ಸಂಘದ ಹಣ ದುರುಪಯೋಗ: ಕಚೇರಿಗೆ ಮಹಿಳೆಯರ ಮುತ್ತಿಗೆ

KannadaprabhaNewsNetwork |  
Published : Jul 14, 2026, 04:15 AM IST
13ವ್ದವ್ವದ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೀಳಗಿಪಟ್ಟಣದ ದುರ್ಗಾದೇವಿ ಮಹಿಳಾ ಗ್ರಾಮೀಣಾಭಿವೃದ್ಧಿ ಸಂಘದಿಂದ ಕೋಟ್ಯಂತರ ಹಣದ ದುರುಪಯೋಗವಾಗಿದೆಂದು ಆರೋಪಿಸಿ ನೂರಾರು ಮಹಿಳೆಯರು ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ಸೋಮವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಬೀಳಗಿ

ಪಟ್ಟಣದ ದುರ್ಗಾದೇವಿ ಮಹಿಳಾ ಗ್ರಾಮೀಣಾಭಿವೃದ್ಧಿ ಸಂಘದಿಂದ ಕೋಟ್ಯಂತರ ಹಣದ ದುರುಪಯೋಗವಾಗಿದೆಂದು ಆರೋಪಿಸಿ ನೂರಾರು ಮಹಿಳೆಯರು ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ಸೋಮವಾರ ನಡೆಯಿತು.

ತಾಲೂಕಿನ ಕುಂದರಗಿ, ಸೊನ್ನ, ಸುನಗ, ಬೀಳಗಿ ಮುಂತಾದ ಗ್ರಾಮಗಳಿಂದ ಮಹಿಳೆಯರು ದುರ್ಗಾದೇವಿ ಮಹಿಳಾ ಗ್ರಾಮೀಣಾಭಿವೃದ್ಧಿ ಸಂಘದ ಕಾರ್ಯಾಲಯಕ್ಕೆ ಆಗಮಿಸಿ 3 ವರ್ಷಗಳಿಂದ ಪ್ರತಿ ವಾರ ತುಂಬಿದ ಹಣ ವಾಪಸ್‌ ನೀಡುವಂತೆ ಕೇಳಿದಾಗ ಸಂಘದ ಮುಖ್ಯಸ್ಥರಾದ ವಿದ್ಯಾ ಹಳ್ಳೂರ, ಅರ್ಚನಾ ಭಂಟನೂರ ಆಗಸ್ಟ್ 15ಕ್ಕೆ ನೀಡುವುದಾಗಿ ತಿಳಿಸಿದ್ದಾರೆ. ಇದ್ದಕೆ ಒಪ್ಪದ ಮಹಿಳೆಯರು ನಾವು ಪ್ರತಿವಾರ ತುಂಬಿದ ಹಣ 3 ವರ್ಷಕ್ಕೆ ವಾಪಸ್ ಕೊಡಬೇಕಾಗಿತ್ತು. ಆದರೆ, ನಾಲ್ಕುವರೆ ವರ್ಷವಾದರೂ ಇನ್ನೂ ಕೊಡುತ್ತಿಲ್ಲ. ಕೆಲವೊಬ್ಬರಿಗೆ ಚೆಕ್ ಗಳನ್ನು ನೀಡಿದ್ದು ಅವುಗಳು ಸಹ ಬೋಗಸ್ಸಾಗಿವೆ. ಹೀಗಾಗಿ ಇವರ ಮೇಲೆ ಕಾನೂನು ಕ್ರಮ ಕೈಗೊಂಡು ನಮ್ಮ ಹಣ ವಾಪಸ್ ಕೊಡಿಸುವ ಮೂಲಕ ನ್ಯಾಯ ಒದಗಿಸಬೇಕೆಂದು ಪೊಲೀಸ್ ಠಾಣೆಗೆ ಆಗಮಿಸಿದ ಮಹಿಳೆಯರು ಸಿಪಿಐ ಹಣಮಂತ ಸಣಮನಿ ಅವರಿಗೆ ಮನವಿ ಮಾಡಿದರು.

ಮಹಿಳೆಯರ ಮನವಿ ಆಲಿಸಿದ ಸಿಪಿಐ ಸಣಮನಿ ಹಾಗೂ ಡಿವೈಎಸ್ಪಿ ಗಜಾನನ ಸುತಾರ, ದುರ್ಗಾದೇವಿ ಮಹಿಳಾ ಸಂಘದ ಮುಖ್ಯಸ್ಥರಾದ ವಿದ್ಯಾ ಹಳ್ಳೂರ, ಅರ್ಚನಾ ಭಂಟನೂರ ಅವರೊಂದಿಗೆ ಮಾತನಾಡಿ ಮಾಹಿತಿಯನ್ನು ಕಲೆ ಹಾಕಿದರು.

ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿ ಈ ಪ್ರಕರಣದ ಕುರಿತು ಸಮಗ್ರವಾಗಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಐ ಹನಮಂತ ಸಣಮನಿ ತಿಳಿಸಿದ್ದಾರೆ.

ವಿವಿಧೆಡೆಯಲ್ಲಿವೆ ಅಂಗ ಸಂಸ್ಥೆಗಳ

ದುರ್ಗಾದೇವಿ ಮಹಿಳಾ ಗ್ರಾಮೀಣಾಭಿವೃದ್ಧಿ ಸಂಘವು 2021-22 ಪ್ರಾರಂಭವಾಗಿದ್ದು, ಬಾಗಲಕೋಟೆ, ಬೆಳಗಾವಿ, ಗದಗ, ಮುಧೋಳ, ಬಾದಾಮಿ, ಕೆರೂರ ಹಾಗೂ ಜಮಖಂಡಿ ಮುಂತಾದ ಕಡೆಗಳಲ್ಲಿ ಅಂಗ ಸಂಸ್ಥೆಗಳನ್ನು ಹೊಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಂಥನಾಳ–ಲಚ್ಯಾಣ ಪೀಠದ ಉತ್ತರಾಧಿಕಾರಿ ಆಯ್ಕೆಗೆ ಭಕ್ತರ ಸಭೆ
ಬಿಸಿಯೂಟ ಸೇವಿಸಿ 12 ಮಕ್ಕಳು ಅಸ್ವಸ್ಥ