ಕನ್ನಡಪ್ರಭ ವಾರ್ತೆ ಕಲಬುರಗಿಕಲಬುರಗಿಯಲ್ಲಿಂದು ನಡೆದ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ವಸ್ತ್ರ ಸಂಹಿತೆ ವಿಚಾರವಾಗಿ ಸೆಂಟರೊಂದರಲ್ಲಿ ಅಧಿಕಾರಿಗಳ ತಕರಾರು ಪರೀಕ್ಷೆ ಬರೆಯಲು ಬಂದಿದ್ದ ಅಭ್ಯರ್ಥಿಗಳ ತಲೆ ಬಿಸಿಗೆ ಕಾರಣವಾಗಿತ್ತು. ಇದರಿಂದಾಗಿ ಇಲ್ಲಿನ ಸೂಪರ್ ಮಾರ್ಕೇಟ್‌ನ ತಹಸೀಲ್ದಾರ್ ಕಚೇರಿ ಹಿಂಬದಿ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪರೀಕ್ಷಾ ಕೇಂದ್ರದೊಳಗೆ ಹೋಗಲಾಗದೆ ಅಭ್ಯರ್ಥಿಗಳು ಒಂದೂವರೆ ಗಂಟೆಗಳ ಕಾಲ ಬೀದಿಯಲ್ಲೇ ನಿಂತು ಪರದಾಡಿದರು.ಬೆಳ್ಳಂ ಬೆಳಗ್ಗೆ ಸರಿಯಾಗಿ 8 ಕ್ಕೆ ಪರೀಕ್ಷಾ ಕೇಂದ್ರಕ್ಕೆ ಬರಬೇಕು, ವಿಳಂಬವಾದಲ್ಲಿ ಪ್ರವೇಶ ನಿರಾಕರಿಸಲಾಗುತ್ತದೆ ಎಂಬ ಕೆ ಪಿಎಸ್‌ಸಿ ನಿಯಮದಂತೆ ಅಭ್ಯರ್ಥಿಗಳು ಸಂಟರ್‌ಗೆ ಬಂದರಾದರೂ ಜೀನ್ಸ್ ತೊಟ್ಟಿದ್ದಾರೆಂಬ ಕಾರಣಕ್ಕೆ ಅನೇಕರನ್ನು (ಯುವತಿಯರೇ ಹೆಚ್ಚು) ಪರೀಕ್ಷಾ ಕೇಂದ್ರದೊಳೆಗೆ ಬಿಡಲೇ ಇಲ್ಲ.ಸೆಂಟರ್‌ನ ಮಹಿಳಾ ಅಧಿಕಾರಿಯೊಬ್ಬರು ಈ ಬಗ್ಗೆ ವಿವರಣೆ ಕೇಳಲು ಮುಂದಾದ ಪೋಷಕರು, ಅಭ್ಯರ್ಥಿಗಳನ್ನೇ ಗದರುತ್ತ ಸೆಂಟರ್ ಪ್ರವೇಶ ಮಾಡಲು ಅವಕಾಶ ಕೊಡದೆ ರಸ್ತೆಯಲ್ಲೇ ಕಾಯುವಂತೆ ಸೂಚಿಸಿದಾಗ ಅಭ್ಯರ್ಥಿಗಳು, ಪೋಷಕರು ಕಂಗಾಲಾದರು.ಕೆಲವರು ಅಲ್ಲಿದ್ದ ಅಧಿಕಾರಿಗೆ ಹಾಲ್ ಟಿಕೆಟ್‌ನಲ್ಲಿರುವ ವಸ್ತ್ರ ಸಂಹಿತೆ ಓದಿ ತೋರಿಸಿ ಇಲೆಲ್ಲೂ ಜಿನ್ಸ್ ನಿಷೇಧವಿಲ್ಲವೆಂದು ಹೇಳಿದರಾದರೂ ಅವರು ಕಿವಿಗೆ ಹಾಕಿಕೊಳ್ಳಲೇ ಜೀನ್ಸ್ ಧಾರಿ ಅಭ್ಯರ್ಥಿಗಳನ್ನೆಲ್ಲ ಸೇಂಟರ್ ಹೊರಗಡೆಯೇ ಕಾಯುವಂತೆ ಮಾಡಿದಾಗ ಅನೇಕರು ತೀವ್ರ ಗೊಂದಲಕ್ಕೊಳಗಾದರಲ್ಲದೆ ಅದೆಲ್ಲಿಂದ ಬೇರೆ ಪ್ಯಾಂಟ್ ತರುವುದೆಂದು ಪರದಾಡಿದರು.
*ಬಿಗಿ ಬಂದೋಬಸ್ತ್ ನಿಯೋಜನೆ: ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಪ್ರತಿ ಕೇಂದ್ರವನ್ನು ಪೊಲೀಸ್ ಆಫೀಸರ್ ಉಸ್ತುವಾರಿಯಲ್ಲಿದೆ. ಲೋಹ ಶೋಧಕ ಬಳಸಿ ತಪಾಸಣೆ ಮಾಡಲಾಗುತ್ತಿದೆ. ಇಎನ್‌ಟಿ ವೈದ್ಯರನ್ನೂ ತಪಾಸಣೆಗೆ ನಿಯೋಜಿಸಲಾಗಿದೆ, 4 ಸೆಂಟರ್‌ಗಳ ಉಸ್ತುವಾರಿಗೆ ಓರ್ವ ಎಸಿಪಿ ರ್‍ಯಾಂಕ್ ಅಧಿಕಾರಿ ನಿಯೋಜಿಸಲಾಗಿದೆ ಎಂದು ಪರೀಕ್ಷಾ ಬಂದೋಬಸ್ತ್ ಉಸ್ತುವಾರಿ ಹೊಣೆ ಹೊತ್ತಿರುವ ನಗರ ಪೊಲೀಸ್ ಕಮೀಷನರ್ ಡಾ. ಶರಣಪ್ಪ ಢಗೆ ಹೇಳಿದರು.
ವಸ್ತ್ರ ಸಂಹಿತೆ ಗೊಂದಲ: ಕ್ರಮಕ್ಕೆ ಆಗ್ರಹ: ಪ್ರತಿ ಪರೀಕ್ಷಾ ಕೇಂದ್ರಕ್ಕೆ ತಲಾ ಒಬ್ಬರಂತೆ ಉಪ ಅಧೀಕ್ಷಕರು (ಗ್ರೂಪ್ ಎ), ಪ್ರಶ್ನೆಪತ್ರಿಕೆ ಪಾಲಕರು (ಗ್ರೂಪ್ ಬಿ), ವಸ್ತ್ರ ಸಂಹಿತೆ ಅಧಿಕಾರಿ (Dress Code Officer - ಗ್ರೂಪ್ ಬಿ) ಹಾಗೂ ಸ್ಥಳೀಯ ನಿರೀಕ್ಷಣಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಪರೀಕ್ಷೆಯ ಸದ್ದತೆ ಬಗ್ಗೆ ಮಾಹಿತಿ ನೀಡಿದ್ದರು. ಈ ಕೇಂದ್ರದಲ್ಲಿ ಅದ್ಯಾಕೆ ವಸ್ತ್ರ ಸಂಹಿತೆ ವಿಚಾರದಲ್ಲಿ ಕಿರಿಕ್ ಮಾಡಿ ಅಭ್ಯರ್ಥಿಗಳ ತಲೆಬಿಸಿ ಮಾಡಯಲಾಯ್ತೋ? ಎಂಬ ಪ್ರಶ್ನೆಗೆ ಜಿಲ್ಲಾಡಳಿತವೇ ಉತ್ತರಿಸಬೇಕಿದೆ. ವಸ್ತ್ರಸಂಹಿತೆ ಕುರಿತು ಅನಗತ್ಯ ಗೊಂದಲ ಸೃಷ್ಟಿಸಿ ಅಭ್ಯರ್ಥಿಗಳ ಮಾನಸಿಕ ಸ್ಥೈರ್ಯ ಕುಗ್ಗಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಪಾಲಕರು, ಸಾರ್ವಜನಿಕರು ಒತ್ತಾಯಿಸಿದರು.ಘಟನೆ ಬಗ್ಗೆ ಪರಿಶೀಲನೆ: ಡಿಸಿ:ಪರೀಕ್ಷಾ ಕೇಂದ್ರಗಳನ್ನು ಸುತ್ತಾಡಿರುವ ಜಿಲ್ಲಾಧಿಕಾರಿ ಇಕ್ರಂ ಷರೀಫ್ ಅವರು ಅಭ್ಯರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಉಸ್ತುವಾರಿ ವಹಿಸಿದ್ದಾರೆ. ಜೀನ್ಸ್ ಧರಿಸಿದವರಿಗೆ ಹೊರಗಡೆ ನಿಲ್ಲುವಂತೆ ಮಾಡಿರುವ ಪ್ರಕರಣದ ಬಗ್ಗೆ ತಾವು ಗಮನ ಹರಿಸುವುದಾಗಿಯೂ ಜಿಲ್ಲಾಧಿಕಾರಿ ಇಕ್ರಮ್ ಷರೀಫ್ ಭರವಸೆ ನೀಡಿದ್ದಾರೆ. ಉಳಿದೆಲ್ಲಾ ಕೇಂದ್ರಗಳಲ್ಲಿ ಯಾವುದೇ ತೊಂದರೆ ಇಲ್ಲದಂತೆ ಪರೀಕ್ಷೆಗಳು ಸುಗಮವಾಗಿ ನಡೆದಿವೆ.