ಬೀಳಗಿ: ಕೃತಕ ಬುದ್ದಿಮತ್ತೆ (ಎ.ಐ.) ಬಳಕೆಯ ಮಾರ್ಗದರ್ಶನ ಮತ್ತು ಆಧುನಿಕ ಕೃಷಿ ಪದ್ಧತಿಯ ಅನುಕರಣೆ ಹಾಗೂ ಕಬ್ಬು ಬೆಳೆಯುವಲ್ಲಿ ಹೆಚ್ಚಿನ ಇಳುವರಿ ಪಡೆಯುವಲ್ಲಿ ಎ.ಐ ತಂತ್ರಜ್ಞಾನ ಅಳವಡಿಕೆ ಹಾಗೂ ಅನುಷ್ಠಾನದ ಕುರಿತು ಮಾರ್ಗದರ್ಶನ ಕಾರ್ಯಾಗಾರವನ್ನು ಮುಧೋಳದ ನಿರಾಣಿ ಶುಗರ್ಸ್ ವತಿಯಿಂದ ಆಯೋಜಿಸಲಾಗಿದೆ ಎಂದು ನಿರಾಣಿ ಶುಗರ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ಆರ್.ನಿರಾಣಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಸೋಮವಾರ ಬೆಳಗ್ಗೆ 11 ಗಂಟೆಗೆ ಕೋಲೂರು ಗ್ರಾಮದ ಕುಮಾರೇಶ್ವರ ದೇವಸ್ಥಾನದಲ್ಲಿ ಹಾಗೂ ಮಧ್ಯಾಹ್ನ 3ಗಂಟೆಗೆ ಗಿರಿಸಾಗರ ಗ್ರಾಮದ ಕಲ್ಯಾಣ ಹಿರೇಮಠದ ಆವರಣದಲ್ಲಿ ಕಾರ್ಯಾಗಾರ ನಡೆಯಲಿದೆ.2 ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಉದ್ಘಾಟನೆಯನ್ನು ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಡಾ,ಮುರುಗೇಶ ನಿರಾಣಿ ವಹಿಸಲಿದ್ದು, ಹಿರಿಯ ಕೃಷಿ ವಿಜ್ಞಾನಿಗಳು, ಧಾರವಾಡ ಕೃಷಿ ವಿ.ವಿ ಡಾ. ಸುನೀಲಕುಮಾರ ನೂಲಿ, ಐ.ಸಿ.ಎ.ಆರ್- ಕೆ.ಎಲ್.ಇ. ಕೆ.ವಿ.ಕೆ. ಮುಖ್ಯಸ್ಥ ಡಾ.ಮಂಜುನಾಥ ಚೌರಡ್ಡಿ, ಮ್ಯಾಪ್ ಮೈ ಕ್ರಾಪ್ ನ ವ್ಯವಸ್ಥಾಪಕ ಹೃಷಿಕೇಶ ರಾಠೋಡ್, ನಿರಾಣಿ ಶುಗರ್ಸ್ ಕಬ್ಬು ವಿಭಾಗದ ಡಿಜಿಎಂ ಡಾ.ಸಂಜಯ ಯಲಶೆಟ್ಟಿ ಕಾರ್ಯಾಗಾರದಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ.