ಕಲಘಟಗಿ:
ತಾಲೂಕಿನ ಮಿಶ್ರಿಕೋಟಿ ಗ್ರಾಮದ ಹೊರವಲಯದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನವು ಹಲವು ವರ್ಷಗಳಿಂದ ನಿರ್ವಹಣೆ ಇಲ್ಲದೇ ಸುತ್ತಮುತ್ತಲೂ ಗಿಡ, ಕಂಟಿ ಬೆಳೆದು ಸಂಪೂರ್ಣ ಹಾಳಾಗಿತ್ತು. ಇದನ್ನು ಗಮನಿಸಿದ ರಾಯಲ್ ಫಿಟ್ನೆಸ್ ಜಿಮ್‌ನ ಯುವ ಪಡೆ ಬುಧವಾರ ದೇವಸ್ಥಾನದ ಸುತ್ತಲೂ ಬೆಳೆದ ಗಿಡ-ಗಂಟಿ ತೆರವುಗೊಳಿಸಿದರು. ಬಳಿಕ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ದೇವಸ್ಥಾನಕ್ಕೆ ಮೊದಲಿನ ರೂಪ ತಂದರು. ಇವರ ಈ ಸ್ವಚ್ಛತಾ ಕಾರ್ಯವು ಗ್ರಾಮಸ್ಥರ ಮೆಚ್ಚುಗೆಗೆ ಕಾರಣವಾಯಿತು.
ಈ ವೇಳೆ ರಾಮಚಂದ್ರ ಕುಳೆನವರ, ಶಿವು ಅಗಸಿಮನಿ, ವಿನಾಯಕ ಜಾಧವ, ರವಿ ನಾಯ್ಕರ್, ಮಾಲತೇಶ ವಾಸ್ಕರ್, ಈರಣ್ಣ, ಶಿವು ತಾಳಿಕೋಟಿ, ಸಿದ್ದು ಮೂಲಿಮನಿ, ಸಮರ್ಥ ಹುನಗುಂಡಿ ಹಾಗೂ ಪರಿಶ್ರಮ ಫೌಂಡೇಶನ್ ಅಧ್ಯಕ್ಷ ಅಶೋಕ ಹೊಸಮನಿ ಸೇರಿದಂತೆ ಹಲವರಿದ್ದರು.