ತುಂಬಿದ ಕೆರೆಗಳಿಗೆ ಶಾಸಕ ಬಾಲಕೃಷ್ಣ ಬಾಗಿನ ಅರ್ಪಣೆ

KannadaprabhaNewsNetwork |  
Published : Nov 28, 2025, 02:06 AM IST
26ಎಚ್ಎಸ್ಎನ್7ಎ : ತಗಡೂರು ಲಕ್ಕರಸನಹಳ್ಳಿ ಕೆರೆಗಳು ಹೇಮಾವತಿ ನದಿ ನೀರಿನಿಂದ ತುಂಬಿ ಹರಿದ ಹಿನ್ನೆಲೆಯಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಗಂಗಾ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು.  | Kannada Prabha

ಸಾರಾಂಶ

ದಶಕಗಳ ಹೋರಾಟದ ಪರಿಣಾಮವಾಗಿ ಚನ್ನರಾಯಪಟ್ಟಣ ತಾಲೂಕಿನ ನವಿಲೆ ಸುರಂಗ ಸಂತ್ರಸ್ತ ಹಳ್ಳಿಗಳಾದ ತಗಡೂರು-ಲಕ್ಕರಸನಹಳ್ಳಿ ಕೆರೆಗಳಿಗೆ ಹೇಮಾವತಿ ನದಿ ನೀರು ಹರಿದಿದ್ದು, ಸಣ್ಣ ಕೆರೆ ಮತ್ತು ದೊಡ್ಡ ಕೆರೆಗಳೆರಡು ಕೋಡಿಬಿದ್ದಿವೆ. ತುಂಬಿದ ಎರಡೂ ಕೆರೆಗಳಿಗೆ ಶಾಸಕ ಸಿ.ಎನ್. ಬಾಲಕೃಷ್ಣ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು, ಎರಡೂ ಗ್ರಾಮಸ್ಥರ ಜೊತೆಯಲ್ಲಿ ಬಾಗಿನ ಅರ್ಪಿಸಿದರು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿದಶಕಗಳ ಹೋರಾಟದ ಪರಿಣಾಮವಾಗಿ ಚನ್ನರಾಯಪಟ್ಟಣ ತಾಲೂಕಿನ ನವಿಲೆ ಸುರಂಗ ಸಂತ್ರಸ್ತ ಹಳ್ಳಿಗಳಾದ ತಗಡೂರು-ಲಕ್ಕರಸನಹಳ್ಳಿ ಕೆರೆಗಳಿಗೆ ಹೇಮಾವತಿ ನದಿ ನೀರು ಹರಿದಿದ್ದು, ಸಣ್ಣ ಕೆರೆ ಮತ್ತು ದೊಡ್ಡ ಕೆರೆಗಳೆರಡು ಕೋಡಿಬಿದ್ದಿವೆ. ತುಂಬಿದ ಎರಡೂ ಕೆರೆಗಳಿಗೆ ಶಾಸಕ ಸಿ.ಎನ್. ಬಾಲಕೃಷ್ಣ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು, ಎರಡೂ ಗ್ರಾಮಸ್ಥರ ಜೊತೆಯಲ್ಲಿ ಬಾಗಿನ ಅರ್ಪಿಸಿದರು.

ಈ‌ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿ.ಎನ್. ಬಾಲಕೃಷ್ಣ ಅವರು, ನಾನು ಜಿಪಂ ಸದಸ್ಯ ಆಗಿದ್ದ ಸಂದರ್ಭದಲ್ಲಿಯೂ ಬಾಗೂರು-ನವಿಲೆ ಹೋರಾಟ ನಡೆದಿತ್ತು. ಶಿವಾನಂದ ತಗಡೂರು ಅವರ ನೇತೃತ್ವದಲ್ಲಿ ಅಂದು‌ ನಡೆದ ಹೋರಾಟದ ಪರಿಣಾಮವಾಗಿ ಏತನೀರಾವರಿ ಯೋಜನೆಗಳು ರೂಪುಗೊಂಡವು. ಅದನ್ನು ಶಾಸಕನಾಗಿ ಅನುಷ್ಠಾನ ಮಾಡಿ ನೀರು ಹರಿಸಿದ ಹೆಗ್ಗಳಿಕೆ ನನ್ನ ಪಾಲಿನದ್ದು ಎಂದು ಹೇಳಿದರು. ನವಿಲೆ ಏತನೀರಾವರಿ ಮೂಲಕ ತಗಡೂರು‌ ಕೆರೆಗೆ ನೀರು ಹರಿಸಲು ಹಲವು ಅಡ್ಡಿ ಆತಂಕಗಳು ಎದುರಾದವು. ಅವುಗಳನ್ನು ನಿವಾರಿಸಿ ಸಮಸ್ಯೆ ಬಗೆಹರಿಸಲಾಯಿತು ಎಂದು ಹೇಳಿದರು. ನಿಮ್ಮೂರಿನ ಪುತ್ರನಾದ ಶಿವಾನಂದ ತಗಡೂರು ಅವರು ವಿಧಾನಸೌಧದಲ್ಲಿ ನಮಗೊಂದು ಶಕ್ತಿಯಾಗಿದ್ದಾರೆ. ಕಲ್ಲೇಶ್ವರ ದೇವಸ್ಥಾನ ರಸ್ತೆಗೆ ಸರ್ಕಾರದಿಂದ ವಿಶೇಷ ಅನುದಾನ ಕೊಡಿಸಿ ಇಷ್ಟು ಚೆಂದ‌ ರಸ್ತೆಯಾಗಲು ಕಾರಣರಾಗಿದ್ದಾರೆ ಎಂದರು. ತಗಡೂರು ಗೇಟ್ ನಿಂದ ಹೆಗ್ಗಡಿಗೆರೆ ಗೇಟ್ ತನಕ ಮತ್ತು ಕೆರೆ ಹಿಂಭಾಗದಲ್ಲಿ ಹಾಯ್ದು ವಡ್ಡರಹಟ್ಟಿ ಸಂಪರ್ಕಿಸುವ ರಸ್ತೆ ಕಾಮಗಾರಿಗಳನ್ನು ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.

ಒಂದು ಬಾರಿ ಅಧ್ಯಕ್ಷರಾಗುವುದು ಕಷ್ಟ. ರಾಜ್ಯ ಪತ್ರಕರ್ತರ ಸಂಘಕ್ಕೆ ಸತತವಾಗಿ ಮೂರನೇ ಬಾರಿಗೆ‌ ಅವಿರೋಧವಾಗಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವುದು ತಾಲೂಕಿಗೆ ಮತ್ತು ಜಿಲ್ಲೆಗೆ ಅಭಿಮಾನದ ಸಂಗತಿ.‌ ಶೀಘ್ರದಲ್ಲೇ ತಾಲ್ಲೂಕು ಮಟ್ಟದಲ್ಲಿ ಶಿವಾನಂದ ಅವರಿಗೆ‌ ನಾಗರೀಕ ಅಭಿನಂದನೆ ಹಮ್ಮಿಕೊಳ್ಳಲಾಗುವುದು ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, ತೊಂಬತ್ತರ ದಶಕದಲ್ಲಿ ಬಾಗೂರು‌-ನವಿಲೆ ಸುರಂಗ‌ ಸಂತ್ರಸ್ತ ಹಳ್ಳಿಗಳಿಗೆ ನೀರಾವರಿ ಮತ್ತು ಪರಿಹಾರ ನೀಡಬೇಕೆಂದು ಹೋರಾಟ ನಡೆಸಲಾಗಿತ್ತು. ಈಗ ಕೆರೆಗಳಿಗೆ ನೀರು ಹರಿದಿರುವುದು ಸಂತಸ‌ ತಂದಿದೆ.‌ ತಗಡೂರು ಲಕ್ಕರಸನಹಳ್ಳಿ ಕೆರೆಗೆ ನೀರು ಬರಲು ಶ್ರಮಿಸಿದ ಶಾಸಕ‌ರಿಗೆ ಅಭಿನಂದನೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಶಾಸಕ ಬಾಲಕೃಷ್ಣ ಮತ್ತು ಶಿವಾನಂದ ತಗಡೂರು ಅವರನ್ನು ಗ್ರಾಮಸ್ಥರು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಸವರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಪಿ. ಕುಮಾರ್, ಉದ್ಯಮಿ ಭುವನಹಳ್ಳಿ ಯೋಗೇಶ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಟಿವಿ ಬಸವರಾಜ್ ಲಕ್ಕರಸನಹಳ್ಳಿ ಪುಟ್ಟರಾಜ ತೋಂಟರಾಧ್ಯ ಮಹಾಲಿಂಗೇಗೌಡ ಎಲ್. ಕೆ. ಇಂದ್ರೇಶ್, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ತಮ್ಮಯ್ಯ, ಗಿರೀಶ್, ಮುಖಂಡರಾದ ಕಾಂತರಾಜ್, ಟಿ.ಸಿ. ಮಂಜುನಾಥ್, ಡೇರಿ ಪರಮೇಶ್, ಎನ್. ಗಂಗಾಧರ್, ಟಿ.ಎನ್. ಚನ್ನಬಸವಣ್ಣ, ಹರೀಶ್, ಟಿ.ಬಿ. ಚಂದ್ರಪ್ಪ ,ಚುಂಚಯ್ಯ, ದೇವರಾಜ್, ಚೈತ್ರ ತೋಂಟ ಆರಾಧ್ಯ, ಗಿರಿಜಾ ನಾಗೇಶ್, ಕುಸುಮ, ಪುಷ್ಪ, ಪ್ರೇಮಾ ಗಿರೀಶ್, ಸುವರ್ಣ ಪರಮೇಶ್, ನೀಲಕಂಠ ಸ್ವಾಮಿ, ಚನ್ನೇಗೌಡ, ಬೋರ್‌ವೆಲ್ ಸಚಿನ್, ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುದುರೆಗಳಲ್ಲಿ ಗ್ಲ್ಯಾಂಡರ್ಸ್ ರೋಗ ಪತ್ತೆ: ಟರ್ಫ್ ಕ್ಲಬ್‌ ಸುತ್ತ ಪ್ರಾಣಿ ಸಂಚಾರ ನಿರ್ಬಂಧ
ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ