ಕಂಬಳದ ಬೆಳವಣಿಗೆಯಲ್ಲಿ ಒಟಗಾರರ ಪಾತ್ರ ಮಹತ್ವ: ಉದಯಕುಮಾರ್ ಶೆಟ್ಟಿ

KannadaprabhaNewsNetwork |  
Published : Sep 18, 2026, 02:45 AM IST
ಉದ್ಘಾಟನೆ | Kannada Prabha

ಸಾರಾಂಶ

ಮಿಯಾರು ಕಂಬಳ ಕ್ರೀಡಾಂಗಣದಲ್ಲಿ ಕಂಬಳ ತರಬೇತಿ ಶಿಬಿರ ಬುಧವಾರ ಉದ್ಘಾಟನೆಗೊಂಡಿತು. ಉದಯಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್‌ನ ಮುನಿಯಾಲು ಉದಯಕುಮಾರ್ ಶೆಟ್ಟಿ ಶಿಬಿರ ಉದ್ಘಾಟಿಸಿ ಮಾತನಾಡಿ, ಒಟಗಾರರಿಲ್ಲದೆ ಕಂಬಳ ಕ್ರೀಡೆ ಪೂರ್ಣವಾಗದು. ಕಂಬಳದ ಬೆಳವಣಿಗೆಯಲ್ಲಿ ಒಟಗಾರರ ಪಾತ್ರ ಮಹತ್ವದ್ದಾಗಿದೆ ಎಂದರು.

ಕಾರ್ಕಳ: ಮಿಯಾರು ಕಂಬಳ ಕ್ರೀಡಾಂಗಣದಲ್ಲಿ ಕಂಬಳ ತರಬೇತಿ ಶಿಬಿರ ಬುಧವಾರ ಉದ್ಘಾಟನೆಗೊಂಡಿತು. ಉದಯಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್‌ನ ಮುನಿಯಾಲು ಉದಯಕುಮಾರ್ ಶೆಟ್ಟಿ ಶಿಬಿರ ಉದ್ಘಾಟಿಸಿ ಮಾತನಾಡಿ, ಒಟಗಾರರಿಲ್ಲದೆ ಕಂಬಳ ಕ್ರೀಡೆ ಪೂರ್ಣವಾಗದು. ಕಂಬಳದ ಬೆಳವಣಿಗೆಯಲ್ಲಿ ಒಟಗಾರರ ಪಾತ್ರ ಮಹತ್ವದ್ದಾಗಿದೆ ಎಂದರು.

ಇಂದಿನ ಯುವಕರಲ್ಲಿ ಕಂಬಳದ ಬಗ್ಗೆ ಹೆಚ್ಚಿನ ಉತ್ಸಾಹವಿದ್ದು, ಈ ಉತ್ಸಾಹದೊಂದಿಗೆ ನಮ್ಮ ಸಂಸ್ಕೃತಿ ಹಾಗೂ ಪ್ರಕೃತಿಯೊಂದಿಗಿನ ನಂಟನ್ನೂ ಉಳಿಸಿಕೊಳ್ಳಬೇಕು. ಮಿಯಾರು ಕಂಬಳ ಕ್ರೀಡಾಂಗಣ ಉತ್ತಮ ಸೌಲಭ್ಯಗಳನ್ನು ಹೊಂದಿದ್ದು, ಶಿಬಿರಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಕಂಬಳ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದರು.

ಕಂಬಳದ ಹಿಂದೆ ನೂರಾರು ಜನರ ಪರಿಶ್ರಮವಿದೆ. ಕಂಬಳದ ಪರಂಪರೆ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವಲ್ಲಿ ತರಬೇತಿ ಶಿಬಿರಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

ಮಿಯಾರಿನ ಮಂಜಮನೆ ಆನಂದ ಎಂ. ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಶಿಬಿರಾರ್ಥಿಗಳಿಗೆ ಕಿಟ್ ಹಾಗೂ ಟಿ-ಶರ್ಟ್ ವಿತರಿಸಲಾಯಿತು.

ಚಂದ್ರಹಾಸ ಸಾಧು ಸನಿಲ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಯೋಗೀಶ್ ಆಚಾರ್ಯ, ಕಂಬಳ ವಿಜೇತ ನಂದಳಿಕೆ ಶ್ರೀಕಾಂತ್ ಭಟ್, ಜನಾರ್ದನ ನಾಯಕ್ ಸಿದ್ಧಕಟ್ಟೆ, ಜೀವನಾಧಾರ ಜೈನ್, ಸುರೇಶ್ ಶೆಟ್ಟಿ ಹೊಸ್ಮಾರು, ಲೋಕಯ್ಯ ಶೆಟ್ಟಿ, ಸಂದೀಪ್ ಶೆಟ್ಟಿ, ಕಾಂತಾವರ ಉದಯ ಶೆಟ್ಟಿ, ಕೋಶಾಧಿಕಾರಿ ಶ್ಯಾಮ ಶೆಟ್ಟಿ, ಪ್ರಕಾಶ್ ಬಲಿಪ, ಅಂಥೋನಿ ಡಿಸೋಜ, ನಕ್ರೆ ಅಶೋಕ್ ಮತ್ತಿತರರಿದ್ದರು.

ವಿಜಯಕುಮಾರ್ ಕಂಗಿನಮನೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸತೀಶ್ ಹೊಸ್ಮಾರು ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದ ಸಮಸ್ಯೆಗಳ ಪರಿಹಾರಕ್ಕೆ ಸಂಘಟನೆಗಳು ಮುಂದಾಗಬೇಕು
ಬರದ ಸುಳಿಯಲ್ಲಿ ಬೆಳಗಾವಿಯ 9 ತಾಲೂಕುಗಳು