ನಾಗರಾಳು ಗ್ರಾಪಂ.ಗೆ ಅಧ್ಯಕ್ಷ , ಉಪಾಧ್ಯಕ್ಷರ ಅವಿರೋಧ ಆಯ್ಕೆ

KannadaprabhaNewsNetwork |  
Published : Nov 28, 2025, 02:06 AM IST
26ಕಕೆೆಕೆೆಡಿಯು2. | Kannada Prabha

ಸಾರಾಂಶ

ಕಡೂರು: ತಾಲೂಕಿನ ಸಖರಾಯಪಟ್ಟಣ ಸಮೀಪದ ನಾಗರಾಳು ಗ್ರಾಪಂ ಅಧ್ಯಕ್ಷರಾಗಿ ಶೈಲಜಾ ಅಪ್ಪಾಜಿ , ಉಪಾಧ್ಯಕ್ಷರಾಗಿ ಗಾಂಧಿನಗರದ ಚಂದ್ರಿಬಾಯಿ ರಾಜನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ದೇವರಾಜು ಘೋಷಿಸಿದರು.

ಕಡೂರು: ತಾಲೂಕಿನ ಸಖರಾಯಪಟ್ಟಣ ಸಮೀಪದ ನಾಗರಾಳು ಗ್ರಾಪಂ ಅಧ್ಯಕ್ಷರಾಗಿ ಶೈಲಜಾ ಅಪ್ಪಾಜಿ , ಉಪಾಧ್ಯಕ್ಷರಾಗಿ ಗಾಂಧಿನಗರದ ಚಂದ್ರಿಬಾಯಿ ರಾಜನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ದೇವರಾಜು ಘೋಷಿಸಿದರು. ಈ ಹಿಂದೆ ಎನ್ ಎಸ್ ಬಸವರಾಜ್‌ ಪ್ರಭಾರಿ ಅಧ್ಯಕ್ಷರಾಗಿದ್ದರು. ಅವರ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಅಧ್ಯಕ್ಷರ ಸ್ಥಾನ ಒಬಿಸಿ ಯ 2 ಎಗೆ ಮೀಸಲಾಗಿತ್ತು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಸೇರಿತ್ತು. ಚುನಾವಣೆ ಯಲ್ಲಿ ಒಬಿಸಿ ಯ 2ಎ ಸ್ಥಾನಕ್ಕೆ ಅಭ್ಯರ್ಥಿ ಶೈಲಜಾ ಅಪ್ಪಾಜಿ ಮಾತ್ರ ಮತ್ತು ಚಂದ್ರಿಬಾಯಿ ಮಾತ್ರ ನಾಮಪತ್ರ ಸಲ್ಲಿಸಿದ್ದ ಕಾರಣ ಇಬ್ಬರೂ ಅವಿರೋಧ ಆಯ್ಕೆಯಾದರು. ನೂತನ ಅಧ್ಯಕ್ಷರನ್ನು ಅಭಿನಂದಿಸಿದ ಕಾಂಗ್ರೆಸ್ ಮುಖಂಡ ಕುಮಾರ್ ಗಾಂಧಿ ಮಾತನಾಡಿ, ಈಗಿನ ಅಧ್ಯಕ್ಷರು ಅಭಿವೃದ್ಧಿ ಕಡೆ ಗಮನಕೊಡಬೇಕು. ಇನ್ನೇನು ಬೇಸಿಗೆ ಸನ್ನಿಹಿತವಾಗಿದ್ದು , ಕುಡಿಯುವ ನೀರೂ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಗಮನಕೊಡಬೇಕು ಎಂದರು. ನೂತನ ಅಧ್ಯಕ್ಷೆ ಶೈಲಜಾ ಮಾತನಾಡಿ ಎಲ್ಲರ ಸಹಕಾರದಿಂದ ಅಧ್ಯಕ್ಷೆಯಾಗಿದ್ದೇನೆ. ನಾಗರಾಳು ಗ್ರಾ.ಪಂ.ಕಟ್ಟಡ ತಾಲೂಕಿನಲ್ಲಿಯೇ ಮಾದರಿ. ಅದೇ ರೀತಿ ಆಡಳಿತ ಮತ್ತು ಅಭಿವೃದ್ಧಿ ಮಾಡಬೇಕೆಂಬ ಒತ್ತಾಸೆಯಿದೆ. ಅದಕ್ಕೆ ಸದಸ್ಯರು ಸಹಕಾರ ನೀಡಬೇಕು ಎಂದರು. ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ಬಸವರಾಜು, ಯಶೋಧಮ್ಮ, ಚನ್ನಬಸಪ್ಪ,ಮುಖಂಡರಾದ ಸಂತೋಷ್, ನಟರಾಜ್, ಅಶೋಕ್, ವಿಶ್ವನಾಥ್, ಉಮೇಶ್, ಶಿವಣ್ಣ, ಚಂದ್ರಪ್ಪ, ರೇಣುಕಾ ನಾಗರಾಜ್, ಕುಮಾರ್ ಶೆಟ್ಟರು, ದರ್ಶನ್, ನಂದೀಶ,ಮಂಜಾನಾಯ್ಕ, ತಿಮ್ಮಪ್ಪಶೆಟ್ಟಿ, ಮಂಜುನಾಥ್ ಹಾಗೂ ಸಾರ್ವಜನಿಕರು ಹಾಜರಿದ್ದರು. 26ಕೆಕೆಡಿಯು2,

ಕಡೂರು ತಾಲೂಕಿನ ನಾಗರಾಳು ಗ್ರಾಪಂ ಅಧ್ಯಕ್ಷರಾಗಿ ಶೈಲಜಾ ಅಪ್ಪಾಜಿ ,ಉಪಾಧ್ಯಕ್ಷರಾಗಿ ಗಾಂಧಿನಗರದ ಚಂದ್ರಿಬಾಯಿರಾಜನಾಯ್ಕ ಅವಿರೋಧವಾಗಿ ಆಯ್ಕೆಯಾದರು .

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ ತೆಬಿಯಾ ರೋಸಿಯಾ ಹೂ ವೈಭವ!
ನಿವೇಶನ ರಹಿತರಿಗೆ ಸರ್ಕಾರದಿಂದ ಸೈಟ್‌