ಕನ್ನಡಪ್ರಭ ವಾರ್ತೆ ಗು೦ಡ್ಲಪೇಟೆ
ಚಾಮರಾಜನಗರ ಮೀಸಲು ಲೋಕಸಭೆ ಕ್ಷೇತ್ರದಲ್ಲಿ ನಿರೀಕ್ಷೆಯಂತೆಯೇ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್‌ಗೆ 18,038 ಮತಗಳ ಲೀಡ್ ಬಂದಿದ್ದು, ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸುಭದ್ರವಾಗಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮತ್ತೆ ನಿರೂಪಿಸಿದ್ದಾರೆ.ಲೋಕಸಭೆ ಚುನಾವಣೆಯ ಮತ ಎಣಿಕೆಯ 18 ಸುತ್ತಿನಲ್ಲಿ 16 ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್‌ಗೆ ಲೀಡ್ ಬಂದರೆ, ಕೇವಲ 2 ಸುತ್ತಿನಲ್ಲಿ ಮಾತ್ರ ಎನ್‌ಡಿಎ ಅಭ್ಯರ್ಥಿ ಎಸ್.ಬಾಲರಾಜ್‌ಗೆ ಲೀಡ್ ಬಂದಿದೆ.
1 ನೇ ಸುತ್ತಿನಲ್ಲಿ ಬಿಜೆಪಿಗೆ 3727, ಕಾಂಗ್ರೆಸ್‌ಗೆ 6121, 2 ನೇ ಸುತ್ತಿನಲ್ಲಿ ಬಿಜೆಪಿಗೆ 27, ಕಾಂಗ್ರೆಸ್‌ಗೆ 5494, 3 ನೇ ಸುತ್ತಿನಲ್ಲಿ ಬಿಜೆಪಿಗೆ 4322, ಕಾಂಗ್ರೆಸ್‌ಗೆ 5034, 4 ನೇ ಸುತ್ತಿನಲ್ಲಿ ಬಿಜೆಪಿಗೆ 4229, ಕಾಂಗ್ರೆಸ್‌ಗೆ 4804, 5 ನೇ ಸುತ್ತಿನಲ್ಲಿ ಬಿಜೆಪಿಗೆ 4334, ಕಾಂಗ್ರೆಸ್‌ಗೆ 5075, 6 ನೇ ಸುತ್ತಿನಲ್ಲಿ ಬಿಜೆಪಿಗೆ 5800, ಕಾಂಗ್ರೆಸ್‌ಗೆ 4152, 7 ನೇ ಸುತ್ತಿನಲ್ಲಿ ಬಿಜೆಪಿಗೆ 4451, ಕಾಂಗ್ರೆಸ್‌ಗೆ 5052, 8 ನೇ ಸುತ್ತಿನಲ್ಲಿ ಬಿಜೆಪಿಗೆ 5957, ಕಾಂಗ್ರೆಸ್‌ಗೆ 4317, 9 ನೇ ಸುತ್ತಿನಲ್ಲಿ ಬಿಜೆಪಿಗೆ 3964, ಕಾಂಗ್ರೆಸ್‌ಗೆ 4850, 10 ನೇ ಸುತ್ತಿನಲ್ಲಿ ಬಿಜೆಪಿಗೆ 3293, ಕಾಂಗ್ರೆಸ್‌ಗೆ 4175, 11 ನೇ ಸುತ್ತಿನಲ್ಲಿ ಬಿಜೆಪಿಗೆ 3624, ಕಾಂಗ್ರೆಸ್ ಗೆ 4747, 12 ನೇ ಸುತ್ತಿನಲ್ಲಿ ಬಿಜೆಪಿಗೆ 3829, ಕಾಂಗ್ರೆಸ್ ಗೆ 6262, 13 ನೇ ಸುತ್ತಿನಲ್ಲಿ ಬಿಜೆಪಿಗೆ 4823, ಕಾಂಗ್ರೆಸ್‌ಗೆ 5137, 14 ನೇ ಸುತ್ತಿನಲ್ಲಿ ಬಿಜೆಪಿಗೆ 3122, ಕಾಂಗ್ರೆಸ್‌ಗೆ 6541, 15 ನೇ ಸುತ್ತಿನಲ್ಲಿ ಬಿಜೆಪಿಗೆ 4172, ಕಾಂಗ್ರೆಸ್‌ಗೆ 6568, 16 ನೇ ಸುತ್ತಿನಲ್ಲಿ ಬಿಜೆಪಿಗೆ 4285, ಕಾಂಗ್ರೆಸ್‌ಗೆ 6997, 17 ನೇ ಸುತ್ತಿನಲ್ಲಿ ಬಿಜೆಪಿಗೆ 4176, ಕಾಂಗ್ರೆಸ್‌ಗೆ 5053, 18 ನೇ ಸುತ್ತಿನಲ್ಲಿ ಬಿಜೆಪಿಗೆ 3741, ಕಾಂಗ್ರೆಸ್‌ಗೆ 3835 ಮತಗಳು ಲಭಿಸಿವೆ. ಕಾಂಗ್ರೆಸ್ ಅಭ್ಯರ್ಥಿ ಸುನೀಲ್‌ಗೆ 94,214 ಮತಗಳು ಬಂದರೆ, ಸೋಲು ಕಂಡ ಬಿಜೆಪಿಯ ಪರಾಜಿತ ಅಭ್ಯರ್ಥಿ ಎಸ್.ಬಾಲರಾಜ್‌ಗೆ 76,176 ಮತಗಳು ಬಂದಿವೆ. ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್‌ಗೆ ಗುಂಡ್ಲುಪೇಟೆ ಕ್ಷೇತ್ರದಲ್ಲಿ 18,038 ಮತಗಳ ಲೀಡ್ ಬಂದಿದೆ.-----------