ಗಡಿನಾಡ ಶಾಲೆಯಲ್ಲಿ ಸರ್ಕಾರಿ ಸೌಲಭ್ಯ ದುರ್ಬಳಕೆ

KannadaprabhaNewsNetwork |  
Published : Nov 28, 2025, 03:15 AM IST
ಕರವೇ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ನಿಪ್ಪಾಣಿ ಗಡಿಭಾಗ ನಿಪ್ಪಾಣಿಯಲ್ಲಿರುವ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಮೊದಲೇ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದೆ. ಅದರ ಮಧ್ಯದಲ್ಲಿಯೇ ಶಾಲೆಯಲ್ಲಿ ಮಕ್ಕಳಿಗೆ ನೀಡುವ ಆಹಾರ ಮತ್ತು ಹಾಲಿನ ಪಾಕೇಟ್‌ಗಳು ದುರ್ಬಳಕೆಯಾಗುತ್ತಿರುವುದು ಕಂಡು ಬಂದಿದೆ. ಗಡಿ ಭಾಗದಲ್ಲಿ ಕನ್ನಡ ಶಾಲೆಗಳನ್ನು ಬೆಳೆಸಲು ಸರ್ಕಾರ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ. ಆದರೆ, ಅವು ಮಕ್ಕಳಿಗೆ ಸಿಗದೇ ಧನದಾಹಿಗಳ ಪಾಲಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದ್ದು, ಇಲ್ಲಿ ದೇವರು ವರ ಕೊಟ್ಟರು ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ.

ಅಶ್ವಿನ ಅಮ್ಮಣಗಿ

ಕನ್ನಡಪ್ರಭ ವಾರ್ತೆ ನಿಪ್ಪಾಣಿ

ಗಡಿಭಾಗ ನಿಪ್ಪಾಣಿಯಲ್ಲಿರುವ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಮೊದಲೇ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದೆ. ಅದರ ಮಧ್ಯದಲ್ಲಿಯೇ ಶಾಲೆಯಲ್ಲಿ ಮಕ್ಕಳಿಗೆ ನೀಡುವ ಆಹಾರ ಮತ್ತು ಹಾಲಿನ ಪಾಕೇಟ್‌ಗಳು ದುರ್ಬಳಕೆಯಾಗುತ್ತಿರುವುದು ಕಂಡು ಬಂದಿದೆ. ಗಡಿ ಭಾಗದಲ್ಲಿ ಕನ್ನಡ ಶಾಲೆಗಳನ್ನು ಬೆಳೆಸಲು ಸರ್ಕಾರ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ. ಆದರೆ, ಅವು ಮಕ್ಕಳಿಗೆ ಸಿಗದೇ ಧನದಾಹಿಗಳ ಪಾಲಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದ್ದು, ಇಲ್ಲಿ ದೇವರು ವರ ಕೊಟ್ಟರು ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ.

ನಗರದ ಕೆಎಚ್ ಪಿಎಸ್ ನಂಬರ್ 3 ಶಾಲೆಯಲ್ಲಿ ಮಕ್ಕಳಿಗೆ ಸರ್ಕಾರ ನೀಡುವ ಸೌಲಭ್ಯಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಮುಖ್ಯವಾಗಿ ಮಕ್ಕಳಿಗೆ ನೀಢುವ ಹಾಲಿನ ಪ್ಯಾಕೇಟ್‌ಗಳನ್ನು ಹೆಣ್ಣುಮಕ್ಕಳ ಟಾಯ್ಲೆಟ್‌ನಲ್ಲಿ ಬಚ್ಚಿಡಲಾಗುತ್ತಿದೆ. ಅಲ್ಲದೇ, ಈ ಆಹಾರ ಪದಾರ್ಥಗಳನ್ನು ಶಾಲೆಯ ಹಿಂದಿನ ಎತ್ತರ ಗೋಡೆಯಿಂದ ಏಣಿಯ ಮೂಲಕ ದಾಟಿಸಿ ಚಿಕ್ಕ ಮಕ್ಕಳ ಸಹಾಯದಿಂದಲೇ ಶಾಲೆಯ ಹಿಂಬದಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರಲ್ಲಿ ಬಚ್ಚಿಡಲಾಗುತ್ತಿದೆ. ಬಳಿಕ ಅವುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಹೊರ ಬಿದ್ದಿದ್ದು, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಈ ಕೃತ್ಯವನ್ನು ಬಯಲಿಗೆಳೆದಿದ್ದಾರೆ. ಈ ಕೃತ್ಯದ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಪಕಿ ಮೇಲೆಯೇ ಹಲವಾರು ಆರೋಪ ಕೇಳಿ ಬಂದಿದ್ದು, ಮುಖ್ಯೋಪಾಧ್ಯಯೆ ಸೇರಿದಂತೆ ಶಿಕ್ಷಕರ ವಿರುದ್ಧ ಕ್ರಮಕೈಗೊಳ್ಳುವಂತೆ ಕರವೇ ತಾಲೂಕು ಅಧ್ಯಕ್ಷ ಕಪಿಲ ಕಮತೆ ಒತ್ತಾಯಿಸಿದ್ದಾರೆ.ಮಕ್ಕಳ ಧಾನ್ಯ ಇಲಿ, ಹಲ್ಲಿಗಳ ಪಾಲು

ಶಾಲೆಗಳಲ್ಲಿ ಅಡುಗೆ ಮಾಡಲು ಶೇಖರಿಸಿಟ್ಟ ಅಕ್ಕಿ, ಬೇಳೆ, ಗೋಧಿ ಎಲ್ಲದರಲ್ಲಿ ಇಲಿ ಹಿಕ್ಕೆಗಳು ತುಂಬಿಕೊಂಡಿವೆ. ಬಡ ಮಕ್ಕಳ ಆರೋಗ್ಯ ಹಾಗೂ ಸ್ವಚ್ಛತೆಯ ಬಗ್ಗೆ ಯಾವುದೇ ಗಮನ ಹರಿಸದೆ ಬೇಕಾಬಿಟ್ಟಿಯಾಗಿ ಮಕ್ಕಳಿಗೆ ಆಹಾರ ನೀಡುತ್ತಿರುವುದು ವಿಪರ್ಯಾಸದ ಸಂಗತಿ.

ಭೇಟಿ ನೀಡದ ಅಧಿಕಾರಿಗಳು:

ಶನಿವಾರ ಬೆಳಗ್ಗೆಯೇ ಈ ಕೃತ್ಯ ಬೆಳಕಿಗೆ ಬಂದರೂ ಸೋಮವಾರದವರೆಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ.ಬಿಇಒ ಪರಿಶೀಲನೆ ಭರವಸೆ:

ಇನ್ನು, ಸೋಮವಾರ ಶಾಲೆಗೆ ಭೇಟಿ ನೀಡಿದ್ದ ಬಿಇಒ ಮಹಾದೇವಿ ನಾಯಿಕ ಅವರು ಸ್ಥಳದಲ್ಲಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಮಾತನಾಡಿ, ಘಟನೆಯ ಬಗ್ಗೆ ಸೂಕ್ತ ಮಾಹಿತಿ ತೆಗೆದುಕೊಂಡು, ಮುಂದಿನ ಕ್ರಮಕ್ಕಾಗಿ ಡಿಡಿಪಿಐ ಅವರಿಗೆ ವರದಿ ನೀಡುತ್ತೇನೆ ಎಂದು ತಿಳಿಸಿದರು.ಸೂಕ್ತ ತನಿಖೆಗೆ ಒತ್ತಾಯ:

ಈ ಶಾಲೆಯಲ್ಲಿ ಬೆಳಕಿಗೆ ಬಂದಿದ್ದು ಒಂದೇ ಅವ್ಯವಹಾರ. ಇನ್ನಷ್ಟು ಅವ್ಯವಹಾರಗಳು ಈ ಶಾಲೆಯಲ್ಲಿ ನಡೆದಿವೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಇದರಲ್ಲಿ ಬೇರೆಯವರ ಕೈವಾಡ ಇದ್ದಂತೆ ಕಾಣುತ್ತಿದೆ. ಮಕ್ಕಳಿಗೆ ನೀಡುವ ಅಕ್ಕಿ, ಬೇಳೆ, ಗೋಧಿ, ಮೊಟ್ಟೆ, ಹಾಲಿನ ಪಾಕೆಟ್‌ಗಳು ಬೇರೆ ಕಡೆಗೆ ಪೂರೈಕೆ ಮಾಡಲಾಗುತ್ತಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಇದರಲ್ಲಿ ಶಾಲೆಯ ಮುಖ್ಯೋಪಾಧ್ಯಾಪಕಿ ಹೆಸರು ಕೇಳಿ ಬರುತ್ತಿದ್ದರಿಂದ ಅವರನ್ನು ಕೂಡಲೇ ಕೆಲಸದಿಂದ ವಜಾಗೊಳಿಸಬೇಕು. ಇಲ್ಲವಾದರೆ ಮುಂದೆ ಶಾಲೆಯ ಎದುರುಗಡೆ ಉಗ್ರ ಹೋರಾಟ ಮಾಡುವುದಾಗಿ ಕರವೇ ಪದಾಧಿಕಾರಿಗಳು ಎಚ್ಚರಿಕೆ ನೀಡಿದರು.ಈ ಕನ್ನಡ ಶಾಲೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಶಾಲೆಗೆ ಭೇಟಿ ನೀಡಿದ ನಂತರ ಪರಿಶೀಲಿಸಿದಾ ಹೆಣ್ಣು ಮಕ್ಕಳ ಟಾಯ್ಲೆಟ್ ನಲ್ಲಿ ಬಚ್ಚಿಡಲಾಗಿದ್ದ ಮೂರು ಹಾಲಿನ ಪ್ಯಾಕೆಟ್‌ಗಳಿದ್ದ ಚೀಲಗಳು ಪತ್ತೆಯಾಗಿವೆ. ಶಿಕ್ಷಕರು ಮಕ್ಕಳ ಮುಖಾಂತರ ಅವುಗಳನ್ನು ಬೇರೆಡೆ ಸಾಗಿಸುತ್ತಿದ್ದು ಬೆಳಕಿಗೆ ಬಂದಿದೆ. ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಇಂತಹ ಶಿಕ್ಷಕರನ್ನು ಕೂಡಲೇ ಅಮಾನತುಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಖಚಿತ. ಕಪಿಲ ಕಮತೆ, ಕರವೇ ಅಧ್ಯಕ್ಷರು ನಿಪ್ಪಾಣಿಕೋಟ್‌ನಗರದ ಕೆಎಚ್ ಪಿಎಸ್ ನಂಬರ್ 3 ಶಾಲೆಯಲ್ಲಿ ಮಕ್ಕಳಿಗೆ ಸರ್ಕಾರ ನೀಡುವ ಸೌಲಭ್ಯಗಳು ದುರ್ಬಳಕೆಯಾಗುತ್ತಿರುವ ಬಗ್ಗೆ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಮುಖ್ಯೋಪಾಧ್ಯೆಯಯಿಂದ ಸೂಕ್ತ ಮಾಹಿತಿ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಡಿಡಿಪಿಐ ಅವರಿಗೆ ಇದರ ಬಗ್ಗೆ ವರದಿ ನೀಡುತ್ತೇನೆ. ಮಹಾದೇವಿ ನಾಯಿಕ, ಬಿಇಒ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ರಾಜಕಾರಣಕ್ಕೆ ಎಚ್‌ಡಿಕೆ ಪರೋಕ್ಷ ಇಂಗಿತ
ಜೈಲಿನ ಬ್ಯಾರಕ್‌ಗಳಿಗೆ ಸಿಸಿಟಿವಿ ಕ್ಯಾಮೆರಾ!