ಕನ್ನಡಪ್ರಭ ವಾರ್ತೆ ಮೈಸೂರು
ಆಲನಹಳ್ಳಿಯ ಕುದೇರು ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಆಂಧ್ರಪ್ರದೇಶದಲ್ಲಿ ಅನೇಕ ಉಚಿತ ಯೋಜನೆ ನೀಡಿದರೂ ಮನ್ನಣೆ ನೀಡದೆ ಅಲ್ಲಿನ ಜನರು ಮನೆಗೆ ಕಳುಹಿಸಿದರು. ಅಂತೆಯೇ ಕರ್ನಾಟಕದಲ್ಲಿ ಐದು ಗ್ಯಾರಂಟಿ ನೀಡಿದರೂ ಒಂಬತ್ತು ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಫ್ರೀ ಕೊಟ್ಟರೂ ಬೇಡವೆಂದು ಮನೆಗೆ ನಡೆಯಿರಿ ಅಂಥ ಕಳುಹಿಸಿದ್ದಾರೆ ಎಂದರು.
ಸಾಮಾಜಿಕ ನ್ಯಾಯದ ಹರಿಕಾರರಾಗಿ ಸಮಾನತೆ ತಂದುಕೊಟ್ಟ ಬಸವಣ್ಣನ ಹಾದಿಯಲ್ಲಿ ನಡೆಯಬೇಕು. ಮನುಷ್ಯ ಮನುಷ್ಯನಾಗಿ ಉಳಿಯಲು, ಧರ್ಮದ ಹಾದಿಯಲ್ಲಿ ಸಾಗಿದರೆ ಸಮ ಸಮಾಜ ನಿರ್ವಾಣವಾಗಲಿದೆ ಎಂದು ಅವರು ಹೇಳಿದರು.ಕಾಯಕ ಮಾಡಿ ಸಮಾಜಕ್ಕೆ ಕೊಡಬೇಕು. ಆದರೆ, ದುಡಿಯದೆ ಸಂಪಾದಿಸಬೇಕು ಎಂಬ ದುರಾಸೆ ಮಾನವನ ಅವನತಿಗೆ ಕಾರಣವಾಗಲಿದೆ. ಆಂದ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ಸರ್ಕಾರ ಇದ್ದಾಗ ಎಲ್ಲಾ ಉಚಿತವಾಗಿ ನೀಡಲಾಯಿತು. ಆದರೆ, ಅಲ್ಲಿ ಫ್ರೀ ಬೇಡ ನಡೆಯಿರಿ ಮನೆಗೆ ಅಂಥ ಕಳುಹಿಸಿಕೊಟ್ಟರು. ದುಡಿದು ಮೂರು ಹೊತ್ತು ಊಟ ವಾಡುವುದು ಮುಖ್ಯ ಹೊರತು ಉಚಿತವಾಗಿ ಮಾಡುವುದು ಧರ್ಮವಲ್ಲ. ಕರ್ನಾಟಕದಲ್ಲೂ 9 ಸ್ಥಾನಗಳನ್ನು ನೀಡಿ ಮನೆಗೆ ಕಳುಹಿಸಿದರು ಎಂದು ಅವರು ಟೀಕಿಸಿದರು.
ನಾನು ಯಡಿಯೂರಪ್ಪ ಅವರು ಸಿಎಂ ಆಗಬೇಕೆಂದು ಅವರೊಂದಿಗೆ ಕೈ ಜೋಡಿಸಿದೆ. ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗ್ತಾರೆ ಅಂದೆ. ಆದರೆ, ಸಿದ್ದರಾಮಯ್ಯ ಅವರು ಜಿಟಿಡಿ ಹೇಳಿದಾಕ್ಷಣ ಸಿಎಂ ಆಗುವುದಕ್ಕೆ ಸಾಧ್ಯನಾ ಅಂದರು. ಹದಿನೈದು ದಿನಗಳಲ್ಲಿ ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು. ಅದೇ ರೀತಿ ಬಿ.ವೈ. ವಿಜಯೇಂದ್ರ ಅವರಿಗೂ ಮುಂದೆ ಉಜ್ವಲ ಭವಿಷ್ಯವಿದೆ. ಮುಂದೊಂದು ದಿನ ರಾಜ್ಯದ ಮುಖ್ಯಮಂತ್ರಿ ಆಗುವ ಅವಕಾಶವನ್ನು ದೇವರ ಆಶೀರ್ವಾದದ ಬಲದಿಂದ ದೊರೆಯಲಿದೆ ಎಂದು ಹೇಳಿದರು.