ಗಡಿಪ್ರದೇಶದ ರಸ್ತೆಡಾಂಬರೀಕರಣ ಪರಿಶೀಲಿಸಿದ ಶಾಸಕ ಡಾ.ಜಾಧವ್‌

KannadaprabhaNewsNetwork |  
Published : Nov 16, 2026, 01:15 AM IST
 | Kannada Prabha

ಸಾರಾಂಶ

ತಾಲೂಕಿನ ಗಡಿ ಭಾಗದ ವೆಂಕಟಾಪುರ, ವಂಟಿಚಿಂತಾ ತಾಂಡಾ ಹಾಗೂ ಲಚಮಾಸಾಗರ ವ್ಯಾಪ್ತಿಯಲ್ಲಿ ಒಟ್ಟು 22.50 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ವಿವಿಧ ರಸ್ತೆ ಮತ್ತು ಸೇತುವೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಶಾಸಕ ಡಾ. ಅವಿನಾಶ್ ಜಾಧವ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಚಿಂಚೋಳಿ

ತಾಲೂಕಿನ ಗಡಿ ಭಾಗದ ವೆಂಕಟಾಪುರ, ವಂಟಿಚಿಂತಾ ತಾಂಡಾ ಹಾಗೂ ಲಚಮಾಸಾಗರ ವ್ಯಾಪ್ತಿಯಲ್ಲಿ ಒಟ್ಟು 22.50 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ವಿವಿಧ ರಸ್ತೆ ಮತ್ತು ಸೇತುವೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಶಾಸಕ ಡಾ. ಅವಿನಾಶ್ ಜಾಧವ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಲೂಕಿನ ವೆಂಕಟಾಪುರ ಹಾಗೂ ವಂಟಿಚಿಂತಾ ತಾಂಡಾದ ಮುಖ್ಯ ರಸ್ತೆ ಅಭಿವೃದ್ಧಿ, ಲಚಮಾಸಾಗರದಿಂದ ಗಡಿ ಪ್ರದೇಶದವರೆಗೆ ₹20 ಕೋಟಿ ವೆಚ್ಚದ ರಸ್ತೆ ಡಾಂಬರೀಕರಣ ಮತ್ತು ₹2.50 ಕೋಟಿ ವೆಚ್ಚದ ಸಣ್ಣ ಸೇತುವೆ ದುರಸ್ತಿ ಕಾಮಗಾರಿಗಳನ್ನು ವೀಕ್ಷಿಸಿದ ಶಾಸಕರಿಗೆ, ಸ್ಥಳೀಯ ಮುಖಂಡರು ಕಾಮಗಾರಿಯ ಗುಣಮಟ್ಟದ ಬಗ್ಗೆ ದೂರು ನೀಡಿದರು.

ವೆಂಕಟಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜು ರಾಠೋಡ್ ಮಾತನಾಡಿ, ಲಚಮಾಸಾಗರ, ತಾಂಡೂರ, ಕುಂಚಾವರಂ ಹಾಗೂ ಜಹೀರಾಬಾದ್ ಮಾರ್ಗದ ರಸ್ತೆ ಕಾಮಗಾರಿ ಗುಣಮಟ್ಟದಿಂದ ನಡೆಯುತ್ತಿಲ್ಲ ಎಂದು ಶಾಸಕರ ಗಮನಕ್ಕೆ ತಂದರು. ಚಾಪಲಾನಾಯಕ ತಾಂಡಾ ಬಿಜೆಪಿ ಮುಖಂಡ ವಿಜಯಕುಮಾರ್ ರಾಥೋಡ್ ಮಾತನಾಡಿ, ಕಳೆದ ವರ್ಷದ ಭಾರಿ ಮಳೆಗೆ ಶಾದಿಪೂರ್, ಜವಾಹರ್ ನಗರ್ ತಾಂಡಾ, ಮಗ್ದಂಪೂರ್, ಚಿಕ್ಕ ಲಿಂಗದಳ್ಳಿ ಹಾಗೂ ಸೇವುನಾಯಕ ತಾಂಡಾ ಸಂಪರ್ಕಿಸುವ ಸಣ್ಣ ಸೇತುವೆ ಕೊಚ್ಚಿ ಹೋಗಿತ್ತು. ಪ್ರಸ್ತುತ ನಡೆಯುತ್ತಿರುವ ದುರಸ್ತಿ ಕಾರ್ಯದ ಪ್ರಗತಿ ಮತ್ತು ಗುಣಮಟ್ಟ ಸಮರ್ಪಕವಾಗಿಲ್ಲ ಎಂದು ವಿವರಿಸಿದರು. ಬಿಜೆಪಿ ಮುಖಂಡ ವೆಂಕಟರೆಡ್ಡಿ ಪಾಟೀಲ್ ಮಾತನಾಡಿ, ₹22.50 ಕೋಟಿ ವೆಚ್ಚದ ಕಾಮಗಾರಿಗಳ ಸ್ಥಿತಿಗತಿ ಪರಿಶೀಲಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದು, ಈ ಕುರಿತು ''''''''ಪ್ರಜಾ ಸೇವೆ ಅಭಿಯಾನ''''''''ದಲ್ಲಿ ತಹಸೀಲ್ದಾರ್ ಅವರಿಗೂ ದೂರು ಸಲ್ಲಿಸಲಾಗಿದೆ ಎಂದರು.

ಮುಖಂಡರ ದೂರುಗಳಿಗೆ ತಕ್ಷಣ ಸ್ಪಂದಿಸಿದ ಶಾಸಕ ಡಾ. ಅವಿನಾಶ್ ಜಾಧವ್, ಕಾಮಗಾರಿಯ ಗುಣಮಟ್ಟವನ್ನು ಖುದ್ದಾಗಿ ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, ರಸ್ತೆ ಮತ್ತು ಸೇತುವೆ ನಿರ್ಮಾಣದಲ್ಲಿ ಯಾವುದೇ ಕಾರಣಕ್ಕೂ ಕಳಪೆ ಗುಣಮಟ್ಟ ಕಂಡುಬರದಂತೆ ಅಧಿಕಾರಿಗಳು ನಿಗಾ ವಹಿಸಬೇಕು. ನಿಗದಿತ ಕಾಲಮಿತಿಯೊಳಗೆ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರು ಹಾಗೂ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಕಾಮಗಾರಿಗಳು ಪೂರ್ಣಗೊಂಡರೆ ಗಡಿಭಾಗದ ತೆಲಂಗಾಣದ ರಾಜ್ಯದ ಜಹಿರಬಾದ ಸಂಗಾರೆಡ್ಡಿ ನಗರ ಪ್ರದೇಶಗಳಿಗೆ ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ರೈತರ ಓಡಾಟಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.

ಮುಖಂಡರಾದ ಉಮಾಪತಿ ಶಿವರಾಮಪುರ, ಸಂಜೀವ್ ಪವಾರ್, ಚಂದ್ರಶೆಟ್ಟಿ ಜಾಧವ್, ಗೋಪಾಲ ಬಿ., ಅನಸೂಯಮ್ಮ ಗೊಲ್ಲಾ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀದಿ ನಾಯಿಗಳ ರೌದ್ರಾವತಾರ: ದನವನ್ನು ಕಚ್ಚಿ ಕೊಂದ ಶ್ವಾನಗಳ ಹಿಂಡು!
ಜನರ ಸಮಸ್ಯೆಗೆ ಸೂಕ್ತ, ತ್ವರಿತ ಪರಿಹಾರ ಕಲ್ಪಿಸಿ: ಶಾಸಕ ಎಚ್.ವಿ. ವೆಂಕಟೇಶ್