ರಾಜ್ಯ ಸರ್ಕಾರದ ಎನ್ಎಐಎನ್ 2.0ಗೆ ಎಂಐಟಿಕೆ ಆಯ್ಕೆ

KannadaprabhaNewsNetwork |  
Published : May 12, 2026, 03:00 AM IST
ರಾಜ್ಯ ಸರ್ಕಾರದ ಎನ್ಎಐಎನ್ 2.0 ಯೋಜನೆಗೆ ಎಂಐಟಿಕೆ ಆಯ್ಕೆ ಆಗಿದೆ | Kannada Prabha

ಸಾರಾಂಶ

ಇಲ್ಲಿನ ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಎಂಐಟಿಕೆ)ಯು ರಾಜ್ಯ ಸರ್ಕಾರದ ಪ್ರತಿಷ್ಠಿತ ನ್ಯೂ ಏಜ್ ಇನ್ನೋವೇಶನ್ ನೆಟ್‌ವರ್ಕ್ 2.0 ಗೆ (ಎನ್ಎಐಎನ್ 2.0) ಆಯ್ಕೆಯಾಗಿದ್ದು, ಮೂರು ವರ್ಷಗಳ ಅವಧಿಯಲ್ಲಿ 1.86 ಕೋಟಿ ರು.ಗಳ ಗಮನಾರ್ಹ ಅನುದಾನ ಪಡೆದುಕೊಂಡಿದೆ.

ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಎಂಐಟಿಕೆ)ಯು ರಾಜ್ಯ ಸರ್ಕಾರದ ಪ್ರತಿಷ್ಠಿತ ನ್ಯೂ ಏಜ್ ಇನ್ನೋವೇಶನ್ ನೆಟ್‌ವರ್ಕ್ 2.0 ಗೆ (ಎನ್ಎಐಎನ್ 2.0) ಆಯ್ಕೆಯಾಗಿದ್ದು, ಮೂರು ವರ್ಷಗಳ ಅವಧಿಯಲ್ಲಿ 1.86 ಕೋಟಿ ರು.ಗಳ ಗಮನಾರ್ಹ ಅನುದಾನ ಪಡೆದುಕೊಂಡಿದೆ.ಸಂಸ್ಥೆಯ ಸಂಶೋಧನೆ, ನಾವೀನ್ಯತೆ ಮತ್ತು ಸ್ಟಾರ್ಟ್‌ಅಪ್ ಇನ್‌ಕ್ಯುಬೇಷನ್‌ಗಾಗಿ ಅತ್ಯುತ್ತಮ ಪರಿಸರ, ವ್ಯವಸ್ಥೆಯನ್ನು ಬೆಳೆಸುವತ್ತ ಸಂಸ್ಥೆಯ ಸಾಧನೆಯಲ್ಲಿ ಈ ಮಾನ್ಯತೆ ಒಂದು ಪ್ರಮುಖ ಮೈಲಿಗಲ್ಲಾಗಿದೆ.ಎನ್ಎಐಎನ್ 2.0 ವನ್ನು ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ಕರ್ನಾಟಕ ಇನ್ನೋವೇಶನ್ ಮತ್ತು ತಂತ್ರಜ್ಞಾನ ಸೊಸೈಟಿಯು (ಕೆಐಟಿಎಸ್) ಜಾರಿಗೊಳಿಸುತ್ತದೆ. ಇದಕ್ಕಾಗಿ ಎಂಐಟಿಕೆಯು ಧಾರವಾಡದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥಯ ಯೋಜನಾ ಮೇಲ್ವಿಚಾರಣಾ ಘಟಕ (ಪಿಎಂಯು) ದೊಂದಿಗೆ ಜಂಟಿಯಾಗಿ ಕಾರ್ಯನಿರ್ವಹಿಸುತ್ತದೆ.ವಿದ್ಯಾರ್ಥಿಗಳ ಹೊಸ ರಚನಾತ್ಮಕ ಪ್ರಾಜೆಕ್ಟ್ ಗಳಿಗೆ ಮಾರ್ಗದರ್ಶನ, ಉದ್ಯಮ ಸಂಪರ್ಕ ಮತ್ತು ಅನುಷ್ಠಾನ ಬೆಂಬಲವನ್ನು ಇದು ನೀಡಿ ಕಾಲೇಜಿನಲ್ಲಿಯೇ ಹೊಸ ಅವಿಷ್ಕಾರ ಹೊರಗೆಬರಲು ಇದು ಸಹಾಯ ಮಾಡುತ್ತದೆ. ಈ ಒಂದು ಪ್ರತಿಷ್ಠಿತ ಯೋಜನೆಗೆ ಕರ್ನಾಟಕದ ಕೆಲವೇ ಕೆಲವು ಇಂಜಿನಿಯರಿಂಗ್ ಕಾಲೇಜುಗಳು ಆಯ್ಕೆಯಾಗಿದ್ದು ಎಂಐಟಿ ಕುಂದಾಪುರ ಅವುಗಳಲ್ಲಿ ಒಂದಾಗಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ.

ಇದರಿಂದಾಗಿ ಆಯ್ಕೆಯಾದ ವಿದ್ಯಾರ್ಥಿಗಳ ಪ್ರತೀ ಪ್ರಾಜೆಕ್ಟ್ ಗಳಿಗೆ ಸರಕಾರದಿಂದಲೇ 5 ಲಕ್ಷ ರು. ಅನುದಾನ ಸಿಗುತ್ತದೆ ಮತ್ತು ಉತ್ಕೃಷ್ಟ ಮಟ್ಟದ ಪ್ರಾಜೆಕ್ಟ್ ಮಾಡಲು ಸಹಾಯ ಮಾಡುತ್ತದೆ. ಈಗಾಗಲೇ ಈ ವರ್ಷದಲ್ಲಿ 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದು, ಮುಂದಿನ ಮೂರು ವರ್ಷದಲ್ಲಿ ಸುಮಾರು 120 ವಿದ್ಯಾರ್ಥಿಗಳು ಈ ಒಂದು ಯೋಜನೆಯ ಲಾಭ ಪಡೆಯಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತ ವಿಶ್ವಗುರುವನ್ನಾಗಿ ಮಾಡಲು ಯುವ ಸಮುದಾಯಕ್ಕೆ ಸಾಧ್ಯ
ಮಂಗಳೂರು ಸೆಂಟ್ರಲ್‌, ಜಂಕ್ಷನ್‌ ರೈಲು ನಿಲ್ದಾಣಕ್ಕೆ ರೈಲ್ವೆ ಅಧಿಕಾರಿಗಳ ಭೇಟಿ