ರಸ್ತೆ, ಚರಂಡಿ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿ ಪೂಜೆ

KannadaprabhaNewsNetwork |  
Published : May 13, 2026, 12:45 AM IST
12ಕೆಎಂಎನ್ ಡಿ11 | Kannada Prabha

ಸಾರಾಂಶ

ಗುಮ್ಮನಹಳ್ಳಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿಗಾಗಿ ಅಂದಾಜು 7 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ. ಇದರಲ್ಲಿ 1.75 ಕೋಟಿ ರು. ವೆಚ್ಚದಲ್ಲಿ ರಾಗಿಮುದ್ದನಹಳ್ಳಿ ಹಾಗೂ ಹೆಳವರಕೊಪ್ಪಲು ಗ್ರಾಮಗಳ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಭೂಮಿಪೂಜೆ ಸಲ್ಲಿಸಲಾಗುವುದು.

ಪಾಂಡವಪುರ:

ತಾಲೂಕಿನ ರಾಗಿಮುದ್ದನಹಳ್ಳಿ ಹಾಗೂ ಹೆಳವರಕೊಪ್ಪಲು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಅನುದಾನದ 1.75 ಕೋಟಿ ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿ ಪೂಜೆ ಸಲ್ಲಿಸಿದರು.

ರಾಗಿಮುದ್ದನಹಳ್ಳಿಯಲ್ಲಿ 1.05 ಕೋಟಿ ರು. ವೆಚ್ಚದಲ್ಲಿ ಡಿಂಕಾ ಸಂಪರ್ಕಿಸುವ ರಸ್ತೆ ಹಾಗೂ ಹೆಳವರಕೊಪ್ಪಲು ಗ್ರಾಮದಲ್ಲಿ 70 ಕೋಟಿ ರು. ವೆಚ್ಚದಲ್ಲಿ ರಾಗಿಮುದ್ದನಹಳ್ಳಿ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆಸಲ್ಲಿಸಿದರು.

ನಂತರ ಶಾಸಕರು ಮಾತನಾಡಿ, ಗುಮ್ಮನಹಳ್ಳಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿಗಾಗಿ ಅಂದಾಜು 7 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ. ಇದರಲ್ಲಿ 1.75 ಕೋಟಿ ರು. ವೆಚ್ಚದಲ್ಲಿ ರಾಗಿಮುದ್ದನಹಳ್ಳಿ ಹಾಗೂ ಹೆಳವರಕೊಪ್ಪಲು ಗ್ರಾಮಗಳ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಭೂಮಿಪೂಜೆ ಸಲ್ಲಿಸಲಾಗುವುದು, ಉಳಿದಂತೆ ಕ್ಷೇತ್ರದಲ್ಲಿ ಬಾಕಿ ಇರುವ ಗ್ರಾಮಗಳ ಅಭಿವೃದ್ಧಿಗೂ ಕ್ರಮ ವಹಿಸಲಾಗುವುದು ಎಂದರು.

ಈ ವೇಳೆ ಮುಖಂಡರಾದ ಎಇಇ ಜೈಕುಮಾರ, ಶ್ಯಾಮ್, ಪ್ರಕಾಶ್, ಗುತ್ತಿಗೆದಾರ ಕೃಷ್ಣಪ್ಪ, ಮಹೇಶ್, ಆರ್.ವಿ.ಜಯಣ್ಣ, ಕುಮಾರ್, ರುಕ್ಮಾಂಗದ, ನಾಗಣ್ಣ, ಜಯರಾಮು ಹೆಳವರಕೊಪ್ಪಲು ಮುಖಂಡರಾದ ಬಸವಣ್ಣ, ಮಂಜುನಾಥ್, ಸೋಮ, ರವಿ, ಪಾಪಯ್ಯ ಸೇರಿದಂತೆ ಹಲವರು ಹಾಜರಿದ್ದರು.ಇಂದಿನಿಂದ ಬಸವೇಶ್ವರಸ್ವಾಮಿ ಬಸಪ್ಪನ ಮುದ್ರಾಧಾರಣೆ

ಕನ್ನಡಪ್ರಭ ವಾರ್ತೆ ಹಲಗೂರುಸಮೀಪದ ವಿ.ಬಸಾಪುರ ಗ್ರಾಮದ ಬಸವೇಶ್ವರಸ್ವಾಮಿ ದೇವಸ್ಥಾನದಲ್ಲಿ ದೇವರ ಬಸಪ್ಪನವರ ಮುದ್ರಾಧಾರಣೆ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿದೆ.

ಮೇ 13ರಂದು ಸಂಜೆ ಗಣಪತಿ ಪೂಜೆ ಪುಣ್ಯಹಃ ಪಂಚಗವ್ಯ, ಪ್ರೋಕ್ಷಣೆ ಹಾಗೂ ಗಣಪತಿ ಸಹಿತ ಪರಿವಾರ ದೇವತಾ ಹೋಮ, ಲಘು ಪೂರ್ಣಾಹುತಿ ಮತ್ತು ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.ಮೇ 14ರ ಬೆಳಗ್ಗೆ ಶುಭ ಬ್ರಾಹ್ಮಿ ಮುಹೂರ್ತದಲ್ಲಿ ಪ್ರದಾನ ಕಳಸ ಸ್ಥಾಪನೆ, ನವಗ್ರಹ, ಮೃತ್ಯುಂಜಯ ಹೋಮ, ಗ್ರಾಮ ದೇವತಾ ಪೂಜೆ ಅಭಿಷೇಕ, ಗಣಪತಿ ಹಾಗೂ ಪರಿವಾರ ದೇವತಾ ಹೋಮ, ಶ್ರೀಬಸಪ್ಪನವರಿಗೆ ಮುದ್ರಾಧಾರಣೆ ಮಂತ್ರ ಧೀಕ್ಷೆ ಪ್ರಧಾನ ಹೋಮ, ಕಲಾ ಹೋಮ, ನೂತನ ಕಲ್ಯಾಣಿಯಿಂದ ಹೊ-ಹೊಂಬಾಳೆ ಸಮೇತ ಶ್ರೀ ಕಾರ್ಕಳಿ ಬಸಪ್ಪ, ಹಲಗೂರು ಶ್ರೀಅಘೋರ ಭದ್ರಕಾಳಿ ಬಸಪ್ಪ, ಶ್ರೀಬಸವೇಶ್ವರ ಬಸಪ್ಪ ವಿ.ಬಸಾಪುರ ದೇವರುಗಳ ಮೆರವಣಿಗೆ ಮಾಡಲಾಗುತ್ತದೆ. ನಂತರ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಮಧ್ಯಾಹ್ನ 12.30ಗಂಟೆಗೆ ‘ಅನ್ನಸಂತರ್ಪಣೆ’ ಏರ್ಪಡಿಸಲಾಗಿದೆ. ವಿದ್ವಾನ್ ಪ್ರಸಾದ್ ಅಘೋರ ಹಾಗೂ ಶ್ರೀಚಂದ್ರಶೇಖರ್ ಆರಾಧ್ಯರ ಸಮ್ಮುಖದಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ವಿ.ಬಸಾಪುರ, ಎನ್.ಕೋಡಿಹಳ್ಳಿ, ಒದುಬಸಪ್ಪನದೊಡ್ಡಿ, ಮಾರಗೌಡನಹಳ್ಳಿ, ವಳಗೆರೆದೊಡ್ಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಆಗಮಿಸಿ ಶ್ರೀಬಸವೇಶ್ವರಸ್ವಾಮಿ ಕೃಪೆಗೆ ಪಾತ್ರರಾಗಬೇಕೆಂದು ನಾಗಣ್ಣ, ನಾಗೇಂದ್ರ, ಬಿ.ಆನಂದ, ಚಂದ್ರಹಾಸ, ಕೆ.ನಂಜುಂಡೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂದುವರೆದ ಚಿರತೆ ಉಪಟಳ: ಗ್ರಾಮಸ್ಥರಲ್ಲಿ ಮನೆಮಾಡಿದ ಆತಂಕ
ಸರ್ಕಾರಿ ಕಚರಿಗಳಲ್ಲಿ ಕಡತಗಳ ಪರಿಶೀಲನೆ, ಸಮಗ್ರ ತನಿಖೆ ನಡೆಯಲಿ: ಕಿರಂಗೂರು ಪಾಪು