ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕಾರ್ಖಾನೆ ಅಧಿಕಾರಿಗಳ ತಂಡದೊಂದಿಗೆ ಪ್ರತಿ ವಿಭಾಗಕ್ಕೂ ಭೇಟಿ ನೀಡಿದ ಶಾಸಕರು ಮಹಿಳೆಯರು ಸೇರಿದಂತೆ ಎಲ್ಲಾ ಕಾರ್ಮಿಕರನ್ನು ಮಾತನಾಡಿಸಿ ಮಾಹಿತಿ ಪಡೆದರು.
ನಂತರ ಮಾತನಾಡಿ, ಈ ಹಿಂದೆ ಕಾರ್ಖಾನೆ ಅಧಿಕಾರಿಗಳು ಕಾರ್ಮಿಕರೊಂದಿಗೆ ಸೌಜ್ಯನದಿಂದ ಪ್ರದರ್ಶಿಸುತ್ತಿಲ್ಲ ಎನ್ನುವ ದೂರುಗಳು ಕೇಳಿ ಬಂದಿದ್ದವು. ಇತ್ತೀಚೆಗೆ ಕಾರ್ಖಾನೆ ಉನ್ನತ ಅಧಿಕಾರಿಗಳ ತಂಡ ಕಾರ್ಖಾನೆಗೆ ಭೇಟಿ ನೀಡಿ ಆಡಳಿತ ಸಿಬ್ಬಂದಿ, ಕಾರ್ಮಿಕರೊಂದಿಗೆ ಸೌಜ್ಯದ ನಡವಳಿಕೆ ಪ್ರದರ್ಶಿಸುವಂತೆ ಕಿವಿಮಾತು ಹೇಳಿದ್ದರು. ಈಗ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಯಾವುದೇ ದೂರುಗಳು ಕೇಳಿ ಬರುತ್ತಿಲ್ಲ ಎಂದರು.ಜಾಕಿ ಕಾರ್ಖಾನೆಯಲ್ಲಿ ಮೂರು ಸಾವಿರ ನೌಕರರು ಕೆಲಸ ಮಾಡುತ್ತಿದ್ದಾರೆ. ಮಹಿಳಾ ಕಾರ್ಮಿಕರ ಮಕ್ಕಳ ಪಾಲನೆಗಾಗಿ ಅತ್ಯುತ್ತಮ ಶಿಶು ಪಾಲನಾ ಕೇಂದ್ರ ತೆರೆದಿದ್ದಾರೆ. ಉತ್ತಮ ಕ್ಯಾಂಟೀನ್ ವ್ಯವಸ್ಥೆ ಇದೆ. ಅಧಿಕಾರಿಗಳು ಮತ್ತು ಸಾಮಾನ್ಯ ನೌಕರರಿಗೂ ಏಕ ರೂಪದ ಊಟೋಪಚಾರದ ವ್ಯವಸ್ಥೆಯಿದೆ ಎಂದು ತಿಳಿಸಿದರು.
ಈ ವೇಳೆ ಕಾರ್ಖಾನೆ ಎಸ್.ಜಿ.ಎಂ ಬಾಬುರಾಜ್, ಡಿ.ಜಿ.ಎಂ ಶ್ರೀಧರ್, ಪಿಡಿಒ ನವೀನ್, ತಾಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ಮುಖಂಡ ಮರೀಗವಡ ಸೇರಿದಂತೆ ಕಾರ್ಖಾನೆಯ ಅಧಿಕಾರಿಗಳು ಮತ್ತು ಆಡಳಿತ ಸಿಬ್ಬಂದಿ ವರ್ಗದವರಿದ್ದರು.