ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ನಾಗಮಂಗಲದಿಂದ ತಾಲೂಕಿಗೆ ಆಗಮಿಸಿದ ರಥಯಾತ್ರೆಯನ್ನು ಜಾನಪದ ಕಲಾ ತಂಡಗಳೊಂದಿಗೆ ಡೊಳ್ಳುಕುಣಿತ, ಪೂಜಾಕುಣಿತ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮೆರವಣಿಗೆಗೆ ಶಾಸಕ ಎಚ್.ಟಿ.ಮಂಜು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕನ್ನಡ ಜ್ಯೋತಿರಥ ಯಾತ್ರೆಯೂ 120 ದಿನಗಳ ಕಾಲ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಂಚರಿಸಲಿದೆ. ತಾಲೂಕಿನಲ್ಲಿ ಇಂದು ಮತ್ತೆ ನಾಳೆ ಯಾತ್ರೆ ಕೈಗೊಳ್ಳಲಿದೆ ಎಂದರು.ಮಂಡ್ಯ ಜಿಲ್ಲೆಯ ಹಾಗೂ ರಾಜ್ಯದ ಕಲೆ, ಸಂಸ್ಕೃತಿ, ಸಾಹಿತ್ಯ ಮತ್ತು ಜನಪದವನ್ನು ಈ ರಥದಲ್ಲಿ ಬಿಂಬಿಸಲಾಗಿದೆ. ಕನ್ನಡ ಸಾಹಿತ್ಯಾಸಕ್ತರು ಕನ್ನಡ ಜ್ಯೋತಿರಥಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತೆರಳುವ ಮಾರ್ಗದಲ್ಲಿ ಎಲ್ಲಾ ರೀತಿಯ ಸಹಕಾರ ಬೆಂಬಲ ನೀಡುವ ಮೂಲಕ ನಮ್ಮ ತಾಲೂಕಿನಿಂದ ಮುಂದಿನ ತಾಲೂಕಿಗೆ ಕಳುಹಿಸಿಕೊಡುವ ಕೆಲಸವನ್ನು ನಾವು ನೀವೆಲ್ಲರೂ ಮಾಡಬೇಕಾಗಿದೆ ಎಂದರು.
ಕನ್ನಡ ಜ್ಯೋತಿರಥಯಾತ್ರೆ ಸ್ವಾಗತಿಸುವ ವೇಳೆ ತಾಪಂ ಇಒ ಸುಷ್ಮಾ, ಗ್ರೇಡ್-2 ತಹಸೀಲ್ದಾರ್ ಲೋಕೇಶ್, ಸಿಡಿಪಿಒ ಅರುಣಕುಮಾರ್, ಸಮಾಜಕ್ಯಾಣಾಧಿಕಾರಿ ದಿವಾಕರ್, ಬಿಇಒ ಸೀತಾರಾಮು, ನರೇಗ ಎ.ಡಿ. ಡಾ.ನರಸಿಂಹರಾಜು, ಪಿಡಿಒಗಳು, ಶಾಲಾ ಮಕ್ಕಳು ಮತ್ತು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಕನ್ನಡದ ಅಭಿಮಾನಿಗಳು ಹಾಜರಿದ್ದರು.