ಶೈಕ್ಷಣಿಕ ಪ್ರಗತಿಗೆ ಶಾಸಕ ಜಿ.ಎಸ್. ಪಾಟೀಲ ಆದ್ಯತೆ: ಡಿ.ಡಿ. ಮೋರನಾಳ

KannadaprabhaNewsNetwork |  
Published : May 31, 2026, 03:00 AM IST
ವೆಂಕಟಾಪುರ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗೆ ಡಿ.ಡಿ. ಮೋರನಾಳ ಚಾಲನೆ ನೀಡಿದರು. | Kannada Prabha

ಸಾರಾಂಶ

ಡಂಬಳ ಹೋಬಳಿಯ ಗ್ರಾಮಗಳಲ್ಲಿ ಸಮಾಜ ಕಲ್ಯಾಣ ಇಲಾಖೆ 2025- 26ನೇ ಸಾಲಿನ ಪ್ರಗತಿ ಕಾಲನಿ ಯೋಜನೆಯಡಿ ವೆಂಕಟಾಪುರ ಗ್ರಾಮದ ಎಸ್ಸಿ ಕಾಲನಿಯಲ್ಲಿ ಸಿಸಿ ರಸ್ತೆ ಸೇರಿದಂತೆ ಅಭಿವೃದ್ಧಿ ಕಾಮಗಾರಿಗೆ ಮುಂಡರಗಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಡಿ.ಡಿ. ಮೋರನಾಳ ಚಾಲನೆ ನೀಡಿದರು.

ಡಂಬಳ: ಶಾಸಕ ಜಿ.ಎಸ್. ಪಾಟೀಲ ಅವರು ಹೋಬಳಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳುವ ಮೂಲಕ ಕ್ಷೇತ್ರದ ಅಭಿವೃದ್ಧಿಯ ಹರಿಕಾರರು ಮತ್ತು ಪ್ರತಿಯೊಬ್ಬರಿಗೂ ಗ್ಯಾರಂಟಿ ಯೋಜನೆಗಳನ್ನು ತಲುಪುವಂತೆ ಮಾಡಿದ್ದಾರೆ ಎಂದು ಮುಂಡರಗಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಡಿ.ಡಿ. ಮೋರನಾಳ ತಿಳಿಸಿದರು.

ಡಂಬಳ ಹೋಬಳಿಯ ಗ್ರಾಮಗಳಲ್ಲಿ ಸಮಾಜ ಕಲ್ಯಾಣ ಇಲಾಖೆ 2025- 26ನೇ ಸಾಲಿನ ಪ್ರಗತಿ ಕಾಲನಿ ಯೋಜನೆಯಡಿ ವೆಂಕಟಾಪುರ ಗ್ರಾಮದ ಎಸ್ಸಿ ಕಾಲನಿಯಲ್ಲಿ ಸಿಸಿ ರಸ್ತೆ ಸೇರಿದಂತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಪ್ರತಿ ಗ್ರಾಮದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಸಾಧನೆಗೆ ಸೂಕ್ತ ವಾತಾವರಣ ನಿರ್ಮಾಣಕ್ಕಾಗಿ ಸರ್ಕಾರಿ ಶಾಲೆಗಳ ನವೀಕರಣ, ಸ್ಮಾರ್ಟ್ ತರಗತಿ ಕೊಠಡಿಗಳಿಗೆ ಶಾಸಕ ಜಿ.ಎಸ್. ಪಾಟೀಲರು ಆದ್ಯತೆ ನೀಡುತ್ತಿದ್ದಾರೆ ಎಂದರು.

ರೋಣ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ ಜಿ. ಪಾಟೀಲ ಮಾತನಾಡಿ, ಶಾಸಕ ಜಿ.ಎಸ್. ಪಾಟೀಲರು ಜನತೆಯ ಹಿತಕ್ಕಾಗಿ ರೋಣ ಕ್ಷೇತ್ರಾದ್ಯಂತ ನೂರಾರು ಕೋಟಿ ಅನುದಾನದ ಮೂಲಕ ಕ್ಷೇತ್ರದಲ್ಲಿ ಹತ್ತು ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತಿದ್ದಾರೆ ಎಂದರು.

ಮುಂಡರಗಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ವಿಜಯಕುಮಾರ ಬೆಣ್ಣಿ, ಸಮಾಜ ಕಲ್ಯಾಣ ಅಧಿಕಾರಿ ಉದಯಕುಮಾರ ಯಲಿವಾಳ ಮಾತನಾಡಿ, ಎಸ್ಸಿ ಕಾಲನಿಗಳನ್ನು ಉತ್ತಮ ಪಡಿಸಲು ಸರ್ಕಾರದ ಯೋಜನೆಗಳನ್ನು ಸರಿಯಾಗಿ ಬಳಸಿಕೊಂಡು ಶಾಸಕರು ಅಭಿವೃದ್ಧಿಯನ್ನು ಹಮ್ಮಿಕೊಂಡಿರುವುದು ಪ್ರಶಂಸನೀಯ ಎಂದರು.

ಮುರಡಿ ತಾಂಡಾ ಗ್ರಾಪಂ ಅಧ್ಯಕ್ಷೆ ರತ್ನವ್ವ ಕಾರಬಾರಿ, ಉಪಾಧ್ಯಕ್ಷೆ ಲಲಿತಾ ಪವಾರ, ಸೋಮು ಹೈತಾಪುರ, ವಿಶ್ವನಾಥ ಪಾಟೀಲ, ಸತ್ಯಪ್ಪ ಪೂಜಾರ, ಪ್ರಕಾಶ ಸಜ್ಜನ, ಗುರಣ್ಣ ಸಂಶಿ, ವಿರೂಪಣ್ಣ ಮರಿಗೌಡರ, ಮಲ್ಲೇಶ ಪೂಜಾರ, ಫಾರೂಕ್ ಅಬ್ದುಲ್ ಗೌ. ಡೋಟ್ಯಾಳ, ವೀರೇಶ್ ರೋಣದ, ಮಂಜುನಾಥ ಹಿರೇಮಣಿ, ಮಲ್ಲಪ್ಪ ಕೊಡ್ಲಿ, ವಸಂತ ಮಾಳಗಿಮನಿ, ಹನುಮಂತ ಕಡಕೋಳ, ಮಲ್ಲಪ್ಪ ಹಳ್ಳಿ, ಶಂಕರಗೌಡ್ರ ಹಿರೇಗೌಡರ, ಚೆನ್ನಪ್ಪ ಹಳ್ಳಿ, ಸತ್ಯಪ್ಪ ಪೂಜಾರ, ಶಂಕರಗೌಡ ಪಾಟೀಲ, ದೇವಪ್ಪ ಕಟಗಿ, ಸುರೇಶ ಗೋಡಿ, ಮರಡೆಪ್ಪ ಹಳ್ಳಿ, ಮಲ್ಲಿಕಾರ್ಜುನ ಕೊಡ್ಲಿ, ಶೇಖರ ಫವಾರ, ಮನೋಜ ರಾಠೋಡ, ಉಪತಹಸೀಲ್ದಾರ್ ಎಸ್.ಎಸ್. ಬಿಚಾಲಿ, ಕಂದಾಯ ಅಧಿಕಾರಿ ಪ್ರಭು ಬಾಗಲಿ, ಪಿಡಿಒ ಲತಾ ಮಾನೆ, ಪಿಡಿಒ ಸಂತೋಷ ನಾಯಕ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ
ಕನ್ನಡ ಭಾಷೆ ಬೆಳವಣಿಗೆಯಲ್ಲಿ ಕನ್ನಡೇತರರನ್ನು ತೊಡಗಿಸಿಕೊಳ್ಳಬೇಕು: ಚಿದ್ವಿಲಸ್