ಕೆರೆಗಳಿಗೆ ನೀರು ಹರಿಸಲು ಶಾಸಕ ಜೆಟಿಪಿ ಸೂಚನೆ

KannadaprabhaNewsNetwork |  
Published : Aug 02, 2026, 02:45 AM IST
01ಸದಕಸದಕಲಕ | Kannada Prabha

ಸಾರಾಂಶ

ಕಲಾದಗಿ: ಗ್ರಾಮದ ಹೆರಕಲ್ ಏತನೀರಾವರಿ(ದಕ್ಷಿಣ)ಜಾಕ್‍ವೆಲ್‍ನಲ್ಲಿ ಪರ್ಯಾಯ ಟಿಸಿ ಚಾಲನೆಗೊಳ್ಳುತ್ತಿದ್ದಂತೆ ಕಳಸಕೊಪ್ಪ ಕೆರೆ ಸೇರಿ ಇನ್ನಿತರ ಕೆರೆಗಳಿಗೆ ನೀರು ಹರಿಸಲು ಆರಂಭಿಸುವಂತೆ ಕೃಷ್ಣಾ ಭಾಗ್ಯ ಜಲನಿಗಮದ ಮುಖ್ಯ ಇಂಜನಿಯರ್ ಗೆ ಸೂಚಿಸಿದ್ದೇನೆ ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದ್ದಾರೆ.

ಈ ಬಗ್ಗೆ ಬೆಂಗಳೂರಿನಿಂದ ದೂರವಾಣಿ ಮೂಲಕ ಪತ್ರಿಕೆ ಜತೆ ಮಾತನಾಡಿದ ಅವರು, ಎಲ್ಲರಿಗೂ ಗೊತ್ತಿರುವಂತೆ ಕೆರೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡುವ ಸಿದ್ಧತೆಯಲ್ಲಿದ್ದಾಗಲೇ ಏಕಾಏಕಿ ಜಾಕ್‍ವೆಲ್‍ನ ಟಿಸಿ ಕೆಟ್ಟಿದ್ದರಿಂದ ಕೆರೆಗಳಿಗೆ ನೀರು ಹರಿಸುವುದು ತಡವಾಗಿದ್ದು, ಪರ್ಯಾಯ ಟಿಸಿ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ. ಭಾನುವಾರ ಟಿಸಿ ಕೂಡಿಸುವ ಮತ್ತು ಅದನ್ನು ಚಾಲನೆ ನೀಡುವ ಕಾರ್ಯ ಮುಗಿಯುವ ಸಾಧ್ಯತೆಯಿದ್ದು, ಕೆರೆಗಳಿಗೆ ನೀರು ತುಂಬಿಸುವುದು ಮತ್ತಷ್ಟು ತಡವಾಗಬಾರದೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಟಿಸಿ ಚಾಲನೆಯಾದ ತಕ್ಷಣ ಕೆರೆಗಳಿಗೆ ನೀರು ಹರಿಸುವಂತೆ ಸೂಚಿಸಿದ್ದೇನೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನುಷ್ಯನ ಅಸ್ತಿತ್ವವೇ ಪ್ರಕೃತಿ ಮೇಲಿದೆ
ಡಾ.ಮಹಾಂತ ಶ್ರೀಗಳಿಂದ ಸಮಾಜದಲ್ಲಿ ದೊಡ್ಡ ಪರಿವರ್ತನೆ