ವಿಬಿ-ಜಿ ರಾಮ್ ಜಿ ಯೋಜನೆ ಪ್ರಚಾರ ವಾಹನಕ್ಕೆ ಶಾಸಕಿ ಅನ್ನಪೂರ್ಣ ಚಾಲನೆ

KannadaprabhaNewsNetwork |  
Published : Jul 14, 2026, 02:00 AM IST
ಸಂಡೂರಿನಲ್ಲಿ ಸೋಮವಾರ ಶಾಸಕಿ ಅನ್ನಪೂರ್ಣ ಈ ತುಕಾರಾಂ ಅವರು ವಿಬಿ-ಜಿ ರಾಮ್ ಜಿ ಯೋಜನೆಯ ಪ್ರಚಾರ ವಾಹನಕ್ಕೆ ಚಾಲನೆ ನೀಡಿದರು. | Kannada Prabha

ಸಾರಾಂಶ

ಈ ಯೋಜನೆ ಅಡಿಯಲ್ಲಿ ಒಂದು ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ ೧೨೫ ದಿನಗಳ ಕೂಲಿ ಸಿಗಲಿದೆ.

ಸಂಡೂರು: ತಾಲೂಕಿನ ೨೬ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯ ಪ್ರಚಾರ ವಾಹನಕ್ಕೆ ಸೋಮವಾರ ಪಟ್ಟಣದ ತಾಪಂ ಕಚೇರಿ ಸಭಾಂಗಣದಲ್ಲಿ ಶಾಸಕಿ ಅನ್ನಪೂರ್ಣ ಈ.ತುಕಾರಾಂ ಚಾಲನೆ ನೀಡಿದರು.

ಚಾಲನೆ ನೀಡಿ ಮಾತನಾಡಿದ ಶಾಸಕರು, ಈ ಯೋಜನೆ ಅಡಿಯಲ್ಲಿ ಒಂದು ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ ೧೨೫ ದಿನಗಳ ಕೂಲಿ ಸಿಗಲಿದೆ. ಗಂಡು ಹೆಣ್ಣಿಗೆ ಸಮಾನ ಕೂಲಿ ದೊರೆಯಲಿದೆ. ಒಂದು ದಿನಕ್ಕೆ ₹೩೮೨ ಕೂಲಿ ಸಿಗಲಿದೆ. ಒಂದು ಕುಟುಂಬವು ಒಂದು ಆರ್ಥಿಕ ವರ್ಷದಲ್ಲಿ ೧೨೫ ದಿನಗಳು ಕೆಲಸ ನಿರ್ವಹಿಸಿದಲ್ಲಿ ₹೪೭,೭೫೦ ಸಿಗಲಿದೆ. ಈ ಯೋಜನೆ ಅಡಿಯಲ್ಲಿ ಕಾಮಗಾರಿಗಳನ್ನು ನಾಲ್ಕು ಪ್ರವರ್ಗಗಳನ್ನಾಗಿ ವಿಂಗಡಣೆ ಮಾಡಲಾಗಿದ್ದು, ಒಟ್ಟು ೩೧೮ ಕಾಮಗಾರಿಗಳನ್ನು ಅನುಮತಿಸಲಾಗಿದೆ.

ಅನುಮತಿಸಲಾದ ಕಾಮಗಾರಿಗಳು:

ಜಲ ಸಂಬಂಧಿತ ಕಾರ್ಯಗಳ ಮೂಲ ಜಲ ಭದ್ರತೆ ಕುರಿತ ಒಟ್ಟಿ ೧೦೭ ಕಾಮಗಾರಿಗಳು, ಮೂಲ ಗ್ರಾಮೀಣ ಮೂಲ ಸೌಕರ್ಯದ ಒಟ್ಟು ೯೦ ಕಾಮಗಾರಿಗಳು, ಜೀವನೋಪಾಯ ಸಂಬಂಧಿತ ಮೂಲ ಸೌಕರ್ಯ ಕುರಿತ ಒಟ್ಟು ೮೬ ಕಾಮಗಾರಿಗಳು ಹಾಗೂ ತೀವ್ರ ಹವಾಮಾನ ಘಟನೆಗಳ ಶಮನಕ್ಕಾಗಿ ಒಟ್ಟು ೩೫ ಕಾಮಗಾರಿಗಳನ್ನು ಅನುಮತಿಸಲಾಗಿದೆ.

ಕೃಷಿ ಚಟುವಟಿಕೆಗಳ ಹಂಗಾಮಿನ ಉತ್ತುಂಗದ ಸಮಯದಲ್ಲಿ ಕೃಷಿ ಕಾರ್ಮಿಕರ ಸಮರ್ಪಕ ಲಭ್ಯತೆಯನ್ನು ಸುಗಮಗೊಳಿಸಲು ೬೦ ದಿನಗಳ ವಿರಾಮ ಸಿಗಲಿದೆ. ಎಲ್ಲ ಕಾರ್ಮಿಕರು ಈ ಯೋಜನೆಯನ್ನು ಸದುಪಯೋಗ ಪಡೆದುಕೊಂಡು ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಪಂ ಇಒ ಮಡಗಿನ ಬಸಪ್ಪ, ತಹಶೀಲ್ದಾರ್ ಜಿ.ಅನಿಲ್‌ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್. ಅಕ್ಕಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಗರಾಜ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎನ್.ಕೆ. ವೆಂಕಟೇಶ್, ವಿಬಿ-ಜಿ ರಾಮ್ ಜಿ ಯೋಜನೆಯ ಪ್ರಭಾರ ಸಹಾಯಕ ನಿರ್ದೇಶಕ ವಸಂತರಾಜ್, ಪಂಚಾಯತ್ ರಾಜ್ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಮಹೇಶಕುಮಾರ್, ತಾಲೂಕು ಯೋಜನಾಧಿಕಾರಿ ಹನುಮನಗೌಡ, ತಾಲೂಕು ಮಟ್ಟದ ಅಧಿಕಾರಿಗಳು, ೨೬ ಪಿಡಿಒಗಳು, ಕಾರ್ಯದರ್ಶಿಗಳು, ತಾಪಂ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೋಕ ಅದಾಲತ್‌: ಹೈಕೋರ್ಟ್‌ನಲ್ಲಿ 366 ಪ್ರಕರಣ ಇತ್ಯರ್ಥ
ಜೀವ ರಕ್ಷಣೆಯ ಪವಿತ್ರ ವೃತ್ತಿ ವೈದ್ಯರದು