-ನ್ಯಾಯಾಧೀಶರ ಸಮ್ಮುಖ ರಾಜಿ ಸಂಧಾನದ ಮೂಲಕ ನ್ಯಾಯಾಧೀಶರ ಎದುರು ಒಂದಾದ ದಂಪತಿ
ಕನ್ನಡಪ್ರಭ ವಾರ್ತೆ ಬೀದರ್
ದಂಪತಿ ಚಿಕ್ಕ ಪುಟ್ಟ ವಿಚಾರಗಳಿಗೆ ಪೊಲೀಸ್ ಠಾಣೆ ನ್ಯಾಯಾಲಯಕ್ಕೆ ಅಲೆದಾಡುವ ಬದಲಾಗಿ ಮನೆಯ/ಗ್ರಾಮದ ಹಿರಿಯರ ಮಾತನ್ನು ಕೇಳಿ ನೆಮ್ಮದಿಯಿಂದ ಬದುಕಬೇಕು. ಆಗಲೇ ಸಂಸಾರಕ್ಕೊಂದು ಅರ್ಥ ಬರುತ್ತದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ರಾಜಿ ಸಂಧಾನ ಮಾಡಿಕೊಂಡ ದಂಪತಿ. ಇತರರಿಗೆ ಮಾದರಿಯಾಗುವಲ್ಲಿ ಬದುಕು ಸಾಗಿಸಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಪ್ರಕಾಶ ಅರ್ಜುನ ಬನಸೊಡೆ ಸಲಹೆ ನೀಡಿದರು.ಅವರು ಬೀದರ್ ತಾಲೂಕಿನ ಕುತ್ತಾಬಾದನ ಸುಮ್ಮಯ್ಯಾ ಗಂಡ ತಿಪ್ಪಣ್ಣ ಬೀದರ ಅವರೊಂದಿಗೆ ಸಾಂಪ್ರದಾಯಿಕವಾಗಿ ಮದುವೆ ಆಗಿದ್ದರು. ಸುಮಯ್ಯಾಳು ತನ್ನ ಗಂಡನಿಗೆ ಮತ್ತು ಅತ್ತೆಗೆ ಅವಾಚ್ಯ ಶಬ್ದಗಳಿಂದ ಬೈಯುವುದು, ಹೊಡೆಯುವುದು ಮಾಡುತ್ತಾರೆ ಎಂದು ಅತ್ತೆಯಾದ ಚಂದ್ರಮ್ಮ ಅವರು ಮಹಿಳಾ ಪೊಲೀಸ್ ಠಾಣೆಗೆ ಹಾಜರಾಗಿ ದೂರನ್ನು ನೀಡಿದರು.
ಮಹಿಳಾ ಪೊಲೀಸ್ ಠಾಣೆಯಿಂದ ರಾಜಿ ಸಂದಾನಕ್ಕಾಗಿ ಎರಡು ಅರ್ಜಿಯನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಕಳುಹಿಸಲಾಗಿತ್ತು. ನಂತರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಎರಡು ಅರ್ಜಿಗೆ ಸಂಬಂಧಿಸಿದವರನ್ನು ಪ್ರಾಧಿಕಾರಕ್ಕೆ ಕರೆಯಸಿ ಅವರ ಕೌಟುಂಬಿಕ ಸಮಸ್ಯೆ ಆಲಿಸಿ, ಗಂಡನನ್ನು ಬುದ್ಧಿ ಮಾತು ಹೇಳಿ ಒಂದಾಗುವುದು ಮುಖ್ಯ. ಕಾನೂನಾತ್ಮಕ ವಿಚಾರಗಳನ್ನು ತಿಳಿಸಿ ಮನಪರಿವರ್ತನೆಗೊಳಿಸಿ ಸೆ. 27 ರಂದು ದಂಪತಿಗಳಿಬ್ಬರನ್ನು ರಾಜಿ ಸಂಧಾನದ ಮೂಲಕ ಒಂದುಗೂಡಿಸಿ ಸಿಹಿ ಹಂಚಿ ದಂಪತಿಯನ್ನು ಒಂದು ಮಾಡಿದ್ದಾರೆ.
ಇಬ್ಬರು ದಂಪತಿ ಸಂಬಂಧಿಕರು ಸೇರಿದಂತೆ ಪ್ರಾಧಿಕಾರದ ಸಿಬ್ಬಂದಿ ಜಗದೀಶ್ವರ ದೊರೆ, ಆಕಾಶ ಸಜ್ಜನ, ನಾಗರಾಜ, ಪ್ರೀತಿ, ಜೀವನ ಮತ್ತು ಯೋಹನ ಕಾಳೆ, ಈರಮ್ಮ ಇತರರು ಉಪಸ್ಥಿತರಿದ್ದರು.
--ಚಿತ್ರ 27ಬಿಡಿಆರ್50