1.66 ಕೋಟಿ ರು. ಅಭಿವೃದ್ಧಿಗೆಶಾಸಕ ಗಣೇಶ್‌ ಭೂಮಿಪೂಜೆ

KannadaprabhaNewsNetwork |  
Published : May 06, 2026, 01:45 AM IST
ಹರವೆ ಹೋಬಳಿ ವ್ಯಾಪ್ತಿಯಲ್ಲಿ ಕಾಡಾದಿಂದ ೧.೬೬ ಕೋಟಿ  ವೆಚ್ಚದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿ | Kannada Prabha

ಸಾರಾಂಶ

ತಾಲೂಕಿನ ಹರವೆ ಹೋಬಳಿಯ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ ಬೆಟ್ಟದಪುರ, ಸಾಗಡೆ, ಕೂಟೇಗೌಡನ ಹುಂಡಿ ಹಾಗೂ ಕೆಂಗಾಕಿ ಗ್ರಾಮಗಳ ರೈತರ ಜಮೀನುಗಳಿಗೆ ಹೋಗುವ ರಸ್ತೆಗಳ ಅಭಿವೃದ್ಧಿಗೆ ಕಾವೇರಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದಿಂದ ೧.೬೬ ಕೋಟಿ ರು. ಬಿಡುಗಡೆಯಾಗಿದೆ ಎಂದು ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ತಾಲೂಕಿನ ಹರವೆ ಹೋಬಳಿಯ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ ಬೆಟ್ಟದಪುರ, ಸಾಗಡೆ, ಕೂಟೇಗೌಡನ ಹುಂಡಿ ಹಾಗೂ ಕೆಂಗಾಕಿ ಗ್ರಾಮಗಳ ರೈತರ ಜಮೀನುಗಳಿಗೆ ಹೋಗುವ ರಸ್ತೆಗಳ ಅಭಿವೃದ್ಧಿಗೆ ಕಾವೇರಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದಿಂದ ೧.೬೬ ಕೋಟಿ ರು. ಬಿಡುಗಡೆಯಾಗಿದೆ ಎಂದು ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ತಿಳಿಸಿದರು.4 ಗ್ರಾಮಗಳ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರೆವೇರಿಸಿ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ವಿಶೇಷ ಕಾಳಜಿ ಮತ್ತು ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ ಅವರ ಮುರ್ತುವಜಿಯಿಂದ ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ೧.೬೬ ಕೋಟಿ ರು. ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಅವರಿಗೆ ನಿಮ್ಮೆಲ್ಲರ ಪರವಾಗಿ ಹಾಗೂ ಕ್ಷೇತ್ರದ ಶಾಸಕನಾಗಿ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದರು.ಬೆಟ್ಟದಪುರದಿಂದ ಹೊಸಹಳ್ಳಿ ಕಟ್ಟೆವರಿಗೆ ರಸ್ತೆ ಅಭಿವೃದ್ಧಿಗೆ ೫೪ ಲಕ್ಷ ರು. ಸರ್ಕಾರಿ ಶಾಲೆಯ ರಸ್ತೆಯಿಂದ ಗುರುಬಸಪ್ಪ ಅವರ ಜಮೀನಿನ ರಸ್ತೆವರೆಗೆ ೨೬ ಲಕ್ಷ ರು., ಕೂಟೇಗೌಡನಹುಂಡಿಯಲ್ಲಿ ಮರಿಗೌಡನ ಜಮೀನಿನಿಂದ ಶಿವೇಗೌಡನ ಜಮೀನನವರೆಗಿನ ರಸ್ತೆ ಅಬಿವೃದ್ಧಿಗೆ ೧೫ ಲಕ್ಷ ರು. ಕೆಂಗಾಕಿ ಗ್ರಾಮದ ಪಿ. ಮಹದೇವಯ್ಯ ಜಮೀನಿನಿಂದ ಕೃಷ್ಣಮೂರ್ತಿ ಜಮೀನಿನವರೆಗೆ ೧೫ ಲಕ್ಷ ರು., ಕೆಂಗಾಕಿ ಗ್ರಾಮದ ಮಂಜು ಜಮೀನಿನಿಂದ ಸಾಗಡೆ ಮುಖ್ಯರಸ್ತೆವರೆಗೆ ೧೪ ಲಕ್ಷ ರು. ಸಾಗಡೆ ಗ್ರಾಮದ ಬಸವಣ್ಣನ ಜಮೀನಿನಿಂದ ಬಸವೇಶ್ವರ ದೇವಸ್ಥಾನದವರೆಗೆ ೧೦ ಲಕ್ಷ ರು. ಸಾಗಡೆ ವೆಂಕಟರಮಣ ನಾಯಕರ ಜಮೀನಿನಿಂದ ಸಿದ್ದಪ್ಪನ ಜಮೀನಿನವರೆಗೆ 8 ಲಕ್ಷ ರು. ಸಾಗಡೆ ಬಿಳಿಗಿರಿನಾಯಕರ ಜಮೀನಿನಿಂದ ಚಿಕ್ಕಯ್ಯನ ಕಾಲುವೆಗೆವರೆಗೆ ರಸ್ತೆ ಅಭಿವೃದ್ಧಿಗೆ ೨೪ ಲಕ್ಷ ರು.ಗಳು ಸೇರಿದಂತೆ ೧.೬೬ ಕೋಟಿ ರು. ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿದ್ದೇವೆ ಎಂದರು.

ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿ, ಕಾವೇರಿ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷನಾದ ಬಳಿಕ ಈ ಭಾಗದ ರೈತರ ಮನವಿಯ ಮೇರೆಗೆ ಹಾಗೂ ಶಾಸಕರ ಸೂಚನೆಯಂತೆ ೧.೬೬ ಕೋಟಿ ರೂ.ಗಳ ರಸ್ತೆ ಅಭಿವೃದ್ದಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ರೈತರು ಗುಣಮಟ್ಟದ ಕಾಮಗಾರಿ ನಡೆಯಲು ಅನುವು ಮಾಡಿಕೊಡಬೇಕು. ರಸ್ತೆ ಅಭಿವೃದ್ದಿ ಮತ್ತು ಜಂಗಲ್ ಕಟ್ಟಿಂಗ್ ಸೇರಿದಂತೆ ಒತ್ತುವರಿ ತೆರವು ಮತ್ತು ರಸ್ತೆಗಳ ಅಭಿವೃದ್ದಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಜಿ.ಪಂ. ಮಾಜಿ ಸದಸ್ಯ ಕೆರೆಹಳ್ಳಿ ನವೀನ್, ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕ್ಷೇತ್ರ ಅಭಿವೃದ್ದಿ ಶರವೇಗದಲ್ಲಿ ಸಾಗುತ್ತಿದೆ. ೧೧೦ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯು ಸಹ ಕಾರ್ಯಗತವಾಗಿದೆ. ಅಲ್ಲದೇ ಕಾಡಾದಿಂದ ಇಂದು ರೈತರ ಜಮೀನುಗಳಿಗೆ ಹೋಗುವ ರಸ್ತೆಗಳ ಅಭಿವೃದ್ದಿಗೆ ೧.೬೬ ಕೋಟಿ ರೂ. ವಿನಿಯೋಗ ಸೇರಿದಂತೆ ಗ್ಯಾರಂಟಿ ಯೋಜನೆಗಳ ನಡುವೆಯು ಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂಗಳ ಅನುದಾನದಲ್ಲಿ ಅಭಿವೃದ್ದಿ ಯಾಗುತ್ತಿದೆ. ಆದೇ ರೀತಿ ಹರವೆ ಭಾಗzಲ್ಲಿ ೨ ಹಂತದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಶಾಸಕರು ಕೈಗೆತ್ತಿಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಕೆರೆಹಳ್ಳಿ ನವೀನ್, ಜಿಲ್ಲಾ ಕಾಂಗ್ರೆಸ್‌ ಮಹಿಳಾ ಅಧ್ಯಕ್ಷೆ ನಾಗರತ್ನ, ರೇಖಾ, ಗ್ರಾಪಂ ಮಾಜಿ ಅಧ್ಯಕ್ಷ ಶಿವಕುಮಾರ್‌, ಮಹೇಶ್, ಗ್ರಾಪಂ ಸದಸ್ಯ ಕಾಡಪ್ಪ, ಸೋಮಶೇಖರ್‌, ಶಿವಕುಮಾರ್‌, ನಾಗೇಂದ್ರ, ಮಾಜಿ ತಾಪಂ ಸದಸ್ಯ ಶೋಭಾ ಮಹೇಶ್, ನಂಜುಂಡ ನಾಯಕ, ಬಂಗಾರ ನಾಯಕ, ಬಸವಶೆಟ್ಟಿ, ವೆಂಕಟರಮಣ ನಾಯಕ, ಪಟೇಲ್ ಸುರೇಶ್, ನಟರಾಜು, ಗೌಡಿಕೆ ರೇವಣ್ಣ ಆನಂದ್ ಮೊದಲಾದವರು ಇದ್ದರು.

---

5ಸಿಎಚ್ಎನ್10ಚಾಮರಾಜನಗರ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಗಣೇಶ್‌ ಪ್ರಸಾದ್‌, ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ ಶಂಕುಸ್ಥಾಪನೆ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಂಚಮಸಾಲಿ ಸಮಾಜದ ಸಂಕಲ್ಪ ಈಡೇರಿಸದ ಟ್ರಸ್ಟ್
ಗುಡಾಳ್‌ನಲ್ಲಿ ನೀರಿನ ಬವಣೆ ನೀಗಿಸಿದ ಶಾಸಕ ಬಸವಂತಪ್ಪ