ತಾಂಡಗಳ ಅಭಿವೃದ್ಧಿಗೆ ಶಾಸಕ ಜಿ.ಎಸ್.ಪಾಟೀಲ ಆದ್ಯತೆ

KannadaprabhaNewsNetwork |  
Published : May 04, 2025, 01:37 AM IST
ಪೋಟೊ ಕ್ಯಾಪ್ಸನ್:ಡಂಬಳ ಹೋಬಳಿ ಸಿಂಗಟರಾಯನಕೇರಿತಾಂಡ ಶಿವಾಜಿನಗರದಲ್ಲಿ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ 180 ಲಕ್ಷ ರೂಗಳ ವೆಚ್ಚದಲ್ಲಿ  ಬೆಂಚಿಯ 2ಕಿಲೋ ಮಿಟರ್ ರಸ್ತೆ ಕಾಮಗಾರಿಗೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಂತವ್ವ ಗಣೇಶ ರಾಠೋಡ ಚಾಲನೆ ನೀಡಿದರು. ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಶಾಂತವ್ವ ಹನಮಪ್ಪ ಹೈಗರ ಇತರರು ಇದ್ದರು. | Kannada Prabha

ಸಾರಾಂಶ

ರಸ್ತೆ ಕಾಮಗಾರಿಯ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಜನಪರ ಜನಾನುರಾಗಿಯಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿರುವ ಶಾಸಕರಾದ ಜಿ.ಎಸ್. ಪಾಟೀಲರು ತಾಂಡಗಳ ಅಭಿವೃದ್ಧಿಗೆ ಆದ್ಯತೆ ನೀಡಲು ಮುಂದಾಗಿರುವುದು ಸಂತೋಷ ತಂದಿದೆ ಎಂದು ಶಿವಾಜಿನಗರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತವ್ವ ಗಣೇಶ ರಾಠೋಡ ಹೇಳಿದರು.

ಡಂಬಳ:ರಸ್ತೆ ಕಾಮಗಾರಿಯ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಜನಪರ ಜನಾನುರಾಗಿಯಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿರುವ ಶಾಸಕರಾದ ಜಿ.ಎಸ್. ಪಾಟೀಲರು ತಾಂಡಗಳ ಅಭಿವೃದ್ಧಿಗೆ ಆದ್ಯತೆ ನೀಡಲು ಮುಂದಾಗಿರುವುದು ಸಂತೋಷ ತಂದಿದೆ ಎಂದು ಶಿವಾಜಿನಗರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತವ್ವ ಗಣೇಶ ರಾಠೋಡ ಹೇಳಿದರು.

ಡಂಬಳ ಹೋಬಳಿ ಸಿಂಗಟರಾಯನಕೇರಿತಾಂಡ ಶಿವಾಜಿನಗರದಲ್ಲಿ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ 180 ಲಕ್ಷ ರು.ಗಳ ವೆಚ್ಚದಲ್ಲಿ ಬೆಂಚಿ ರಸ್ತೆ 2 ಕಿಲೋಮಿಟರ್ ಕಾಮಗಾರಿಗೆ ಭೂಮಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ರಸ್ತೆ ಕಾಮಗಾರಿ ದೀರ್ಘಕಾಲ ಬಾಳಿಕೆ ಬರುವಂತೆ ಗುತ್ತಿಗೆದಾರರು ಕ್ರಮ ವಹಿಸಬೇಕೆಂದು ಹೇಳಿದರು.

ಈ ಸಮಯದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಷ್ಮಣಸಿಂಗ ರಾಠೋಡ, ಗ್ರಾಮ ಪಂಚಾಯಿತಿ ಸದಸ್ಯರಾದ ಮೀರಾಬಾಯಿ ಪಾಂಡಪ್ಪ ಮೇಘಾವತ್, ಸರೋಜಾ ಪ್ರಕಾಶ ಪೂಜಾರ, ಮೀರವ್ವ ಲಮಾಣಿ, ಲಕ್ಷ್ಮಣ ಚೌಹಾಣ, ರಾಜಶೇಖರ ಪವಾರ, ಗ್ರಾಮದ ಹಿರಿಯರಾದ ದೇವಪ್ಪ ಹೋಬಪ್ಪ ನಾಯಕ, ಶಿವಪ್ಪ ಚನ್ನಪ್ಪ ರಾಠೋಡ, ಧರ್ಮಸಿಂಗ್ ರಾಮಪ್ಪ ರಾಠೋಡ, ಧರ್ಮಸಿಂಗ್ ಗುರುನಾಥ ರಾಠೋಡ, ಲಕ್ಷ್ಮಣ ನಾಯಕ, ದೇವಪ್ಪ ನಾಯಕ, ರಸ್ತೆ ಕಾಮಗಾರಿಯ ಗುತ್ತಿಗೆದಾರರು, ಗುತ್ತಿಗೆ ಕಾಮಗಾರಿಗಳ ಜಿಲ್ಲಾ ಅಧ್ಯಕ್ಷ ಸಿದ್ದು ಪಾಟೀಲ, ಕಾಂಗ್ರೆಸ್ ಮುಖಂಡ ಗುರಣ್ಣ ಲಕ್ಷ್ಮಣ ನಾಯಕ, ತಾವರಪ್ಪ ಲಮಾಣಿ, ಶಂಕರ ಪೂಜಾರ, ಸುರೇಶ ಪವಾರ, ಶಿವಪ್ಪ ಹಾಲಪ್ಪ ಲಮಾಣಿ, ರಾಜು ರಾಠೋಡ, ಮರಿಯಪ್ಪ ರಾಠೋಡ, ವಾಸು ಲಮಾಣಿ, ಅಪ್ಪಣ್ಣ ನಾಯಕ, ಉಮೇಶ ನಾಯಕ, ಚಂದ್ರಶೇಖರ ನಾಯಕ, ರಮೇಶ ನಾಯಕ, ಲೋಕಪ್ಪ ಲಮಾಣಿ, ಲಕ್ಷ್ಮಣ ಭೀಮಸಿಂಗ ಲಮಾಣಿ, ವಿಷ್ಣು ಪವಾರ್, ವಿಶ್ವ ನಾಯಕ, ಠಾಕ್ರಪ್ಪ ರಾಠೋಡ, ಗಣೇಶ ಚೌಹಾಣ, ಕುಬೇರಪ್ಪ ಲಮಾಣಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಏಕಾಏಕಿ ಕಾರ್ಮಿಕ ಸಂಹಿತೆ ಜಾರಿ ಖಂಡಿಸಿ ಸಿಐಟಿಯು ಪ್ರತಿಭಟನೆ
ಪದವೀಧರರು ಜಾಗತಿಕ ನಾಗರೀಕರಾಗಿ ಹೊರಹೊಮ್ಮಬೇಕು: ಪ್ರೊ.ನಿರಂಜನ