ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯ ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ ಮಾಜಿ ಸಚಿವ ಟಿ.ಚನ್ನಯ್ಯರ ಹಾದಿಯಲ್ಲಿ ಕ್ಷೇತ್ರದ ಜನತೆ ಋಣ ತೀರಿಸುವ ಕೆಲಸ ಮಾಡುವ ಮೂಲಕ ಕೋಲಾರ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡುವುದೇ ನನ್ನ ಧ್ಯೇಯ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ತಿಳಿಸಿದರು.ನಗರದ ನಚಿಕೇತನ ನಿಲಯದ ಸುತ್ತಲೂ ಇರುವ ಕಾಂಪೌಂಡ್‌ಗೆ ಸುಮಾರು ೧ ಕೋಟಿ ವೆಚ್ಚದ ನವೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.ಅಭಿವೃದ್ಧಿ ಕಾರ್ಯ ಇನ್ನೂ ಜೀವಂತ
ಚನ್ನಯ್ಯ ವಸತಿ ಶಾಲೆ
ಮುಂದಿನ ದಿನಗಳನ್ನು ಟಿ ಚನ್ನಯ್ಯ ಅವರ ವಸತಿ ಶಾಲೆಯನ್ನು ನಿರ್ಮಾಣ ಮಾಡುವ ಕನಸು ಇದೆ ಈಗಾಗಲೇ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಈ ಬಗ್ಗೆ ಪತ್ರವನ್ನು ಬರೆಯಲಾಗಿದೆ ಅವರು ಸಹ ಸ್ಪಂದನೆ ನೀಡಿದ್ದು ಅತಿ ಶೀಘ್ರದಲ್ಲೇ ಟಿ ಚನ್ನಯ್ಯ ಅವರ ಹೆಸರಿನಲ್ಲಿ ವಸತಿ ಶಾಲೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.ನನ್ನ ಗುರಿ ಒಂದೇ ಅದು ಅಭಿವೃದ್ದಿ ಬೇರೆ ಆಸೆಗಳಿಲ್ಲ, ಶಾಶ್ವತವಾಗಿ ಇರುವ ಕೆಲಸ ಮಾಡಬೇಕು ಎನ್ನುವುದು ನನ್ನ ಉದ್ದೇಶ. ನಚಿಕೇತನ ನಿಲಯದ ಸುತ್ತಲೂ ಇರುವ ಕಂಪೌಂಡ್ ಕಾಮಗಾರಿಯಲ್ಲಿ ಯಾವುದೇ ರಾಜಿಯಿಲ್ಲ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಗುಣಮಟ್ಟದಿಂದ ಕಾಮಗಾರಿ ನಡೆಸಬೇಕು, ಹೆಚ್ಚಿನ ಲಾಭ ನಿರೀಕ್ಷೆ ಮಾಡದೇ ಅಭಿವೃದ್ದಿ ಪಡಿಸಬೇಕು ಎಂದು ಗುತ್ತಿಗೆದಾರನಿಗೆ ಎಚ್ಚರಿಕೆ ನೀಡಿದರು.ಕಾಂಪೌಡ್ ನವೀಕರಣಕ್ಕೆ ₹1 ಕೋಟಿ
ಅನುದಾನ ಬಿಡುಗಡೆ ವಿಶ್ವಾಸ
ಮಾಲೂರು ತಾಲ್ಲೂಕಿನಲ್ಲಿರುವ ಮಾಸ್ತಿಯಲ್ಲಿ ಮಾಸ್ತಿ ವೆಂಕಟೇಶ್ ಅಯ್ಯಂಗರ್ ವಸತಿ ಶಾಲೆ ಮಾದರಿಯಲ್ಲಿ ಟಿ ಚನ್ನಯ್ಯ ವಸತಿ ಶಾಲೆ ಮಾಡಬೇಕು ಎಂದು ಮನವಿ ಮಾಡಲಾಗಿದ್ದು ಪತ್ರವನ್ನು ಬರೆಯಲಾಗಿದೆ. ಅತಿ ಶೀಘ್ರದಲ್ಲೇ ಟಿ ಚನ್ನಯ್ಯ ವಸತಿ ಶಾಲೆ ಕಾಮಗಾರಿಗೆ ಅನುದಾನ ಬಿಡಿಗಡೆಯಾಗುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದು.ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಖಾನ್, ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ ಶಿವಕುಮಾರ್, ಕೋಚಿಮುಲ್ ಮಾಜಿ ನಿರ್ದೇಶಕ ಛತ್ರಕೋಡಿಹಳ್ಳಿ ರಾಮಕೃಷ್ಣೇಗೌಡ, ದಲಿತ ಸಂಘಟನೆಯ ಮುಖಂಡರಾದ ಟಿ. ವಿಜಿಕುಮಾರ್, ಪಂಡಿತ್ ಮುನಿವೆಂಕಟಪ್ಪ ಬೆಳಗಾನಹಳ್ಳಿ ವೆಂಕಟಮುನಿಯಪ್ಪ ಇದ್ದರು.