ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಕೋಡಹಳ್ಳಿ - ಹೊಸೂರು ಗ್ರಾಮದಲ್ಲಿ ₹25 ಲಕ್ಷ ವೆಚ್ಚ, ಟಿ.ಎಸ್.ಛತ್ರ ಗ್ರಾಮದಲ್ಲಿ ₹25 ಲಕ್ಷ ವೆಚ್ಚ, ಸಂಗಾಪುರ ಗ್ರಾಮದಲ್ಲಿ ₹40 ಲಕ್ಷ , ನರಹಳ್ಳಿಯಲ್ಲಿ ₹20 ಲಕ್ಷ ಹಾಗೂ ಮೇನಾಗರ ಗ್ರಾಮದಲ್ಲಿ ₹20 ಲಕ್ಷ ವೆಚ್ಚದ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಶಾಸಕರು, ವೈರಮುಡಿ ಉತ್ಸವದ ಹೆಚ್ಚುವರಿ ಅನುದಾನ ಹಾಗೂ ಪ್ರವಾಹ ಪೀಡಿತ ಹೆಚ್ಚುವರಿ ಅನುದಾನ ಬಳಕೆ ಮಾಡಿ ತಾಲೂಕಿನ ಕೆ.ಹೊಸೂರು, ಟಿ.ಎಸ್.ಛತ್ರ, ಸಂಗಾಪುರ, ಮೇನಾಗರ ಹಾಗೂ ನರಹಳ್ಳಿ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಸಲ್ಲಿಸಲಾಗಿದೆ ಎಂದರು.ಗ್ರಾಮಗಳಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂಬ ಉದ್ದೇಶದಿಂದ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಗ್ರಾಮಗಳ ಅಭಿವೃದ್ಧಿಗೂ ಶ್ರಮಿಸಲಾಗುವುದು ಎಂದು ತಿಳಿಸಿದರು.
ಬನಘಟ್ಟ ಬಳಿ ನಿರ್ಮಿಸಿರುವ ಸೇತುವೆ ಕಾಮಗಾರಿ ವೈಜ್ಞಾನಿಕವಾಗಿದೆ ಎಂಬ ವರದಿ ಬಂದಿರುವ ಹಿನ್ನೆಲೆಯಲ್ಲಿ ಶೀಘ್ರವೇ ರಸ್ತೆ ಸರಿಪಡಿಸಿ ಚಾಲನೆ ನೀಡಲಾಗುವುದು. ಜತೆಗೆ ವಿಸಿ ನಾಲೆ ಕಾಮಗಾರಿಯನ್ನೂ ಸಹ ಆರಂಭಿಸಲಾಗುವುದು ಎಂದು ಹೇಳಿದರು.
ಈ ವೇಳೆ ಕೆ.ಹೊಸೂರು ಗ್ರಾಮದ ಮುಖಂಡರಾದ ಮಂಜು, ಸ್ವಾಮೀಗೌಡ, ಮಧು, ಚಲುವೇಗೌಡ, ಪಾಪಣ್ಣ, ನಾಗಣ್ಣ, ಲೋಕೇಶ್, ಶಂಕರನಾರಾಯಣ, ಸಂಗಾಪುರ ಜಗದೀಶ್, ಪ್ರಕಾಶ್, ಸಣ್ಣೇಗೌಡ, ರಮೇಶ್, ವಿಶ್ವ, ಶಂಕರ್, ನರಹಳ್ಳಿ ಗ್ರಾಮದ ಬೋರೇಗೌಡ, ಶಿವಣ್ಣ, ನಂದೀಶ್, ಸ್ವಾಮೀಗೌಡ, ಜಯರಾಮು, ಕುಮಾರ್ ,ಮರೀಗೌಡ, ಮೇನಾಗರ ಕುಮಾರ್, ಜವರೇಗೌಡ, ಚಲುವರಾಜು ಸೇರಿ ಟಿ.ಎಸ್.ಛತ್ರ ಗ್ರಾಮದ ಮುಖಂಡರು, ಕಾರ್ಯಕರ್ತರು, ಮುಖಂಡರು ಹಾಜರಿದ್ದರು.