ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಗೋಪಾಲಕೃಷ್ಣ ಅವರು ಒಬ್ಬ ಹಿರಿಯ ಶಾಸಕರು. ಅವರಲ್ಲಿ ಅಧಿಕಾರಕ್ಕಾಗಿ ಪೈಪೋಟಿ ಇದೆ. ಕಾಂಗ್ರೆಸ್‌ನಲ್ಲಿ ವಿಪಕ್ಷದವರನ್ನು ಯಾರು ಬೈಯುತ್ತಾರೆ ಅವರಿಗೆ ಸ್ಥಾನ ಸಿಗುತ್ತದೆ. ಈ ಕಾರಣಕ್ಕೆ ಬೇಳೂರು ಇಲ್ಲಸಲ್ಲದ ಆರೋಪ ಮಾಡುತ್ತಿರಬಹುದು ಎಂದು ಸಂಸದ ಬಿ.ವೈ.ರಾಘವೇಂದ್ರ ಲೇವಡಿ ಮಾಡಿದರು.ಶಿವಮೊಗ್ಗದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ನಾನು ಉತ್ತರಿಸುವುದು ನನಗೆ ಮತ ನೀಡಿದ ಮತದಾರರಿಗೆ ಮಾತ್ರ. ನಾನು ಅವರಿಗೆ ನಿಷ್ಠೆಯಿಂದ ಇರುವವನು. ಇನ್ಯಾರಿಗೋ ನಾನು ಉತ್ತರ ಕೊಡುವ ಅಗತ್ಯ ನನಗಿಲ್ಲ ಎಂದರು.
ಡಿಸಿಸಿ ಬ್ಯಾಂಕಿನಲ್ಲಿ ಹಗರಣ ಆರೋಪ ಕುರಿತು ಪ್ರತಿಕ್ರಿಸಿದ ಅವರು, ದೇವರ ದಯೆಯಿಂದ ಆ ಕೆಲಸ ಮಾಡುವ ದರ್ದು ನನಗಿಲ್ಲ. ಅವರ ಆರೋಪ ಮುಚ್ಚಿಕೊಳ್ಳಲು ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಯಾರೇ ತಪ್ಪು ಮಾಡಿದರೂ ತನಿಖೆ ಆಗಲಿ ಎಂದರು.7ನೇ ವೇತನ ಆಯೋಗದ ಬಗ್ಗೆ ಚರ್ಚೆ ಮಾಡಬೇಕೇ ಹೊರತು ಅಧಿಕಾರಿಗಳ ವರ್ಗಾವಣೆ ಮಾಡಿದರೆ ಏನು ಆಗಲ್ಲ. ಆಡಳಿತ ವ್ಯವಸ್ಥೆ ತಿದ್ದಿಕೊಳ್ಳಬೇಕು. ಗ್ಯಾರಂಟಿ ಯೋಜನೆ ಜಾರಿಗೆ ಹಣ ವಿನಿಯೋಗಿಸುತ್ತಿದ್ದಾರೆ. ಅಭಿವೃದ್ಧಿಗೆ ಹಣ ಕೊಡುತ್ತಿಲ್ಲ. ಜನಪರ ಆಡಳಿತ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.ಷಡಾಕ್ಷರಿ ಆಗಲಿ, ಮತ್ತೊಬ್ಬರು ಆಗಲಿ, ಸರ್ಕಾರ ಬಂದಾಗ ಅಧಿಕಾರಿಗಳು ಬದಲಾಗುತ್ತಾರೆ. ಒಳ್ಳೆಯ ಅಧಿಕಾರಿಗಳಿಂದ ಒಳ್ಳೆಯ ಕೆಲಸ ತೆಗೆದುಕೊಳ್ಳಬೇಕು. ಈ ರೀತಿ ದ್ವೇಷದ ರಾಜಕಾರಣ ಮಾಡಬಾರದು ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ವರ್ಗಾವಣೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದರು.
- - - (-ಫೋಟೋ: ಬಿ.ವೈ.ರಾಘವೇಂದ್ರ)