ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಭೂಕುಸಿತ ಸಂಭವಿಸಿರುವ ಜಾಗದಲ್ಲಿ ತಡೆಗೋಡೆ ನಿರ್ಮಿಸಲು ಕ್ರಮಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಅರ್ಬಝ್ ಅವರಿಗೆ ಸೂಚಿಸಿದರು. ಭೂಕುಸಿತದಿಂದ ಕಾಫಿ ತೋಟಕ್ಕೆ ಹಾನಿಯಾಗಿದ್ದು, ತೋಟ ಮಾಲಿಕರಿಗೆ ಸೂಕ್ತ ಪರಿಹಾರ ನೀಡುವಂತೆ ತಹಸೀಲ್ದಾರ್ ಕೃಷ್ಣಮೂರ್ತಿ ಅವರಿಗೆ ಸೂಚಿಸಿದರು. ಗ್ರಾಮದ ದೇವಾಲಯಕ್ಕೆ ಹೋಗುವ ರಸ್ತೆ ಅಭಿವೃದ್ಧಿಗೆ ಅನುದಾನ ಕಲ್ಪಿಸುವಂತೆ ಕೂತಿ ಗ್ರಾಮದ ಅಧ್ಯಕ್ಷ ಎಚ್.ಎಂ.ಜಯರಾಮ್ ಮನವಿ ಮಾಡಿದರು. ಶಾಸಕರು ಸೂಕ್ತ ಅನುದಾನ ಕಲ್ಪಿಸುವ ಭರವಸೆ ನೀಡಿದರು.
ಕೂತಿ ಗ್ರಾಮಭಿವೃದ್ಧಿ ಮಂಡಳಿ ಕಾರ್ಯದರ್ಶಿ ಯಾದವ್, ಖಜಾಂಚಿ ಲಕ್ಷ್ಮಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಗ್ರಾಮಸ್ಥರಾದ ಪ್ರಕಾಶ್, ಜಗದೀಶ್, ಗ್ರಾಮ ಆಡಳಿತ ಅಧಿಕಾರಿ ಕರಿಬಸವರಾಜು ಇದ್ದರು.