ಪಾರಂಪರಿಕ ನಡಿಗೆಗೆ ಅದ್ಧೂರಿ ಚಾಲನೆ

KannadaprabhaNewsNetwork |  
Published : Oct 25, 2025, 01:02 AM IST
ಪಾರಂಪರಿಕ ನಡಿಗೆಯಲ್ಲಿ ಭಾಗವಹಿಸಿದ ಶ್ರೀಗಳು ಶಾಸಕ ಬಾಬಾಸಾಹೇಬ ಪಾಟೀಲ, ಅಧಿಕಾರಿಗಳು ಹಾಗೂ ಸಾರ್ವಜನಿಕರು. | Kannada Prabha

ಸಾರಾಂಶ

ಪ್ರಾಚ್ಯ ಹಾಗೂ ಪುರಾತತ್ವ ಇಲಾಖೆ ವತಿಯಿಂದ ಶುಕ್ರವಾರ ಪಾರಂಪರಿಕ ನಡಿಗೆ ಕಾರ್ಯಕ್ರಮ ಪಟ್ಟಣದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಪ್ರಾಚ್ಯ ಹಾಗೂ ಪುರಾತತ್ವ ಇಲಾಖೆ ವತಿಯಿಂದ ಶುಕ್ರವಾರ ಪಾರಂಪರಿಕ ನಡಿಗೆ ಕಾರ್ಯಕ್ರಮ ಪಟ್ಟಣದಲ್ಲಿ ನಡೆಯಿತು.

201ನೇ ಐತಿಹಾಸಿಕ ಕಿತ್ತೂರು ವಿಜಯೋತ್ಸವದ ನಿಮಿತ್ತ ಹೆದ್ದಾರಿ ಪಕ್ಕದ ಚನ್ನಮ್ಮಾಜಿಯ ವರ್ತುಳದಿಂದ ಆರಂಭಗೊಂಡ ಈ ನಡಿಗೆಯು ಐತಿಹಾಸಿಕ ಕೋಟೆಯವರೆಗೂ ಸಾಗಿ ಬಂದಿತು. ಈ ನಡಿಗೆಯು ಕೇವಲ ನಡೆಯುವಿಕೆಯಲ್ಲ, ಅದು ಬ್ರಿಟಿಷರನ್ನು ಮಣ್ಣು ಮುಕ್ಕಿಸಿ ಜಯ ಸಾಧಿಸಿದ ರಾಣಿ ಚನ್ನಮ್ಮನ ಐತಿಹಾಸಿಕ ಹೆಜ್ಜೆಗುರುತುಗಳ ಮೇಲೆ ಸಾಗಿದ ಪವಿತ್ರ ಪಯಣವಾಗಿತ್ತು. ಶಾಸಕ ಬಾಬಾಸಾಹೇಬ ಪಾಟೀಲ ಹಾಗೂ ರೋಹಿಣಿ ಪಾಟೀಲ ಒಟ್ಟಾಗಿ ಪಾರಂಪರಿಕ ನಡಿಗೆಗೆ ಚಾಲನೆ ನೀಡುವ ಮೂಲಕ ನಡಿಗೆಗೆ ಮೆರುಗು ನೀಡಿದರು.

ಈ ಸಂದರ್ಭದಲ್ಲಿ ಚನ್ನಮ್ಮನ ಕಿತ್ತೂರು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಕ್ಯೂರೇಟರ್ ರಾಘವೇಂದ್ರ ಮಾತನಾಡಿ, ನಮ್ಮ ಮೂರ್ತ, ಅಮೂರ್ತ ಹಾಗೂ ನೈಸರ್ಗಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಸಮರ್ಥವಾಗಿ ಮುಟ್ಟಿಸುವ ಮತ್ತು ಇತಿಹಾಸದ ಅಮೂಲ್ಯ ಸ್ಮಾರಕಗಳ ರಕ್ಷಣೆ ಕುರಿತು ಜಾಗೃತಿ ಮೂಡಿಸುವ ಮಹತ್ವದ ಉದ್ದೇಶದಿಂದ ಈ ಪಾರಂಪರಿಕ ನಡಿಗೆ ಆಯೋಜಿಸಲಾಗಿದೆ ಎಂದು ವಿವರಿಸಿದರು.

ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೇಂದ್ರ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ನಾಡಿನ ಹಬ್ಬಗಳಲ್ಲಿ ಇಂತಹ ಪಾರಂಪರಿಕ ನಡಿಗೆಗಳು ಏರ್ಪಾಡಾದಾಗ ನಮ್ಮ ಇತಿಹಾಸ, ಹೋರಾಟಗಾರರ ಹಿನ್ನೆಲೆ ಮತ್ತು ನಮ್ಮ ವೈಭವಯುತ ಪರಂಪರೆಯ ಕುರಿತು ಪ್ರತಿಯೊಬ್ಬರಲ್ಲಿ ಅಭಿಮಾನ ಉಕ್ಕಿ ಹರಿಯುತ್ತದೆ ಎಂದು ಆಶೀರ್ವಚನ ನೀಡಿದರು.ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ತಹಸೀಲ್ದಾರ್‌ ಕಲಗೌಡ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ತುಬಾಕದ, ಸಿಪಿಐ ಶಿವಾನಂದ ಗುಡಗನಟ್ಟಿ, ಪ.ಪಂ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ, ಉಪ ಪ್ರಾಂಶುಪಾಲ ಮಹೇಶ ಚನ್ನಂಗಿ, ಶಿಕ್ಷಕರಾದ ಮಂಜುನಾಥ ಕಳಸಣ್ಣವರ, ಬಸವರಾಜ ಬಿದರಿ, ಬಸವರಾಜ ಗಡೆನ್ನವರ, ಶಿಕ್ಷಕಿ ಭುವನಾ ಹಿರೇಮಠ ಸೇರಿದಂತೆ ಅನೇಕ ಗಣ್ಯರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡು ರಾಣಿ ಚನ್ನಮ್ಮಳ ವೀರ ಪರಂಪರೆಗೆ ಗೌರವ ಸಲ್ಲಿಸಿದರು.ನಮ್ಮ ಮೂರ್ತ, ಅಮೂರ್ತ ಹಾಗೂ ನೈಸರ್ಗಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಸಮರ್ಥವಾಗಿ ಮುಟ್ಟಿಸುವ ಮತ್ತು ಇತಿಹಾಸದ ಅಮೂಲ್ಯ ಸ್ಮಾರಕಗಳ ರಕ್ಷಣೆ ಕುರಿತು ಜಾಗೃತಿ ಮೂಡಿಸುವ ಮಹತ್ವದ ಉದ್ದೇಶದಿಂದ ಈ ಪಾರಂಪರಿಕ ನಡಿಗೆ ಆಯೋಜಿಸಲಾಗಿದೆ.

-ರಾಘವೇಂದ್ರ, ಚನ್ನಮ್ಮನ ಕಿತ್ತೂರು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಕ್ಯೂರೇಟರ್.

PREV

Recommended Stories

ಸ್ವಸ್ಥ ಶರದ್ ಋತು ಪ್ರಕೃತಿಯ ಲಯದಲ್ಲಿ ಸ್ವಸ್ಥತೆ ! ಶರದ್ ಋತುವಿನ ಆಹಾರ ಮತ್ತು ದಿನಚರ್ಯೆ
ನಟ ದರ್ಶನ್‌ಗೆ ಜೈಲಿನಲ್ಲಿ ಹರಿದ ಚಾದರ : ವಕೀಲರ ವಾದ