ಶಾಸಕ ಮಹೇಶ ಟೆಂಗಿನಕಾಯಿ ಜನ್ಮದಿನದ ಅಂಗವಾಗಿ ಬುಧವಾರ ನಗರದಲ್ಲಿ ಅವರ ಅಭಿಮಾನಿಗಳಿಂದ ರಕ್ತದಾನ, ವಿಶೇಷ ಪೂಜೆ, ವನಮಹೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮ ಜರುಗಿದವು.
ಹುಬ್ಬಳ್ಳಿ:
ಶಾಸಕ ಮಹೇಶ ಟೆಂಗಿನಕಾಯಿ ಜನ್ಮದಿನದ ಅಂಗವಾಗಿ ಬುಧವಾರ ನಗರದಲ್ಲಿ ಅವರ ಅಭಿಮಾನಿಗಳಿಂದ ರಕ್ತದಾನ, ವಿಶೇಷ ಪೂಜೆ, ವನಮಹೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮ ಜರುಗಿದವು.
ಬೆಳಗ್ಗೆ ನಗರದ ಸದ್ಗುರು ಶ್ರೀಸಿದ್ಧಾರೂಢ ಮಠ ಹಾಗೂ ಗೋಪನಕೊಪ್ಪದ ದುರ್ಗವ್ವ, ದ್ಯಾಮವ್ವನ ದೇವಸ್ಥಾನದಲ್ಲೂ ಶಾಸಕರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗೋಪನಕೊಪ್ಪದಲ್ಲಿರುವ ಸರ್ಕಾರಿ ಕಾಲೇಜಿನಲ್ಲಿ ವನಮಹೋತ್ಸವ, ಹುಬ್ಬಳ್ಳಿ ಸೇವಾ ಸದನದಲ್ಲಿ ಬಡ ಮಕ್ಕಳೊಂದಿಗೆ ಜನ್ಮದಿನಾಚರಣೆ, ಬಾಫನಾ ಕಾರ್ಯಾಲಯದಲ್ಲಿ ಬ್ಯಾಗ್ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಬೃಹತ್ ರಕ್ತದಾನ ಶಿಬಿರ:
ಇಲ್ಲಿನ ಗೋಕುಲ್ ರಸ್ತೆಯಲ್ಲಿರುವ ಕ್ಯೂಬಿಕ್ಸ್ ಹೊಟೇಲಿನಲ್ಲಿ ರಾಷ್ಟ್ರೋತ್ಥಾನ ರಕ್ತ ನಿಧಿ ಕೇಂದ್ರದ ಸಹಯೋಗದೊಂದಿಗೆ ಮಹೇಶ ಟೆಂಗಿನಕಾಯಿ ಅಭಿಮಾನಿಗಳಿಂದ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಯಿತು. ಶಿಬಿರದಲ್ಲಿ 185ಕ್ಕೂ ಹೆಚ್ಚು ಅಭಿಮಾನಿಗಳು ರಕ್ತದಾನ ಮಾಡಿದರು. ಬಳಿಕ ರಕ್ತದಾನಿಗಳಿಗೆ ಶಾಸಕ ಮಹೇಶ ಟೆಂಗಿನಕಾಯಿ ಅಭಿನಂದಿಸಿದರು.
ಈ ವೇಳೆ ಮೇಯರ್ ಜ್ಯೋತಿ ಪಾಟೀಲ, ಉಪಮೇಯರ್ ಸಂತೋಷ ಚೌಹಾಣ, ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ವೀರಣ್ಣ ಸವಡಿ, ಅಧ್ಯಕ್ಷ ರಾಜು ಕಾಳೆ, ರವಿ ನಾಯಕ, ಪ್ರವೀಣ ಪವಾರ, ರಾಮನಗೌಡ ಶೆಟ್ಟನಗೌಡರ, ಜಗದೀಶ ಬಳ್ಳಾನವರ, ಮುತ್ತು ಹುಬ್ಬಳ್ಳಿ, ಮಂಜು, ಪ್ರಶಾಂತ ಜಾದವ್ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.