ಯರಗೋಳ್ ನೀರು ಸರಬರಾಜು ಪೈಪ್‌ಲೈನ್‌ಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಕೆ.ವೈ.ನಂಜೇಗೌಡ

KannadaprabhaNewsNetwork |  
Published : Nov 15, 2024, 12:35 AM IST
ಶಿರ್ಷಿಕೆ-೧೪ಕೆ.ಎಂ.ಎಲ್‌.ಅರ್.೩- ಮಾಲೂರು ಪಟ್ಟಣದ ೧೩ನೇ ವಾರ್ಡ್ನಲ್ಲಿ ಯರಗೋಳ್ ನೀರು ಸರಬರಾಜು ಪೈಪ್‌ಲೈನ್‌ಗೆ ಶಾಸಕ ಕೆ.ವೈ.ನಂಜೇಗೌಡ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. | Kannada Prabha

ಸಾರಾಂಶ

15ನೇ ಹಣಕಾಸು ಯೋಜನೆಯಡಿಯಲ್ಲಿ ಮಾಲೂರು ಪಟ್ಟಣದಲ್ಲಿ ಯರಗೋಳ್ ಕುಡಿಯುವ ನೀರಿನ ಸರಬರಾಜನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟನೆ ಮಾಡಿದ್ದಾರೆ ಎಂದು ಶಾಸಕ ಹೇಳಿದ್ದಾರೆ.

ಕನ್ನಡ ಪ್ರಭ ವಾರ್ತೆ ಮಾಲೂರು

ಪುರಸಭೆಯ 15ನೇ ಹಣಕಾಸು ಯೋಜನೆಯಡಿ ಯರಗೋಳ್ ಡ್ಯಾಂ ನೀರು ಮಾಲೂರು ಪಟ್ಟಣಕ್ಕೆ ಪೂರೈಕೆಯಾಗಿದ್ದು, ಆ ನೀರನ್ನು ಪಟ್ಟಣದ 27 ವಾರ್ಡ್‌ಗಳಿಗೂ ಹಂತ ಹಂತವಾಗಿ ಸರಬರಾಜು ಮಾಡುವ ಜವಾಬ್ದಾರಿ ಪುರಸಭೆ ಆಡಳಿತದಾಗಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

ಪಟ್ಟಣದ 13ನೇ ವಾರ್ಡ್‌ನಲ್ಲಿ ಯರಗೋಳ್ ನೀರು ಸರಬರಾಜು ಪೈಪ್‌ಲೈನ್‌ಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪುರಸಭೆಯ 15ನೇ ಹಣಕಾಸು ಯೋಜನೆಯಡಿಯಲ್ಲಿ ಮಾಲೂರು ಪಟ್ಟಣದಲ್ಲಿ ಯರಗೋಳ್ ಕುಡಿಯುವ ನೀರಿನ ಸರಬರಾಜನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟನೆ ಮಾಡಿದ್ದಾರೆ. ಯರಗೊಳ್ ನೀರು ಪಟ್ಟಣದ 27 ವಾರ್ಡಗಳ ಪೈಕಿ 12 ವಾರ್ಡುಗಳಲ್ಲಿ ಈಗಾಗಲೇ ನೀರು ಸರಬರಾಜು ಆಗುತ್ತಿದ್ದು, 2ನೇ ಹಂತದಲ್ಲಿ 15ನೇ, 22 ನೇ ಮತ್ತು 23ನೇ ವಾರ್ಡಗಳಿಗೆ ನೀರು ಸರಬರಾಜು ಮಾಡಲು ಹಾಗೂ 15ನೇ ವಾರ್ಡ್ ಸೇರಿದಂತೆ ಎಲ್ಲಾ ವಾರ್ಡ್‌ಗಳಲ್ಲೂ ಚರಂಡಿ, ಮಾಡಿಸಲು 15ನೇ ಹಣಕಾಸು ಯೋಜನೆಯಲ್ಲಿ 42 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿಯನ್ನು ಮಾಡಲು ಗುದಲಿ ಪೂಜೆಯನ್ನು ಮಾಡಲಾಗಿದೆ ಎಂದರು.

ರಸ್ತೆ, ಗ್ಯಾಸ್‌ ಪೈಪ್‌ಲೈನ್, ನೀರಿನ ಪೈಪ್‌ಲೈನ್‌ಗಳಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರಿಕೆಯಿಂದ ನೋಡಿ ಕೊಂಡು ಆದಷ್ಟು ಬೇಗನೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಆಯಾ ವಾರ್ಡ್‌ಗಳ ಸದಸ್ಯರು ಪುರಸಭೆ ಅಧಿಕಾರಿಗಳು ಜವಾಬ್ದಾರಿ ವಹಿಸಿ ಗುಣಮಟ್ಟದ ಕಾಮಗಾರಿ ಆಗುವಂತೆ ನೋಡಿಕೊಳ್ಳಬೇಕು ಎಂದರು.

ಪಟ್ಟಣದ ಬಸ್ ನಿಲ್ದಾಣ, ದೊಡ್ಡಕೆರೆ ಅಭಿವೃದ್ಧಿ, ಆಶ್ರಯ ನಿವೇಶನ, 4 ಪಥದ ರಸ್ತೆ, ಸೇರಿದಂತೆ ಹಲವಾರು ಕಾಮಗಾರಿಗಳ ಆದೇಶ ಸಿದ್ದವಾಗಿದ್ದು, ಇನ್ನೇನು 60 ದಿನಗಳಲ್ಲಿ ಟೆಂಡರ್‌ಗೆ ಹೋಗುತದೆ ಎಂಬ ಮಾಹಿತಿ ಅಧಿಕಾರಿಗಳು ನೀಡಿದ್ದಾರೆ ಎಂದರು.

ಪುರಸಭೆಯ ಚುನಾವಣೆ ಕೇವಲ ಒಂದು ವರ್ಷವಿದ್ದು, ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿ ಇರುವುದರಿಂದ ಅಭಿವೃದ್ಧಿಗೊಳಿಸಿ ಪುರಸಭೆಯ ಆಡಳಿತ ಮತ್ತೆ ಕಾಂಗ್ರೆಸ್ ಆಡಳಿತಕ್ಕೆ ಬರುಲಿದೆ. ಆಗ ಇನ್ನು ಹೆಚ್ಚಾಗಿ ಅಭಿವೃದ್ಧಿ ಮಾಡಬಹುದು. ಅದರಿಂದ ಎಲ್ಲಾ ಸದಸ್ಯರು ಪಟ್ಟಣ ಅಭಿವೃದ್ಧಿ ಸಹಕರಿಸಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಕೋಮಲ ನಾರಾಯಣ್, ಸ್ಥಾಯಿ ಸಮಿತಿ ಅಧ್ಯಕ್ಷ ಎ.ರಾಜಪ್ಪ, ಮುಖ್ಯಾಧಿಕಾರಿ ಎ.ಬಿ.ಪ್ರದೀಪ್, ಸದಸ್ಯರಾದ ವೆಂಕಟೇಶ್, ಪರಮೇಶ್, ಇಂತಿಯಾಜ್, ಗ್ರಾ.ಪಂ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಚಂದ್ರು, ಮುಖಂಡರಾದ ದಿನೇಶ್ ಗೌಡ, ಕೋಳಿ ನಾರಾಯಣ್, ಮಂಜುನಾಥ್, ಎಂ.ಪಿ.ವಿ.ಮಂಜು, ತನ್ವಿರ್ ಇತರರು ಇದ್ದರು.ಫೋಟೋ; ಮಾಲೂರು 13ನೇ ವಾರ್ಡ್‌ನಲ್ಲಿ ಯರಗೋಳ್ ನೀರು ಸರಬರಾಜು ಪೈಪ್‌ಲೈನ್‌ಗೆ ಶಾಸಕ ಕೆ.ವೈ.ನಂಜೇಗೌಡ ಗುದ್ದಲಿ ಪೂಜೆ ನೆರವೇರಿಸಿದರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''