ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಬಣಕಾರ ಚಾಲನೆ

KannadaprabhaNewsNetwork |  
Published : Feb 01, 2026, 02:45 AM IST
ಹಿರೇಕೆರೂರು ಪಟ್ಟಣದ ಶಿರಾಳಕೊಪ್ಪ ರಸ್ತೆಯಿಂದ ಬುರಡೀಕಟ್ಟಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಹಾಗೂ ಸಿಡಿ ನಿರ್ಮಾಣ ಕಾಮಗಾರಿಗೆ ಶಾಸಕ ಯು.ಬಿ. ಬಣಕಾರ ಭೂಮಿ ಪೂಜೆ ನೆರವೇರಿಸಿದರು | Kannada Prabha

ಸಾರಾಂಶ

ಗ್ರಾಮೀಣ ಪ್ರದೇಶಗಳನ್ನು ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿಪಡಿಸುವುದರಿಂದ ಸಂಚಾರಕ್ಕೆ ಅನುಕೂಲವಾಗುವ ಜತೆಗೆ ಆ ಭಾಗದ ಕೃಷಿ ಜಮೀನುಗಳಿಗೆ ತೆರಳಲು ಉಪಯುಕ್ತವಾಗುತ್ತವೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಹಿರೇಕೆರೂರು: ಗ್ರಾಮೀಣ ಪ್ರದೇಶಗಳನ್ನು ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿಪಡಿಸುವುದರಿಂದ ಸಂಚಾರಕ್ಕೆ ಅನುಕೂಲವಾಗುವ ಜತೆಗೆ ಆ ಭಾಗದ ಕೃಷಿ ಜಮೀನುಗಳಿಗೆ ತೆರಳಲು ಉಪಯುಕ್ತವಾಗುತ್ತವೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.ಪಟ್ಟಣದ ಶಿರಾಳಕೊಪ್ಪ ರಸ್ತೆಯಿಂದ ಬುರಡೀಕಟ್ಟಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಹಾಗೂ ಸಿಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಪಟ್ಟಣದ ಹೊರವಲಯದ ಶಿರಾಳಕೊಪ್ಪ ರಸ್ತೆಯಿಂದ ₹ 20 ಲಕ್ಷ ಅಂದಾಜು ವೆಚ್ಚದಲ್ಲಿ ಬುರಡೀಕಟ್ಟಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಹಾಗೂ ಸಿಡಿ ನಿರ್ಮಾಣ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ. ಈ ಕಾಮಗಾರಿ ನಿರ್ವಹಣೆಯಿಂದ ಬುರಡೀಕಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಜತಗೆ ಈ ಭಾಗದ ರೈತರಿಗೆ ಜಮೀನುಗಳಿಗೆ ತೆರಳಿ ಕೃಷಿ ಚಟುವಟಿಕೆ ಕೈಗೊಳ್ಳಲು ಹಾಗೂ ಜನ ಜಾನುವಾರು ಸಂಚರಿಸಲು ಮತ್ತು ಕೃಷಿ ಉತ್ಪನಗಳನ್ನು ಸಾಗಾಣಿಕೆ ಮಾಡಲು ಸಹಾಯಕವಾಗುತ್ತದೆ ಮತ್ತು ಸಿಡಿ ನಿರ್ಮಾಣದಿಂದ ನೀರು ಸರಾಗವಾಗಿ ಹರಿದು ಹೋಗಲು ಮತ್ತು ರಸ್ತೆಗಳ ಸಂಪರ್ಕಕ್ಕೂ ಅನುಕೂಲವಾಗುತ್ತದೆ ಎಂದರು.ನಿಗದಿತ ಕಾಲಮಿತಿಯಲ್ಲಿ ಗುಣಮಟ್ಟದ ಕಾಮಗಾರಿ ನಿರ್ವಹಿಸಿ ಜನತೆಗೆ ಅನಕೂಲ ಮಾಡಿಕೊಡಬೇಕು ಸಂಬಂಧಿಸಿದ ಅಧಿಕಾರಿಗಳು ಕಾಲ ಕಾಲಕ್ಕೆ ಕಾಮಗಾರಿ ಮೇಲುಸ್ತವಾರಿ ನಡೆಸಿ ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದರು.ಈ ಸಂದರ್ಭದಲ್ಲಿ ಸಿಎಇಸ್ ಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ, ಹಿರಿಯ ವಕೀಲ ಬಿ.ಎಂ. ಹೊಳೆಯಪ್ಪನವರ, ಪಪಂ ಮಾಜಿ ಅಧ್ಯಕ್ಷ ಶಂಭುಲಿಂಗಪ್ಪ ತಂಬಾಕದ, ರವಿ ಚಿಂದಿ, ಮಂಜುನಾಥ ತಂಬಾಕದ, ತಿರಕಪ್ಪ ತಂಬಾಕದ, ಬಿ.ಎಚ್. ಬತ್ತಿಕೊಪ್ಪ, ಶಂಭು ಹಂಸಭಾವಿ, ಆಂಜನೇಯ ಆರ್.ಎಚ್. ಸೇರಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಳಚೆ ನೀರಲ್ಲಿ ತಟ್ಟೆ ತೊಳೆದ ಪ್ರಕರಣ; ಶಿಕ್ಷಕಿ ಅಮಾನತು
ಅಲೆಮಾರಿ ಜನಾಂಗದವರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿ: ಪಲ್ಲವಿ