ತಪ್ಪಾದ ಮಹಜರ್ ಪ್ರಕ್ರಿಯೆ: ಲಿಖಿತ ಸ್ಪಷ್ಟೀಕರಣಕ್ಕೆ ಆಗ್ರಹ

KannadaprabhaNewsNetwork |  
Published : May 21, 2026, 02:45 AM IST
ಫೊಟೊಪೈಲ್- 20ಎಸ್ಡಿಪಿ2- ಸಿದ್ದಾಪುರದಲ್ಲಿ      ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ವತಿಯಿಂದ ಅಧಿಕಾರಿಗಳ ಜೊತೆ ಚರ್ಚಿಸಲಾಯಿತು. | Kannada Prabha

ಸಾರಾಂಶ

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಹೋರಾಟಗಾರರ ನಿಯೋಗವು ಸರಕಾರದ ಆದೇಶಕ್ಕೆ ಅಧಿಕಾರಿಗಳಿಂದ ನಿರ್ಲಕ್ಷ ಎಂದು ಆಕ್ಷೇಪಿಸಿ, ತಪ್ಪಾದ ಮಹಜರ್ ಪ್ರಕ್ರಿಯೆ ಕುರಿತು ಸ್ಪಷ್ಟೀಕರಣಕ್ಕೆ ಆಗ್ರಹಿಸಿ ತಾಲೂಕಾ ದಂಡಾಧಿಕಾರಿಗೆ ಮನವಿ ಸಲ್ಲಿಸಿತು. ಬಳಿಕ ಈ ಕುರಿತು ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಸಿದ್ದಾಪುರಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಹೋರಾಟಗಾರರ ನಿಯೋಗವು ಸರಕಾರದ ಆದೇಶಕ್ಕೆ ಅಧಿಕಾರಿಗಳಿಂದ ನಿರ್ಲಕ್ಷ ಎಂದು ಆಕ್ಷೇಪಿಸಿ, ತಪ್ಪಾದ ಮಹಜರ್ ಪ್ರಕ್ರಿಯೆ ಕುರಿತು ಸ್ಪಷ್ಟೀಕರಣಕ್ಕೆ ಆಗ್ರಹಿಸಿ ತಾಲೂಕಾ ದಂಡಾಧಿಕಾರಿಗೆ ಮನವಿ ಸಲ್ಲಿಸಿತು. ಬಳಿಕ ಈ ಕುರಿತು ಸಭೆ ನಡೆಯಿತು.ಅರಣ್ಯವಾಸಿಗಳಿಗೆ ನೋಟೀಸ್ ನೀಡದೇ ಇರುವುದು, ಮಹಜರ್ ಸಂದರ್ಭದಲ್ಲಿ ಅವಶ್ಯ ಅಧಿಕಾರ ವರ್ಗದವರ ಅನುಪಸ್ಥಿತಿ, ಜಂಟಿ ಮಹಜರ್ ಪ್ರಕ್ರಿಯೆಯಲ್ಲಿ ತಿರಸ್ಕರಿಸಿದ ಎಲ್ಲಾ ಅರ್ಜಿಗೆ ಸಂಬಂಧಿಸಿ ಮಹಜರ್ ಪ್ರಕ್ರಿಯೆ ಅಳವಡಿಸದೇ ಇರುವುದು, ಅರ್ಜಿದಾರರ ಅನುಪಸ್ಥಿತಿಯಲ್ಲಿ ಮಹಜರ್ ಜರುಗಿಸುವುದು, ಪ್ರಿಂಟೆಡ್ ಮಹಜರ್ ದಾಖಲೆಯೊಂದಿಗೆ ಯಾಂತ್ರಿಕವಾಗಿ ಮಹಜರ್ ಪ್ರಕ್ರಿಯೆ ಜರುಗಿಸುವುದು, ಮೂಲ ಅರ್ಜಿಯಲ್ಲಿ ದಾಖಲಿಸಿದ ಸಾಗುವಳಿ ಕ್ಷೇತ್ರ ಮಹಜರ್‌ನಲ್ಲಿ ಉಲ್ಲೇಖಿಸದೇ, ಜಿಪಿಎಸ್‌ನಲ್ಲಿ ಪ್ರಸ್ತಾಪಿಸಿದ ಕ್ಷೇತ್ರದ ವ್ಯಾಪ್ತಿಯನ್ನು ಗಣನೆಗೆ ತೆಗೆದುಕೊಳ್ಳುವುದು ಮುಂತಾದ ನ್ಯೂನ್ಯತೆಗಳನ್ನ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯ ಸರ್ಕಾರವು ಮಹಜರ್ ದಾಖಲೆಯಾಗಿ ಪರಿಗಣಿಸಬೇಕೆಂದು ಅಧಿಕಾರಿಗಳ ತಂಡದಿಂದ ಮಹಜರ್ ಪ್ರಕ್ರಿಯೆಗೆ ಅವಕಾಶ ನೀಡಿದರೂ ಅಧಿಕಾರಿ ವರ್ಗದ ತಪ್ಪಾದ ಕಾರ್ಯದಿಂದ ದೇವರು ಕೊಟ್ಟರೂ, ಪೂಜಾರಿ ಕೊಡಂಗಿಲ್ಲ ಎನ್ನುವಂತಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.ತಾಲೂಕಿನಲ್ಲಿ ತಿರಸ್ಕರಿಸಲ್ಪಟ್ಟ ಅರ್ಜಿಗಳಲ್ಲಿ ೮,೩೩೧ ಅತಿಕ್ರಮಣದಾರರ ಕ್ಷೇತ್ರದಲ್ಲಿ ೮,೩೩೧ ಮಹಜರ್ ಪ್ರಕರಣ ಮುಗಿದಿದ್ದು ಇನ್ನುಳಿದ ೧,೯೭೩ ಕ್ಷೇತ್ರದ ಮಹಜರ್ ಮಾಡಬೇಕಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಿವರಾಯಪ್ಪ ಮಾಹಿತಿ ನೀಡಿದರು.ರಾಜ್ಯ ಸರ್ಕಾರದ ನೀತಿಗೆ ವ್ಯತಿರಿಕ್ತವಾಗಿ ಜರುಗುತ್ತಿರುವ ಅರಣ್ಯವಾಸಿಗಳ ಜಂಟಿ ಮಹಜರ್ ಪ್ರಕ್ರಿಯೆಯ ನ್ಯೂನ್ಯತೆಯ ಕುರಿತು ಅರಣ್ಯವಾಸಿಗಳ ನಿಯೋಗವು ಮನವಿ ನೀಡಿ ಚರ್ಚಿಸಿದ ಹಿನ್ನೆಲೆ ಮಹಜರ್ ಸಮಸ್ಯೆಗಳ ಕುರಿತು ಶೀಘ್ರ ಜಿಲ್ಲಾಡಳಿತದ ಗಮನಕ್ಕೆ ತರಲಾಗುವುದು ಎಂದು ತಹಶೀಲ್ದಾರ್ ಎಂ.ಆರ್. ಕುಲಕರ್ಣಿ ತಿಳಿಸಿದರು.ತಾಲೂಕು ಸಮಿತಿ ಸಂಚಾಲಕ ಮಾಬ್ಲೇಶ್ವರ್ ನಾಯ್ಕ ಬೇಡ್ಕಣಿ ಪ್ರಾಸ್ತಾವಿಕ ಮಾತನಾಡಿದರು. ಕೆ.ಟಿ. ನಾಯ್ಕ ಕ್ಯಾದಗಿ ಸ್ವಾಗತಿಸಿದರು. ಗ್ರೀನ್ ಕಾರ್ಡ ಪ್ರಮುಖರಾದ ನಾಗಪತಿ ಗೌಡ ಹುತ್ಗಾರ್, ಮಂಜುನಾಥ ಮಡಿವಾಳ ಕಿಲಾರ, ರಾಜು ನಾಯ್ಕ ಕಿರೇಕೋಡ, ದಿವಾಕರ ನಾಯ್ಕ ಬಾಳೇಜಡ್ಡಿ, ಮಂಜು ಹುತ್ಗಾರ್, ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ಶಿವಾನಂದ ಹೊಸೂರು, ಶ್ರೀಧರ್ ಹೆಗಡೆ ಮಾತನಾಡಿದರು. ಸಿಪಿಐ ಸೀತಾರಾಮ, ಡಿ.ಆರ್.ಎಫ್‌.ಓ. ಮಂಜುನಾಥ ಚನ್ನಣ್ಣವರ್ ಉಪಸ್ಥಿತರಿದ್ದರು.

15 ದಿನದಲ್ಲಿ ಲಿಖಿತ ಸ್ಪಷ್ಟೀಕರಣ ನೀಡಬೇಕು:

ಮಹಜರ್ ಪ್ರಕ್ರಿಯೆಯಲ್ಲಿ ಆಗಿರುವ ಲೋಪಗಳಿಗೆ ಕುರಿತಂತೆ 15 ದಿನದಲ್ಲಿ ಲಿಖಿತವಾದ ಸ್ಪಷ್ಟೀಕರಣವನ್ನು ಜಿಲ್ಲಾಡಳಿತ ನೀಡಬೇಕು. ಇಲ್ಲವಾದರೆ ಅರಣ್ಯವಾಸಿಗಳಿಗೆ ಆಗುತ್ತಿರುವ ಅನ್ಯಾಯ ಪ್ರತಿಭಟಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟಿಸುತ್ತೇವೆ. ಜಿಲ್ಲಾ ಜನಪ್ರತಿನಿಧಿಗಳ ಗಮನಕ್ಕೆ ತಂದು ಮುಖ್ಯಮಂತ್ರಿಯವರ ಎದುರು ಕೂಡ ಪ್ರತಿಭಟನೆ ನಡೆಸುತ್ತೇವೆ ಎಂದು ರವೀಂದ್ರ ನಾಯ್ಕಎಚ್ಚರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಕಲಿ ಜಾತಿ ಪ್ರಮಾಣಪತ್ರ ಪ್ರಕರಣ: ಪ್ರತಿಭಟನೆ
ಆಟ್ ಪಾಟ್ ಶಿಬಿರ ಕೊಡವ ಸಂಸ್ಕೃತಿ ಪ್ರತೀಕ: ಮಹೇಶ್ ನಾಚಯ್ಯ