ಕನ್ನಡಪ್ರಭ ವಾರ್ತೆ ಮಧುಗಿರಿ
ತಾಲೂಕಿನ ದೊಡ್ಡೇರಿ ಹೋಬಳಿ ವ್ಯಾಪ್ತಿಯ ಬಡವನಹಳ್ಳಿ- ರಂಗಾಪುರ ಗೊಲ್ಲರಹಟ್ಟಿ ಸಮೀಪ 75 ಕೋಟಿ ರು.ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಪ್ರತಿಷ್ಠಿತ ಜಿಟಿಟಿಸಿ ಕಾಲೇಜು ನಿರ್ಮಾಣ ಕಾಮಗಾರಿಯನ್ನು ಅಧಿಕಾರಿಗಳು ಮತ್ತು ಮುಖಂಡರ ಜೊತೆ ವೀಕ್ಷಿಸಿ ಮಾತನಾಡಿದರು.
ಹೊಸತನದ ಹುಡುಕಾಟ ದೇಶವನ್ನು ಬಲಿಷ್ಠಗೊಳಿಸುತ್ತದಲ್ಲದೆ ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಜ್ಞಾನ ನವೀನ ಕುಶಲತೆ ಬೆಳೆಯಲು ಮತ್ತು ಉದ್ಯೋಗಕ್ಕೆ ಅಣಿಗೊಳಿಸುವ ನಿಟ್ಟಿನಲ್ಲಿ ಕೌಶಲಗಳನ್ನು ಹುಟ್ಟು ಹಾಕಿ ಪ್ರಸ್ತುತ ಸಮಾಜಕ್ಕೆ ಹೊಂದಿಕೊಳ್ಲುವಂತೆ ಸಜ್ಜುಗೊಳಿಸುತ್ತದೆ. ಆ ಮೂಲಕ ಮಧುಗಿರಿ ಕ್ಷೇತ್ರವನ್ನು ಶೈಕ್ಷಣಿಕ ಹಾಗೂ ಕೌಶಲಾಭಿವೃದ್ಧಿಯ ಕ್ಷೇತ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಹೊಸ ದಿಕ್ಕಿನತ ಹೆಜ್ಜೆ ಇಡಲು ಜಿಟಿಟಿಸಿ ಕಾಲೇಜು ನಮ್ಮ ಕ್ಷೇತ್ರದ ವಿದ್ಯಾರ್ಥಿಗಳಿಗೆ ವರದಾನವಾಗಿದೆ.ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು .ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದರು.ನಮ್ಮ ಕ್ಷೇತ್ರದ ಯುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಸ ಭರವಸೆಯ ಕೇಂದ್ರವಾಗಲಿದೆ. ಆಧುನಿಕ ,ತಾಂತ್ರಿಕ ಶಿಕ್ಷಣ,ಕೌಶಲಾಭಿವೃದ್ಧಿ ಹಾಗೂ ಕೈಗಾರಿಕಾ ವಲಯಕ್ಕೆ ಅಗತ್ಯವಿರುವ ಉದ್ಯೋಗ ಪರ ತರಬೇತಿಯನ್ನು ನೀಡುವ ಉದ್ದೇಶ ಹೋದಿರುವ ಜಿಟಿಟಿಸಿ ಕಾಲೇಜು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತಂತಮ್ಮ ಗ್ರಾಮಗಳಲ್ಲೇ ಗುಣಮಟ್ಟದ ತಾಂತ್ರಿಕ ಶಿಕ್ಷಣ ಮತ್ತು ಕೌಶಲ ತರಬೇತಿ ಪಡೆಯುವ ಅವಕಾಶ ಕಲ್ಪಿಸಿದೆ ಎಂದರು.
ಈ ಸಂದರ್ಭದಲ್ಲಿ ಎಸಿ ಗೋಟೂರು ಶಿವಪ್ಪ, ತಹಸೀಲ್ದಾರ್ ನಂದಿನಿ,ಇಒ ಉತ್ತಮ್,ಜಂಟಿ ನಿರ್ದೇಶಕ ಶಾರದಮ್ಮ, ಉಪ ನಿರ್ದೇಶಕ ರಮೇಶ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶಶಿಧರ್, ಅಭಿಲಾಷ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳ ಮುಖಂಡರು ಇದ್ದರು.