ಸಚಿವ ಖರ್ಗೆ, ರಹೀಂ ಖಾನ್‌ಗೆ ಶಾಸಕ ಗಂಟಿಹೊಳೆ ಮನವಿ

KannadaprabhaNewsNetwork |  
Published : Nov 15, 2025, 02:30 AM IST
14ಗಂಟಿಹೊಳೆಶಾಸಕ ಗಂಟಿಹೊಳೆ ಅವರು ಸಚಿವ ಪ್ರಿಯಾಂಕ್ ಖರ್ಗೆಗೆ ಮನವಿ ಸಲ್ಲಿಸಿದರು  | Kannada Prabha

ಸಾರಾಂಶ

ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಕ್ಷೇತ್ರದ ಪ್ರಮುಖರೊಂದಿಗೆ ಬೆಂಗಳೂರಿನಲ್ಲಿಸಚಿವರನ್ನು ಭೇಟಿ ಮಾಡಿ ಬೈಂದೂರು ಪಟ್ಟಣ ಪಂಚಾಯತ್‌ನ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದರು.

ಬೈಂದೂರು: ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಕ್ಷೇತ್ರದ ಪ್ರಮುಖರೊಂದಿಗೆ ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಪೌರಾಡಳಿತ ಸಚಿವ ರಹೀಮ್ ಖಾನ್ ಮತ್ತು ಪೌರಾಡಳಿತ ಇಲಾಖೆಯ ಕಾರ್ಯದರ್ಶಿ ದೀಪ .ಎಂ ಚೋಳನ್ ಅವರನ್ನು ಭೇಟಿ ಮಾಡಿ ಬೈಂದೂರು ಪಟ್ಟಣ ಪಂಚಾಯತ್‌ನ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದರು.ಬೈಂದೂರಿನ ಗ್ರಾಮೀಣ ರೈತರಿಗೆ ಪಟ್ಟಣ ಪಂಚಾಯತ್‌ ನಿಯಮಗಳಿಂದ ಆಗುತ್ತಿರುವ ಸಂಕಷ್ಟಗಳ ಕುರಿತು ಮನವರಿಕೆ ಮಾಡಿದರು ಹಾಗೂ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.ಪ್ರಸ್ತುತ ಬೈಂದೂರು ಪ.ಪಂ.ನಲ್ಲಿರುವ ಗ್ರಾಮೀಣ ಭಾಗವನ್ನು ಕೈಬಿಟ್ಟು ಹೊಸದಾಗಿ ಪ.ಪಂ. ವ್ಯಾಪ್ತಿಯನ್ನು ಮರುವಿಂಗಡಣೆ ಮಾಡಿ, ಬಫರ್ ಜೋನ್ ಮಿತಿಯನ್ನು ಕೈಬಿಟ್ಟು, ಆ ಪ್ರದೇಶದಲ್ಲಿ ಗ್ರಾಪಂಗಳಿಗೆ ಅನ್ವಯಿಸುವ ನಿಯಮಗಳನ್ನು ಅಳವಡಿಸಿ, ಅಕ್ರಮ ಸಕ್ರಮ, 94 ಸಿ ಮತ್ತು ಕುಮ್ಕಿ, ವಸತಿ ಯೋಜನೆ ಇತ್ಯಾದಿ ಸರಕಾರಿ ಯೋಜನೆಗಳ ಹಕ್ಕುಗಳನ್ನು ನೀಡಿ ಗ್ರಾಮೀಣ ಬಡಜನರ ಹಿತ ಕಾಪಾಡಲು ಕ್ರಮ ವಹಿಸುವ ಬಗ್ಗೆ ಮನವಿ ಮಾಡಿದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವದ್ವಯರು ಹಾಗೂ ಕಾರ್ಯದರ್ಶಿಗಳು ಅತಿ ಶೀಘ್ರದಲ್ಲಿ ಈ ಬಗ್ಗೆ ಆದ್ಯತೆ ಮೇರೆಗೆ ನಿಯಮಾನುಸಾರ ಕ್ರಮವಹಿಸಿ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯನ್ನು ಆನೆ ಅಟ್ಟಿಸಿ ಹೋಗಿ ತುಳಿದು ಹತ್ಯೆ
ಸರ್ಕಾರದಿಂದ ಪಾಲಿಕೆಗೆ ಅನುದಾನ ಬಂದಿಲ್ಲ