ಕನ್ನಡಪ್ರಭ ವಾರ್ತೆ ಮೈಸೂರು
ಮಾರಕವಾಗಿ ಪರಿಣಮಿಸಿರುವ ಡೆಂಘೀ ತಡೆಗೆ ಅಧಿಕಾರಿಗಳು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು, ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಶಾಸಕ ಜಿ.ಟಿ. ದೇವೇಗೌಡ ಕಿವಿಮಾತು ಹೇಳಿದರು.ನಗರದ ಜಲದರ್ಶಿನಿ ಅತಿಥಿಗೃಹದ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ಸೊಳ್ಳೆಯಿಂದ ರೋಗ ಹರಡುತ್ತಿರುವುದರಿಂದ ಟ್ಯಾಂಕ್ ಗಳಲ್ಲಿ ಪ್ರತಿ ಮೂರು ದಿನಗಳಿಗೆ ಒಮ್ಮೆ ನೀರು ಬದಲಿಸಬೇಕು. ಡೆಂಘಿ ಮತ್ತು ಚಿಕೂನ್ ಗುನ್ಯಾ ಮುಂತಾದ ರೋಗಗಳು ದೇಶದಾದ್ಯಂತ ಹರಡುತ್ತಿರುವುದರಿಂದ ಈ ಬಗ್ಗೆ ಮುಂಜಾಗ್ರತೆ ಅಗತ್ಯ ಎಂದರು.
ಶುಚಿಯಾದ ನೀರಿನಲ್ಲಿ ಹೆಚ್ಚಾಗಿ ಈ ಸೊಳ್ಳೆಗಳು ಹುಟ್ಟುತ್ತವೆ. ಬೆಳಗ್ಗೆ 8 ಗಂಟೆಯಿಂದ ಬೆಳಗ್ಗೆ ೯ ಗಂಟೆ ಹಾಗೂ ಸಂಜೆ ವೇಳೆ ಸಂಜೆ 5 ರಿಂದ ಸೆಂಜೆ 7 ಗಂಟೆಯವರೆಗೆ ಈ ಸೊಳ್ಳೆಗಲು ಕಚ್ಚುತ್ತವೆ. ಸಾರ್ವಜನಿಕರಿಂದ ಕಸ ಸಂಗ್ರಹಿಸುವಾಗ ಸ್ವಚ್ಛತೆಯ ಬಗ್ಗೆಯೂ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.ಆವುದೇ ಮಾದಿರಿಯ ಜ್ವರವಿದ್ದರೂ ರಕ್ತ ಪರೀಕ್ಷೆ ಮಾಡಿಸುವುದನ್ನು ಮರೆಯಬಾರದು. ಸಾರ್ವಜನಿಕರಿಗೆ ಈ ಸಂಬಂಧ ಸೂಕ್ತ ಮಾಹಿತಿ ನೀಡಬೇಕು ಎಂದು ಅವರು ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಬೋಗಾದಿ ಪಪಂ ಮುಖ್ಯಾಧಿಕಾರಿ, ನಮ್ಮ ವ್ಯಾಪ್ತಿಯಲ್ಲಿ ಸುಮಾರು 8 ಮಂದಿಗೆ ಜ್ವರ ಕಂಡುಬಂದಿತ್ತು. ಈ ಪೈಕಿ 3 ಮಂದಿಗೆ ಡೆಂಘೀ ದೃಢಪಟ್ಟಿದೆ. ನಮ್ಮ ವ್ಯಾಪ್ತಿಯಲ್ಲಿ ಒಳಚರಂಡಿ ಸಮಸ್ಯೆ ಸಾಕಷ್ಟು ಇದ್ದು, ಇದನ್ನು ಕೂಡಲೇ ಬಗೆಹರಿಸಿಕೊಡುವಂತೆ ಹೇಳಿದರು.ಶ್ರೀರಾಂಪುರ ಪಪಂ ಮುಖ್ಯಾಧಿಕಾರಿ ಮಾತನಾಡಿ, ನಮ್ಮ ಬಡಾವಣೆಯಲ್ಲಿ ಸ್ವಚ್ಛತೆಗೆ ಯಾವುದೇ ಕೊರತೆ ಇಲ್ಲ. ಮನೆ ಮನೆ ಕಸ ಸಂಗ್ರಹಿಸಿ ಮನೀಡಲಾಗುತ್ತಿದೆ. ಅನೇಕರಿಗೆ ಜ್ವರ ಬಂದು ಆರೋಗ್ಯವಾಗಿದ್ದು, ಅವರಲ್ಲಿ ಡೆಂಘೀ ಸೊಂಕು ಕಾಣಿಸಿಕೊಂಡಿಲ್ಲ ಎಂದರು.
ನಗರ ಪಾಲಿಕೆ, ತಾಪಂ ಮತ್ತು ತಾಲೂಕು ಆರೋಗ್ಯಾಧಿಕಾರಿಗಳು ಇದ್ದರು.