5.55 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಕೆ.ಹರೀಶ್‌ ಗೌಡ ಗುದ್ದಲಿ ಪೂಜೆ

KannadaprabhaNewsNetwork |  
Published : Feb 19, 2026, 01:15 AM IST
5 | Kannada Prabha

ಸಾರಾಂಶ

ಲೋಕೋಪಯೋಗಿ ಇಲಾಖೆಯ ಅನುದಾನದಡಿ ಚಾಮರಾಜ ವಿಧಾನಸಭಾ ಕ್ಷೇತ್ರದ ಬೃಂದಾವನ ಬಡಾವಣೆ ಹಾಗೂ ಯಾದವಗಿರಿ ವ್ಯಾಪ್ತಿಯಲ್ಲಿ ಅಂದಾಜು 5.55 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ. ಹರೀಶ್ ಗೌಡ ಬುಧವಾರ ಗುದ್ದಲಿ ಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಲೋಕೋಪಯೋಗಿ ಇಲಾಖೆಯ ಅನುದಾನದಡಿ ಚಾಮರಾಜ ವಿಧಾನಸಭಾ ಕ್ಷೇತ್ರದ ಬೃಂದಾವನ ಬಡಾವಣೆ ಹಾಗೂ ಯಾದವಗಿರಿ ವ್ಯಾಪ್ತಿಯಲ್ಲಿ ಅಂದಾಜು 5.55 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ. ಹರೀಶ್ ಗೌಡ ಬುಧವಾರ ಗುದ್ದಲಿ ಪೂಜೆ ನೆರವೇರಿಸಿದರು.

ಅಭಿವೃದ್ಧಿ ಕಾಮಗಾರಿಯಲ್ಲಿ ಚರಕ ಆಯುರ್ವೇದ ಆಸ್ಪತ್ರೆ ಮೂಲಕ ರೈಲ್ವೆ ಹಳಿ ಸೇರುವ ರಸ್ತೆ, 2ನೇ ಹಂತ, 8ನೇ ಮುಖ್ಯ ರಸ್ತೆ, ರೈಲ್ವೆ ಹಳಿ ಸಮಾನಾಂತರ ರಸ್ತೆ ದೇವಸ್ಥಾನದವರೆಗೂ, ಬೃಂದಾವನ ಬಡಾವಣೆಯ ಅಡ್ಡ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು, ಗುರುದ್ವಾರ ರಸ್ತೆಯ ಹಿಂಭಾಗ 2ನೇ ಹಂತದ ಅಡ್ಡ ರಸ್ತೆಗಳು,ಆಂಜನೇಯ ಸ್ವಾಮಿ ದೇವಸ್ಥಾನ ಕೆಎಸ್‌ಆರ್‌ಟಿಸಿ ಕ್ವಾಟ್ರಸ್ ಮುಂಭಾಗದ ರಸ್ತೆ, ಬೃಂದಾವನ ಬಡಾವಣೆಯ 2ನೇ ಹಂತ ಗುರುದ್ವಾರದ ಪಕ್ಕ ಮಂಜುನಾಥಪುರ ಸೇರುವ ರಸ್ತೆ, ಬೃಂದಾವನ ಬಡಾವಣೆಯಿಂದ ಕೆಐಎಡಿಬಿ ಕ್ಯಾಂಟೀನ್ ರಸ್ತೆ,ಕೆಐಎಬಿಡಿ 1ನೇ ಅಡ್ಡ ರಸ್ತೆ, ಕೆಐಎಬಿಡಿ. 2ನೇ ಅಡ್ಡ ರಸ್ತೆ, ಕೆಐಎಬಿಡಿ 3ನೇ ಅಡ್ಡ ರಸ್ತೆ, ಕೆಐಎಬಿಡಿ 4ನೇ ಅಡ್ಡ ರಸ್ತೆ, ಕೆಐಎಬಿಡಿ 5ನೇ ಅಡ್ಡ ರಸ್ತೆಯ ಕಾಮಗಾರಿ ಒಳಗೊಂಡಿದೆ.

ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷ ರವಿ ಎಂ.ಜಿ.ಕೊಪ್ಪಲು, ದೇವರಾಜ ಬ್ಲಾಕ್ ಅಧ್ಯಕ್ಷ ಡಿ. ನಾಗಭೂಷಣ್, ವಾರ್ಡ್ ಅಧ್ಯಕ್ಷ ದಿನೇಶ್, ಮುಖಂಡರಾದ ಶ್ರೀನಿವಾಸ್, ಪ್ರವೀಣ್ ಶೆಟ್ಟಿ, ಸುಶೀಲ ಮರಿಗೌಡ, ಗಿರಿಜಾಂಬ, ಮಂಜುನಾಥ್, ಸುಧಾಕರ್‌, ಜೀವನ್ ಪ್ರಕಾಶ್, ಬೀರೇಶ್‌ ಬಾಬು, ಲೋಕೇಶ್‌, ಮೈಸೂರು ವಿವಿ ಸಿಂಡಿಕೇಟ್ ಸದಸ್ಯರಾದ ಮಹದೇಶ್, ಆಶ್ರಯ ಸಮಿತಿ ಸದಸ್ಯರಾದ ಮಂಜುನಾಥ್, ಇಬ್ರಾಹಿಂ, ಪುರೋಹಿತ್‌ ಸಚಿನ್‌ ಸವಿತೃ ಶರ್ಮ, ಸ್ಥಳೀಯ ನಿವಾಸಿಗಳು, ಸಾರ್ವಜನಿಕರು ಕಾರ್ಯಕರ್ತರು ಭಾಗವಹಿಸಿದ್ದರು.

ಭಾರತದ ಭವಿಷ್ಯಕ್ಕಾಗಿ ಹಣಕಾಸು ಮಾರ್ಗಸೂಚಿ ಕುರಿತು ಸಮ್ಮೇಳನ

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಬೋಗಾದಿ ಬ್ಯಾಂಕ್ ನೌಕರರ ಕಾಲೋನಿಯ ಭಾರತೀಯ ಚಾರ್ಟರ್ಡ್ ಅಕೌಂಟೆಂಟ್‌ ಸಂಸ್ಥೆ ಮೈಸೂರು ಶಾಖೆಯ ಸಭಾಂಗಣದಲ್ಲಿ ಫೆ.21ರಂದು ಬೆಳಗ್ಗೆ 7.30ರಿಂದ ಸಂಜೆ 7 ರವರೆಗೆ ಬಜೆಟ್- 2026 ಭಾರತದ ಭವಿಷ್ಯಕ್ಕಾಗಿ ಹಣಕಾಸು ಮಾರ್ಗಸೂಚಿ ವಿಷಯ ಕುರಿತು ಒಂದು ದಿನದ ಸಮ್ಮೇಳನ ಆಯೋಜಿಸಲಾಗಿದೆ.

ಸಮ್ಮೇಳನದಲ್ಲಿ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ಕುರಿತು ಆಳವಾದ ವಿಶ್ಲೇಷಣೆ, ತಜ್ಞರ ಅಭಿಪ್ರಾಯ ಮಂಡನೆ, ನೇರ ತೆರಿಗೆ, ಪರೋಕ್ಷ ತೆರಿಗೆ, ನಿಯಂತ್ರಣಾತ್ಮಕ ನವೀಕರಣ, ನೀತಿ ಪರಿಣಾಮ, ಭಾರತದ ಆರ್ಥಿಕ ಬೆಳವಣಿಗೆಯ ಸಮಗ್ರ ಮಾರ್ಗನಕ್ಷೆ ಕುರಿತು ಚರ್ಚಿಸುವುದಾಗಿ ಅಧ್ಯಕ್ಷ ಎಸ್. ಭಾರ್ಗವ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದು ಚಾರ್ಟರ್ಡ್ ಅಕೌಂಟೆಂಟ್‌ ಗಳು, ತೆರಿಗೆ ತಜ್ಞರು, ಉದ್ಯಮಿಗಳು, ಮಾಲೀಕರು, ಹಣಕಾಸು ವೃತ್ತಿಪರರು, ವಿದ್ಯಾರ್ಥಿಗಳು ಹಾಗೂ ದೇಶದ ಆರ್ಥಿಕ ದಿಕ್ಕು ಕುರಿತು ಅರಿತುಕೊಳ್ಳಲು ಆಸಕ್ತಿ ಇರುವ ಎಲ್ಲರಿಗೂ ಉಪಯುಕ್ತವಾದುದು ಎಂದರು. ಹೆಚ್ಚಿನ ಮಾಹಿತಿಗೆ ದೂ. 0821- 2568000 ಸಂಪರ್ಕಿಸಬಹುದು ಎಂದು ಕೋರಿದರು. ಸುದ್ದಿಗೋಷ್ಠಿಯಲ್ಲಿ ಎಲ್. ವೆಂಕಟೇಶ್ ಸ್ವಾಮಿ, ಬಿ.ಆರ್. ಶರತ್ಚಂದ್ರ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದೂ ಮನೆ ಮೇಲೆ ಕಲ್ಲು ತೂರಾಟ: ಆರು ಮಂದಿ ಬಂಧನ
ಸಿಕ್ಕಿಲ್‌ ವಸಂತಕುಮಾರಿ, ಸಂಜಿ ಪಿರಂತಂಪನ್‌ ಅವರಿಗೆ ಕಲೆಮನೆ ಪ್ರಶಸ್ತಿ