ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

KannadaprabhaNewsNetwork |  
Published : May 03, 2024, 01:07 AM IST
ಚಿತ್ರ:ಶಾಸಕ ವೀರೇಂದ್ರ ಪಪ್ಪಿ ಸಾಹಿತಿ ಬಿ.ಎಲ್. ವೇಣು ಅವರ ಮನೆಗೆ ಭೇಟಿ ನೀಡಿ ಚರ್ಚಿಸಿದರು. | Kannada Prabha

ಸಾರಾಂಶ

ಶಾಸಕ ವೀರೇಂದ್ರ ಪಪ್ಪಿ ಸಾಹಿತಿ ಬಿ.ಎಲ್. ವೇಣು ಅವರ ಮನೆಗೆ ಭೇಟಿ ನೀಡಿ ಚರ್ಚಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಭೇಟಿ ನೀಡಿ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆ ಪಡೆದರು.

ಚಿತ್ರದುರ್ಗ ಶಾಸಕರಾಗಿ ಇದೇ ಪ್ರಥಮ ಬಾರಿಗೆ ಬಿ.ಎಲ್.ವೇಣು ನಿವಾಸಕ್ಕೆ ಆಗಮಿಸಿದ ವೀರೇಂದ್ರ ಪಪ್ಪಿರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಚಿತ್ರದುರ್ಗ ಕೋಟೆ ಅಭಿವೃದ್ಧಿ, ಕೋಟೆಯಲ್ಲಿ ಪ್ರವಾಸಿಗರಿಗೆ ಅನುಕೂಲಕರವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದರ ಬಗ್ಗೆ ಬಿ.ಎಲ್.ವೇಣು ಅವರು ಶಾಸಕರಿಗೆ ಸಲಹೆ ನೀಡಿದರು.

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಬಗ್ಗೆ ಕೂಲಂಕುಷವಾಗಿ ಶಾಸಕರೊಂದಿಗೆ ಚರ್ಚಿಸಿದ ವೇಣು, ಜನತೆಗೆ ಅತೀ ಶೀಘ್ರದಲ್ಲೇ ಈ ಯೋಜನೆ ತಲುಪಬೇಕೆಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಯೋಜನೆ ತ್ವರಿತ ಜಾರಿಗೆ ಸಂಬಂಧಿಸಿದಂತೆ ಸಚಿವರು, ಶಾಸಕರು ಹಾಗೂ ಸಿಎಂ, ಡಿಸಿಎಂ ಅವರರೊಟ್ಟಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರ ನೀಡಿದರು.

ದಾವಣಗೆರೆ-ತುಮಕೂರು ನೇರ ರೈಲ್ವೆ ಯೋಜನೆ ಬಗ್ಗೆಯೂ ಪ್ರಸ್ಥಾಪಿಸಿದ ವೇಣು, ಈ ನಿಟ್ಟಿನಲ್ಲಿ ಕಾರ್ಯ ವಿಳಂಬ ಮಾಡದೇ, ತುರ್ತು ಕೆಲಸ ಮಾಡುವುದು ಅಗತ್ಯವಿದೆ ಎಂದರು. ಕ್ಷೇತ್ರದಲ್ಲಿ ಉತ್ತಮ ಕೆಲಸ ಕಾರ್ಯಗಳು ಮಾಡುವುದರೊಂದಿಗೆ ಜನಮನ್ನಣೆ ಗಳಿಸಬೇಕೆಂದು ಬಿ.ಎಲ್.ವೇಣು ಶಾಸಕರಿಗೆ ಸಲಹೆ ನೀಡಿದರು. ಕ್ಷೇತ್ರದ ಅಭಿವೃದ್ಧಿ ದೃಷ್ಠಿಯಿಂದ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ. ಜನರ ನಿರೀಕ್ಷೆ ಯಶಸ್ಸುಗೊಳಿಸುತ್ತೇನೆಂದು ಇದೇ ಸಂದರ್ಭದಲ್ಲಿ ಶಾಸಕರು ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!