ಸಹಕಾರ ಕ್ಷೇತ್ರಕ್ಕೆ ಶಾಸಕ ಗಣೇಶ್ ಪ್ರವೇಶ

KannadaprabhaNewsNetwork |  
Published : Jun 27, 2025, 12:48 AM IST
ಮೈಮುಲ್‌ ಚುನಾವಣೇಲಿಮಹದೇವಪ್ರಸಾದ್‌ ಸೋತಿದ್ರು…ಗುಂಡ್ಲುಪೇಟೆ : ರಾಜಕೀಯ ಚಾಣಾಕ್ಷ ದಿವಂಗತ ಎಚ್.ಎಸ್.ಮಹದೇವಪ್ರಸಾದ್‌ ಸಹಕಾರ ಕ್ಷೇತ್ರಕ್ಕೆ ಶಾಸಕರಾಗುವುದಕ್ಕೂ ಮುನ್ನ ಕಾಲಿಟ್ಟು ಮೈಸೂರು ಜಿಲ್ಲಾ ಹಾಲು ಒಕ್ಕೂಟಕ್ಕೆ ಜನತ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ೧೯೭೮-೭೯ ರ ಸಮಯದಲ್ಲಿ ನಡೆದ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಚ್.ಎಸ್.ಮಹದೇವಪ್ರಸಾದ್‌ ಕೇವಲ ಒಂದು ಮತದಿಂದ ಸೋಲು ಕಂಡಿದ್ದರು. ಬಳಿಕ ೧೯೯೪ ರಲ್ಲಿ ಶಾಸಕರಾಗಿ ಸತತವಾಗಿ ಐದು ಬಾರಿ ಶಾಸಕರಾದರು.ಬಳಿಕ ಆಹಾರ ಮತ್ತು ನಾಗರೀಕ ಪೂರೈಕೆ,ಕನ್ನಡ ಸಂಸ್ಕೃತಿ ಸಚಿವ ಮತ್ತು ಸಹಕಾರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.ಆದರೆ ಸಹಕಾರ ಕ್ಷೇತ್ರದಲ್ಲಿ ಗೆಲ್ಲಲು ಆಗಿರಲಿಲ್ಲ ಎಚ್‌ಎಸ್‌ಎಂಗೆ | Kannada Prabha

ಸಾರಾಂಶ

ದಿ.ಮಾಜಿ ಸಚಿವ ಎಚ್.ಎಸ್.ಮಹದೇವಪ್ರಸಾದ್‌ ತಮ್ಮ ಕುಟುಂಬವನ್ನು ಅವರ ಕಾಲದಲ್ಲಿ ರಾಜಕೀಯದಿಂದ ದೂರ ಇಟ್ಟಿದ್ದರು. ಆದರೀಗ ಕಾಲ ಬದಲಾಗಿ, ಮಹದೇವಪ್ರಸಾದ್‌ ಪುತ್ರ ಎಚ್.ಎಂ.ಗಣೇಶ್‌ ಪ್ರಸಾದ್‌ ಮೊದಲ ಪ್ರಯತ್ನದಲ್ಲೇ ಶಾಸಕರಾದರು. ಇದೀಗ ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಸಹಕಾರ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.

ಗುಂಡ್ಲುಪೇಟೆ: ದಿ.ಮಾಜಿ ಸಚಿವ ಎಚ್.ಎಸ್.ಮಹದೇವಪ್ರಸಾದ್‌ ತಮ್ಮ ಕುಟುಂಬವನ್ನು ಅವರ ಕಾಲದಲ್ಲಿ ರಾಜಕೀಯದಿಂದ ದೂರ ಇಟ್ಟಿದ್ದರು. ಆದರೀಗ ಕಾಲ ಬದಲಾಗಿ, ಮಹದೇವಪ್ರಸಾದ್‌ ಪುತ್ರ ಎಚ್.ಎಂ.ಗಣೇಶ್‌ ಪ್ರಸಾದ್‌ ಮೊದಲ ಪ್ರಯತ್ನದಲ್ಲೇ ಶಾಸಕರಾದರು. ಇದೀಗ ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಸಹಕಾರ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.

ಮೈಮುಲ್‌ ಚುನಾವಣೇಲಿ ಮಹದೇವಪ್ರಸಾದ್‌ ಸೋತಿದ್ರು:

ರಾಜಕೀಯ ಚಾಣಾಕ್ಷ್ಯ ದಿ.ಎಚ್.ಎಸ್.ಮಹದೇವಪ್ರಸಾದ್‌ ಸಹಕಾರ ಕ್ಷೇತ್ರಕ್ಕೆ ಶಾಸಕರಾಗುವುದಕ್ಕೂ ಮುನ್ನ ಕಾಲಿಟ್ಟು ಮೈಸೂರು ಜಿಲ್ಲಾ ಹಾಲು ಒಕ್ಕೂಟಕ್ಕೆ ಜನತಾ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ೧೯೭೮-೭೯ ರ ಸಮಯದಲ್ಲಿ ನಡೆದ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಚ್.ಎಸ್.ಮಹದೇವಪ್ರಸಾದ್‌ ಕೇವಲ ಒಂದು ಮತದಿಂದ ಸೋಲು ಕಂಡಿದ್ದರು. ಬಳಿಕ ೧೯೯೪ ರಲ್ಲಿ ಶಾಸಕರಾಗಿ ಸತತವಾಗಿ ಐದು ಬಾರಿ ಶಾಸಕರಾದರು. ಬಳಿಕ ಆಹಾರ ಮತ್ತು ನಾಗರಿಕ ಪೂರೈಕೆ, ಕನ್ನಡ ಸಂಸ್ಕೃತಿ ಸಚಿವ ಮತ್ತು ಸಹಕಾರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಆದರೆ ಸಹಕಾರ ಕ್ಷೇತ್ರದಲ್ಲಿ ಗೆಲ್ಲಲು ಎಚ್‌ಎಸ್‌ಎಂಗೆ ಆಗಿರಲಿಲ್ಲ. ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಚುನಾವಣೆಯಲ್ಲಿ ನಿಲ್ಲುವ ಆಸೆ ಮೊದಲಿಗೆ ಇರಲಿಲ್ಲ. ಈ ಬಾರಿ ಎಂಸಿಡಿಸಿಸಿ ಬ್ಯಾಂಕ್‌ನ ಅಧಿಕಾರ ಹಿಡಿಯಲೇಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಠಕ್ಕೆ ಬಿದ್ದ ಹಿನ್ನಲೆ ಅವರ ಮಾತಿಗೆ ಕಟ್ಟು ಬಿದ್ದು ತಾವೇ ಸ್ಪರ್ಧಿಸಿ, ಮೊದಲ ಗೆಲವು ಸಾಧಿಸುವ ಮೂಲಕ ಸ್ವಪಕ್ಷ ಹಾಗೂ ವಿಪಕ್ಷಗಳಿಗೆ ಅಚ್ಚರಿ ಮೂಡಿಸಿದ್ದಾರೆ.

ಸಿಎಂಗೆ ಕೊಟ್ಟ ಮಾತು ಉಳಿಸಿಕೊಂಡ ಗಣೇಶ್‌!

ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಕೊಟ್ಟ ಮಾತಿನಂತೆ ಚುನಾವಣೆಯಲ್ಲಿ ಗೆದ್ದು ಸಿಎಂ ಸಿದ್ದರಾಮಯ್ಯಗೆ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಕೂಡ ಚುನಾವಣೆಯಲ್ಲಿ ಸ್ಪರ್ಧಿಸದೆ, ಕಾರ್ಯಕರ್ತರಿಗೆ ಅವಕಾಶ ಮಾಡಿಕೊಟ್ಟು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಅವರು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ.

ಗುಂಡ್ಲುಪೇಟೆ ಕ್ಷೇತ್ರದಲ್ಲಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಮಾತ್ರ ಸಿಎಂ ಅವರ ಸೂಚನೆಗೆ ಕಟ್ಟು ಬಿದ್ದು ಸ್ಪರ್ಧಿಸಿ, ಡೆಲಿಗೇಟ್ಸ್‌ಗಳ ಜೊತೆ ಚರ್ಚಿಸಿ ಗೆಲ್ಲುವ ಮೂಲಕ ಗಣೇಶ್‌ ಪ್ರಸಾದ್‌ ಕೂಡ ಮಾತು ಉಳಿಸಿಕೊಂಡಿದ್ದಾರೆ. ಶಾಸಕ ಸ್ಥಾನವಿದೆ, ಇವರಿಗ್ಯಾಕೆ ಎಂಸಿಡಿಸಿಸಿ ಬ್ಯಾಂಕ್‌ ಸ್ಪರ್ಧಿಸುತ್ತಾರೆಂಬ ವಿಪಕ್ಷಗಳ ಟೀಕೆ, ಟಿಪ್ಪಣಿಗಳ ನಡುವೆ ಜೊತೆಗೆ ಕಾಂಗ್ರೆಸ್‌ ಡೆಲಿಗೇಟ್ಸ್‌ಗಳಲ್ಲಿ ಮೂರು ಬಣಗಳಿದ್ದು ಒಂದು ಬಣಕ್ಕೆ ಅವಕಾಶ ಕೊಟ್ಟರೆ ಮತ್ತೊಂದು ಬಣ ತಟಸ್ಥರಾದರೆ ಗೆಲುವು ಕಷ್ಟ ಎಂದು ಶಾಸಕ ಗಣೇಶ್‌ ಪ್ರಸಾದ್‌ರೇ ಸ್ಪರ್ಧಿಸಿದ್ದರು. ವಿಜಯ ಮಾಲೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಕೊರಳಿಗೆ ಬಿದ್ದಿದೆ. ಶಾಸಕ ಸ್ಥಾನದ ಜೊತೆಗೆ ಎಂಸಿ ಡಿಸಿಸಿ ಬ್ಯಾಂಕ್‌ ನೂತನ ನಿರ್ದೇಶಕರಾಗಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಹಾಗೂ ರೈತರಿಗೆ ಸಾಲ ಕೊಡಿಸುವ ಕೆಲಸ ಮಾಡಲಿ ಎಂಬುದು ಕಾರ್ಯಕರ್ತರ ಮಾತಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತರೀಕೆರೆಯಲ್ಲಿಂದು ಶ್ರೀ ಗುರು ರೇವಣಸಿದ್ದೇಶ್ವರ ಸ್ವಾಮಿ ನೂತನ ರಥೋತ್ಸವ
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್‌ ಸಂಚಾರ