ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ದೂರುಗಳು ಕೇಳಿ ಬಂದಿವೆ. ನಾನು ಪ್ರವಾಸದಲಿದ್ದ ವೇಳೆ ಸಾಕಷ್ಟು ಮಂದಿ ದೂರಿದ್ದಾರೆ. ಇಲ್ಲಿನ ಬೆಳವಣಿಗೆ ಬಗ್ಗೆ ವಿವರಿಸಿದ್ದಾರೆ. ಇದು ಮುಂದುವರೆದಲ್ಲಿ ಶಿಸ್ತು ಕ್ರಮ ಅನಿವಾರ್ಯ ಎಂದು ತಾಕೀತು ಮಾಡಿದರು.
ಶಾಸಕರ ಭೇಟಿ ವೇಳೆ ಹಲವರು ಇಲ್ಲಿನ ಸಿಬ್ಬಂದಿ ವಿರುದ್ಧ ದೂರಿದ ಹಿನ್ನೆಲೆ ಪೌರಾಯುಕ್ತರು ಮೊದಲು ನಾಗರಿಕರಿಂದಅರ್ಜಿಗಳನ್ನು ಪಡೆದು ಅರ್ಜಿದಾರರಿಗೆ ಸ್ವೀಕೃತಿ ಪತ್ರ ನೀಡಿ, ಇಷ್ಟು ದಿನದೊಳಗೆ ಬನ್ನಿ ಎಂದು ಸ್ವೀಕೃತಿ ಪತ್ರದಲ್ಲಿ ತಿಳಿಸಿ ಎಂದು ದೂರುದಾರರ ಸಮ್ಮುಖದಲ್ಲಿ ಶಾಸಕರು ಎಚ್ಚರಿಸಿದರು.
-----
ಕೊಳ್ಳೇಗಾಲ: ಏನಮ್ಮ ನೀನು ಹೆಸರಿಗೆ ಮಾತ್ರ ಗುಣಶ್ರೀ, ಆದರೆ ಕೆಲಸ, ಕಾರ್ಯಕ್ಕೆ ಬರುವವರನ್ನು ಏಕ ವಚನದಲ್ಲಿ ಮಾತನಾಡಿಸುತ್ತೀಯಾ, ಹೋಗೆ, ಬಾರೆ ಅನ್ನುತ್ತೀಯಾ, ನಿನ್ನ ಬಗ್ಗೆ ಸಾಕಷ್ಟು ದೂರುಗಳಿವೆ, ತಿದ್ದಿಕೊಳ್ಳಬೇಕು, ನಿನಗೆ ಇದು ಕೊನೆ ಅವಕಾಶ ಎಂದು ನಗರಸಭೆ ದ್ವಿತೀಯ ದರ್ಜೆ ಸಹಾಯಕಿ ಗುಣಶ್ರೀ ಅವರಿಗೆ ಶಾಸಕ ಎ .ಆರ್. ಕೃಷ್ಣಮೂರ್ತಿ ಅವರು ಸೋಮವಾರ ಎಚ್ಚರಿಕೆ ನೀಡಿದರು.
ಸೌಜನ್ಯದ ನಡೆ ಇಲ್ಲ, ಈ ವರ್ಷ ಮಾತ್ರ ಇಲ್ಲಿರು, ಮುಂದೆ ಇಲ್ಲಿಂದ ಹೊರಡಮ್ಮ ಎಂದು ತರಾಟೆ ತೆಗೆದುಕೊಂಡರು.
ಸಾರ್ವಜನಿಕರಿಂದ ನಗರಸಭೆ ಆಯುಕ್ತರು, ನೌಕರ ರಾಘವೇಂದ್ರ ವಿರುದ್ಧವೂ ದೂರು ಬಂದಿವೆ. ಆದರೆ ಹೆಚ್ಚು ದೂರುಗಳು
ದೂರುಗಳಿವೆ. ಮಹಿಳೆಯರನ್ನು ಸಹ ಇಲ್ಲಿ ಹೋಗೆ, ಬಾರೆ ಎಂದು ಅಗೌರವದಿಂದ ಸಂಭೋದಿಸುವ ಕುರಿತು ನನಗೆ ಸಾಕಷ್ಟು ದೂರುಗಳು ಬಂದಿವೆ. ಇಲ್ಲಿನ ಸಿಬ್ಬಂದಿ ಎಲ್ಲರೂ ಮೊದಲು ಕೆಲಸಕ್ಕೆ ಬರುವವರನ್ನು ಸೌಜನ್ಯದಿಂದ ಮಾತನಾಡಿಸಿ, ಗೌರವ ನೀಡಿ, ಕೆಲಸ ಆದರೆ ಮಾಡಿಕೊಡಿ, ಇಲ್ಲ 1 ವಾರ, ಇಲ್ಲವೇ 15 ದಿನ ಬಿಟ್ಟು ಬರಲು ಸೌಜನ್ಯದಿಂದ ತಿಳಿಸಿ, ಬಳಿಕ ಸ್ಪಂದಿಸಿ, ಮುಂದೆ ಇಂತಹ ದೂರುಗಳು ಬಂದರೆ ಸಂಬಂಧಪಟ್ಟವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳುವುದಾಗಿ ಶಾಸಕರು ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದರು.
ಇದೇ ವೇಳೆ ಶಾಸಕರು, ವಿವಿಧ ಶಾಖೆಗಳಿಗೂ ಭೇಟಿ ನೀಡಿ ಅಲ್ಲಿ ಕರ್ತವ್ಯ ನಿರ್ವಹಿಸುವ ನೌಕರರನ್ನು ಪರಿಚಯಿಸಿಕೊಂಡು
ಅವರು ತಾತ್ಕಾಲಿಕ ನೌಕರರು, ಸರ್ಕಾರಿ ನೌಕರರೇ ಎಂಬುದನ್ನು ಖಚಿತಪಡಿಸಿಕೊಂಡರು. ಯಾವ ಶಾಖೆ ಗುಮಾಸ್ತರ ವಿರುದ್ಧ ದೂರಿದೆಯೋ ಅಲ್ಲೆ ಸಂಬಂಧಪಟ್ಟವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ಜರುಗಿತು.