ವಿದ್ಯುತ್ ಉಪಕೇಂದ್ರ ನಿರ್ಮಾಣ ಕಾಮಗಾರಿಗೆ ಶಾಸಕ ಕೆ.ಎಂ.ಉದಯ್ ಚಾಲನೆ

KannadaprabhaNewsNetwork |  
Published : Jul 23, 2026, 01:45 AM IST
22ಕೆಎಂಎನ್ ಡಿ23 | Kannada Prabha

ಸಾರಾಂಶ

ಉದ್ಘಾಟನೆಯಾಗಲಿರುವ ಬನ್ನಹಳ್ಳಿ ಏತ ನೀರಾವರಿ ಯೋಜನೆಗೂ ಅನುಕೂಲವಾಗಲಿದೆ. ಆ ಮೂಲಕ ಹತ್ತಾರು ಗ್ರಾಮಗಳ ಕೆರೆಗಳನ್ನು ತುಂಬಿಸಲು ಪ್ರಯೋಜನವಾಗಲಿದೆ. ರೈತರಿಗೆ ವ್ಯವಸಾಯ ಮಾಡಲು ನೀರು ಸಿಗಲಿದೆ. ಅಂತರ್ಜಲ ಕೂಡಾ ವೃದ್ಧಿಯಾಗಲಿದೆ

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಸಮೀಪದ ಕೂಳಗೆರೆಯಲ್ಲಿ ₹16 ಕೋಟಿ ವೆಚ್ಚದ 66 /11 ಕೆ.ವಿ ವಿದ್ಯುತ್ ಉಪಕೇಂದ್ರ ನಿರ್ಮಾಣ ಕಾಮಗಾರಿಗೆ ಶಾಸಕ ಕೆ.ಎಂ.ಉದಯ್ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಈ ಯೋಜನೆಯಿಂದಾಗಿ ಕೂಳಗೆರೆ, ಕೊಕ್ಕರೆ ಬೆಳ್ಳೂರು, ಬನ್ನಹಳ್ಳಿ, ಬಸವೇಗೌಡನ ದೊಡ್ಡಿ, ಹುಲಿಕೆರೆ, ಅರೆಕಲ್ಲುದೊಡ್ಡಿ, ಚುಂಚಗನಹಳ್ಳಿ, ಗೊಲ್ಲರದೊಡ್ಡಿ, ಅಂಕೇಗೌಡನ ದೊಡ್ಡಿ, ಹೊಸದೊಡ್ಡಿ, ಅರುವನಹಳ್ಳಿ, ತೊಪ್ಪನಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಿಗೆ ಅನುಕೂಲವಾಗಲಿದೆ ಎಂದರು.

ಕೂಳಗೆರೆಯ ಭಾಗದ ಹತ್ತಾರು ಗ್ರಾಮಗಳ ರೈತರು ಹಿಂದಿನಿಂದಲೂ ನೀರಿನ ಸಮಸ್ಯೆ ಹಾಗೂ ವಿದ್ಯುತ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ, ಈ ಸಮಸ್ಯೆಗಳನ್ನು ನಿವಾರಿಸಲು ₹16 ಕೋಟಿ ವೆಚ್ಚದ ವಿದ್ಯುತ್ ವಿತರಣಾ ಉಪ ಕೇಂದ್ರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದೇನೆ. ಇದರಿಂದ ಸುತ್ತಮುತ್ತಲಿನ ಗ್ರಾಮದ ಜನರಿಗೆ ಗುಣಮಟ್ಟದ ವಿದ್ಯುತ್ ಸಿಗುವ ಜೊತೆಗೆ, ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ವ್ಯತ್ಯಯ ತಪ್ಪಲಿದೆ ಎಂದು ತಿಳಿಸಿದರು.

ಉದ್ಘಾಟನೆಯಾಗಲಿರುವ ಬನ್ನಹಳ್ಳಿ ಏತ ನೀರಾವರಿ ಯೋಜನೆಗೂ ಅನುಕೂಲವಾಗಲಿದೆ. ಆ ಮೂಲಕ ಹತ್ತಾರು ಗ್ರಾಮಗಳ ಕೆರೆಗಳನ್ನು ತುಂಬಿಸಲು ಪ್ರಯೋಜನವಾಗಲಿದೆ. ರೈತರಿಗೆ ವ್ಯವಸಾಯ ಮಾಡಲು ನೀರು ಸಿಗಲಿದೆ. ಅಂತರ್ಜಲ ಕೂಡಾ ವೃದ್ಧಿಯಾಗಲಿದೆ ಎಂದು ಹೇಳಿದರು.

ಮುಂದಿನ ವರ್ಷ ಮದ್ದೂರು ಬಳಿ 220 ಕೆ. ವಿ. ವಿದ್ಯುತ್ ವಿತರಣಾ ಕೇಂದ್ರದ ಕಾಮಗಾರಿ ಪೂರ್ಣಗೊಳ್ಳಲಿದೆ. ಆ ವೇಳೆಗೆ ಈ ವಿದ್ಯುತ್ ಉಪಕೇಂದ್ರದ ಕಾಮಗಾರಿಯೂ ಮುಗಿಸಿ ಮುಂದಿನ ವರ್ಷದಿಂದ ವಿದ್ಯುತ್ ಹಾಗೂ ನೀರಾವರಿ ವಿಷಯದಲ್ಲಿ ಈ ಭಾಗದ ಜನರು ನೆಮ್ಮದಿ ಕಾಣಲಿದ್ದಾರೆ ಎಂದರು.

ಈ ವೇಳೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಲುವರಾಜು, ಮುಖಂಡರಾದ ಕೆಂಪರಾಜು, ಅರುವನಹಳ್ಳಿ ಸಿದ್ದರಾಜು, ಜಯರಾಮು, ಸಿಪಾಯಿ ಶ್ರೀನಿವಾಸ್, ಅಧಿಕಾರಿಗಳು ಸೇರಿ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೈ ಕಚೇರಿಗೆ ಬಿಜೆಪಿಗರ ಮುತ್ತಿಗೆ ಯತ್ನ: ಹೈಡ್ರಾಮಾ!
ಮಳೆಯ ಕಣ್ಣಾಮುಚ್ಚಾಲೆ: ರೈತರಿಗೆ ತಪ್ಪದ ಆತಂಕ