ರಸ್ತೆ, ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿ ಪೂಜೆ

KannadaprabhaNewsNetwork |  
Published : Jul 17, 2024, 12:48 AM IST
16ಕೆಎಂಎನ್ ಡಿ23 | Kannada Prabha

ಸಾರಾಂಶ

ಕೇಂದ್ರ ಸರ್ಕಾರದ ಮಹತ್ತರ ಯೋಜನೆಗಳಲ್ಲಿ ಒಂದಾದ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಯೋಜನೆಯನ್ನು ರಾಜ್ಯದಲ್ಲಿ ತ್ವರಿಗತಿಯಲ್ಲಿ ನಡೆಸಲಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ ಶೇ.40 ರಷ್ಟು ಕಾಮಗಾರಿ ನಡೆದಿದ್ದು ಇಂದು ಮೇಲುಕೋಟೆ ಕ್ಷೇತ್ರದ ಎಣ್ಣೆಹೊಳೆಕೊಪ್ಪಲು ಗ್ರಾಮದಲ್ಲಿ ಕಾಮಗಾರಿಗೆ ಪೂಜೆ ನೆರವೇರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ನಾರ್ತ್ ಬ್ಯಾಂಕ್ ಗ್ರಾಮದಲ್ಲಿ 10.75 ಕೋಟಿ ರು. ವೆಚ್ಚದಲ್ಲಿ ಕೆಆರ್‌ಎಸ್ ಅಣೆಕಟ್ಟೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಹಾಗೂ ತಾಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮದಲ್ಲಿ 90 ಲಕ್ಷ ರು. ವೆಚ್ಚದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿ ಪೂಜೆ ನೆರವೇರಿಸಿದರು.

ಕೇಂದ್ರ ಸರ್ಕಾರದ ಮಹತ್ತರ ಯೋಜನೆಗಳಲ್ಲಿ ಒಂದಾದ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಯೋಜನೆಯನ್ನು ರಾಜ್ಯದಲ್ಲಿ ತ್ವರಿಗತಿಯಲ್ಲಿ ನಡೆಸಲಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ ಶೇ.40 ರಷ್ಟು ಕಾಮಗಾರಿ ನಡೆದಿದ್ದು ಇಂದು ಮೇಲುಕೋಟೆ ಕ್ಷೇತ್ರದ ಎಣ್ಣೆಹೊಳೆಕೊಪ್ಪಲು ಗ್ರಾಮದಲ್ಲಿ ಕಾಮಗಾರಿಗೆ ಪೂಜೆ ನೆರವೇರಿಸಲಾಗಿದೆ ಎಂದರು.

ನಾರ್ತ್ ಬ್ಯಾಂಕ್ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿಗೆ 10.75 ಕೋಟಿ ರು.ಹಣ ಬಿಡುಗಡೆ ಮಾಡಿದ್ದೇವೆ. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಆರಂಭಿಸಿರಲಿಲ್ಲ. ಈಗ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ಈ ವೇಳೆ ಗ್ರಾಪಂ ಅಧ್ಯಕ್ಷ ರಮೇಶ್, ಸದಸ್ಯರಾದ ಪುಟ್ಟಸಿದ್ದಮ್ಮ, ಹಾಗನಹಳ್ಳಿ ಶಿವಕುಮಾರ್, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ಕೆನ್ನಾಳು ಪಿ.ನಾಗರಾಜು, ಮುಖಂಡರಾದ ಹಾಗನಹಳ್ಳಿ ಗೋಪಾಲ್, ಕ್ಯಾತನಹಳ್ಳಿ ರಾಘವೇಂದ್ರ, ಸಹಾಯಕ ಕಾರ್ಯಪಾಲಕ ಎಂಜನಿಯರ್ ಅಬು, ಸಹಾಯಕ ಎಂಜನಿಯರ್ ಶಿವಕುಮಾರ್, ದಸಂಸ ಮುಖಂಡ ಡಿ.ಕೆ.ಅಂಕಯ್ಯ ಇತರರಿದ್ದರು.

ನಾನು ನಿಮ್ಮೂರಿನ ಮಗನಿದ್ದಂತೆ: ನಟ ಪ್ರಕಾಶ್ ರೈ

ಶ್ರೀರಂಗಪಟ್ಟಣ:ಕೆ.ಶೆಟ್ಟಹಳ್ಳಿಯಲ್ಲಿ ಮನೆ, ತೋಟ ಮಾಡಿ ವಾಸಿಸುತ್ತಿದ್ದೇನೆ. ಈಗ ನಾನು ನಿಮ್ಮೂರಿನ ಮಗ ಇದ್ದಂತೆ. ಈ ಗ್ರಾಮದ ಅಭಿವೃದ್ಧಿಗೆ ನನ್ನ ಸಹಕಾರವಿದೆ ಎಂದು ನಟ ಪ್ರಕಾಶ್ ರೈ ಹೇಳಿದರು.

ತಾಲೂಕಿನ ಕೆ.ಶೆಟ್ಟಹಳ್ಳಿ ಸ್ಮಶಾನದಲ್ಲಿ ಶವ ಹೂಳಲು ಬಂದ ಜನರಿಗೆ ಮಳೆ, ಬಿಸಿಲಿನಿಂದ ರಕ್ಷಿಸಿಕೊಳ್ಳಲು ನಿರ್ಮಿಸಿದ್ದ ಛಾವಣಿ ಸಾರ್ವಜನಿಕರ ಬಳಕೆ ನೀಡಿ ನಂತರ ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.ಈ ಗ್ರಾಮದ ಶಾಲೆ, ಆಸ್ಪತ್ರೆ ಸೇರಿದಂತೆ ಸಾರ್ವಜನಿಕರ ಕೆಲಸಗಳಿಗೆ ನನ್ನ ಸಹಕಾರವಿದೆ. ಮೊದಲು ಇಲ್ಲಿನ ಸರ್ಕಾರಿ ಶಾಲಾ ಮಕ್ಕಳಿಗೆ ಅಗತ್ಯವಿರುವ ಮೂಲ ಸೌಕರ್ಯಗಳ ಕಲ್ಪಿಸಲು ಮುಂದಾಗುತ್ತೇನೆ. ಗ್ರಾಮಸ್ಥರು ಸಹ ನನ್ನನ್ನು ಬಳಸಿಕೊಂಡು ಗ್ರಾಮದ ಅಭಿವೃದ್ಧಿಗೆ ಮುಂದಾಗಬೇಕು ಎಂದರು.

ಈ ವೇಳೆ ಜಿಪಂ ಮಾಜಿ ಸದಸ್ಯ ಎಸ್.ಎಲ್ ಲಿಂಗರಾಜು, ಬೆಟ್ಟೇಗೌಡ, ಶ್ರೀಕಂಠಯ್ಯ, ಬೋರೇಗೌಡ, ಮಂಜುನಾಥ್, ಮಹೇಶ್, ಮುರುಳಿ, ಗೌರಿಪುರ ಮಹೇಶ್, ರವಿ, ಚುಂಚೇಗೌಡ, ಎಂ.ಶೆಟ್ಟಹಳ್ಳಿ ತಿಬ್ಬಣ್ಣ ಸೇರಿದಂತೆ ಇತರರು ಪ್ರಕಾಶ್ ರೈ ಅವರನ್ನು ಅಭಿನಂದಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ