯ ಇಲಾಖೆಯಿಂದ ಕೋಟ್ಯಾಂತರ ಹಣ ಅಪವ್ಯಯ : ರೈತ ಸಂಘ ಆರೋಪ

KannadaprabhaNewsNetwork |  
Published : Sep 28, 2024, 01:33 AM ISTUpdated : Sep 28, 2024, 11:59 AM IST
ಪ್ರತಿಭಟನೆ ನಡೆಸಲಾಯಿತು | Kannada Prabha

ಸಾರಾಂಶ

ಆನಂದಪುರ ಬೆಳಂದೂರು ಗ್ರಾಮದಲ್ಲಿ ಅರಣ್ಯ ಇಲಾಖೆ ಹಸಿರಿಕರಣ ಯೋಜನೆಯಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಸಸಿಗಳನ್ನು ಹಾಳು ಮಾಡಿದೆ ಎಂಬ ಆರೋಪ 

 ಸಾಗರ : ತಾಲ್ಲೂಕಿನ ಆನಂದಪುರ ಬೆಳಂದೂರು ಗ್ರಾಮದ ಸ.ನಂ.35 ರಲ್ಲಿ ಅರಣ್ಯ ಇಲಾಖೆ ಹಸರೀಕರಣ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಸಸಿಗಳನ್ನು ಹಾಳು ಮಾಡಿರುವುದನ್ನು ಖಂಡಿಸಿ ಜಿಲ್ಲಾ ರೈತ ಸಂಘದ (ಡಾ.ಎಚ್.ಗಣಪತಿಯಪ್ಪ ಸ್ಥಾಪಿತ) ವತಿಯಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಎದುರು ಸಸಿಗಳನ್ನು ರಾಶಿ ಹಾಕುವ ಮೂಲಕ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ಅರಣ್ಯ ಇಲಾಖೆ ಹಸರೀಕರಣ ಹೆಸರಿನಲ್ಲಿ ಸರ್ಕಾರದ ಕೋಟ್ಯಾಂತರ ರೂಪಾಯಿ ಹಣವನ್ನು ಅಪವ್ಯಯಗೊಳಿಸಿದೆ. ಸ.ನಂ. ೩೫ರಲ್ಲಿ ಲಕ್ಷಾಂತರ ಗಿಡಗಳನ್ನು ನೆಡದೆ ಕಾಡಿನಲ್ಲಿ ಎಸೆದು ಹೋಗಿದ್ದಾರೆ. ಹಸರೀಕರಣ ಮಾಡಿದ್ದೇವೆ ಎಂದು ಲೆಕ್ಕ ತೋರಿಸುವ ಅರಣ್ಯ ಇಲಾಖೆ ಗಿಡಗಳನ್ನು ಎಸೆ ಯುವ ಮೂಲಕ ಸರ್ಕಾರದ ಹಣ ನಷ್ಟಗೊಳಿಸುವ ಜೊತೆಗೆ ಉತ್ತಮ ಯೋಜನೆಯೊಂದನ್ನು ಹಳ್ಳ ಹಿಡಿಸಿದೆ. ಸಸಿಯನ್ನು ಎಸೆದು ಹೋಗಿರುವ ಕ್ರಮ ಖಂಡನೀಯ. ತಪ್ಪಿತಸ್ತ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ರಾಜ್ಯದಲ್ಲಿ ಅರಣ್ಯ ಇಲಾಖೆಯನ್ನು ಸರಿಯಾಗಿ ನಿಭಾಯಿಸಲು ವಿಫಲವಾಗಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಉಪಾಧ್ಯಕ್ಷ ರಮೇಶ್ ಕೆಳದಿ ಮಾತನಾಡಿ, ಬೆಳಂದೂರು ಗ್ರಾಮದ ಸರ್ವೆ ನಂ. ೩೫ರಲ್ಲಿ ನಡೆದಿರುವುದು ದೊಡ್ಡಮಟ್ಟದ ಭ್ರಷ್ಟಾಚಾರವಾಗಿದೆ. ಈ ಭ್ರಷ್ಟಾಚಾರದಲ್ಲಿ ಸಣ್ಣ ಅಧಿಕಾರಿಯಿಂದ ಹಿಡಿದು ದೊಡ್ಡ ಅಧಿಕಾರಿವರೆಗೂ ಶಾಮೀಲಾ ಗಿರುವ ಶಂಕೆ ಇದೆ. ಇದನ್ನು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ಮಾಡಿ ಪರಿಶೀಲನೆ ನಡೆಸಬೇಕು. ಇಲ್ಲವಾದಲ್ಲಿ ರೈತ ಸಂಘ ಜಿಲ್ಲಾವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಹೊಯ್ಸಳ ಗಣಪತಿಯಪ್ಪ, ಜಗದೀಶ್ ಬೆಳಂದೂರು, ದೇವರಾಜ್, ಸುರೇಶ್, ಶಿವಕುಮಾರ್, ಸಂತೋಷ್, ರಾಮಪ್ಪ ಇನ್ನಿತರರು ಹಾಜರಿದ್ದರು.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು