₹1.96 ಕೋಟಿ ಕಾಮಗಾರಿಗೆ ಶಾಸಕ ಮಂಜುನಾಥ್ ಅಡಿಗಲ್ಲು

KannadaprabhaNewsNetwork |  
Published : Jul 26, 2026, 01:45 AM IST
1. 96 ಕೋಟಿ. ವೆಚ್ಚದ ಕಾಮಗಾರಿಗಳಿಗೆ ಶಾಸಕ ಎಂ.ಆರ್.ಮಂಜುನಾಥ್ ಭೂಮಿ ಪೂಜೆ | Kannada Prabha

ಸಾರಾಂಶ

ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಂ.ಆರ್‌ ಮಂಜುನಾಥ್ ಅವರು ಭೂಮಿ ಪೂಜೆ ನೆರವೇರಿಸಿದರು.

ಕಾಮಗೆರೆಯಿಂದ ಗುಂಡಾಲ್ ಡ್ಯಾಂ ಸಂಪರ್ಕಿಸುವ ರಸ್ತೆ ಸೇರಿ ವಿವಿಧ ಕೆಲಸಗಳಿಗೆ ಶಂಕುಸ್ಥಾಪನೆ । ಜನರೊಂದಿಗೆ ಸಂವಾದ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಂ.ಆರ್‌ ಮಂಜುನಾಥ್ ಅವರು ಭೂಮಿ ಪೂಜೆ ನೆರವೇರಿಸಿದರು.ಕಾಮಗೆರೆ ಮುಖ್ಯರಸ್ತೆಯಿಂದ ಗುಂಡಾಲ್‌ ಡ್ಯಾಂ ಸಂಪರ್ಕ ರಸ್ತೆಯ ಅಭಿವೃದ್ಧಿ ಕಾಮಗಾರಿ, ಮಧುವನಹಳ್ಳಿ ಉಪ್ಪಾರ ಸಮುದಾಯ ಭವನದ ಮುಂದುವರೆದ ಕಾಮಗಾರಿ ಹಾಗೂ ಸಿಸಿ ರಸ್ತೆ ಸೇರಿದಂತೆ ಒಟ್ಟು 1.96 ಕೋಟಿ ರು. ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.ಈ ವೇಳೆ ಶಾಸಕ ಎಂ.ಆರ್‌. ಮಂಜುನಾಥ್ ಮಾತನಾಡಿ, ರಾಜ್ಯ ಸರ್ಕಾರ ಗ್ರಾಮೀಣ ಭಾಗದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ನಮ್ಮ ತಾಲೂಕಿಗೆ ಸಾಕಷ್ಟು ಅನುದಾನ ತರಲಾಗಿದೆ. ಕಾಮಗೆರೆ-ಗುಂಡಾಲ್ ಡ್ಯಾಂ ಸಂಪರ್ಕ ರಸ್ತೆ ಅಭಿವೃದ್ಧಿಯಿಂದ ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಮಧುವನಹಳ್ಳಿ ಉಪ್ಪಾರ ಸಮುದಾಯ ಭವನ ಕಾಮಗಾರಿ ಪೂರ್ಣಗೊಂಡರೆ ಉಪಯುಕ್ತವಾಗಲಿದೆ. ಗುಣಮಟ್ಟದ ಕಾಮಗಾರಿ ನಡೆಯುವಂತೆ ಅಧಿಕಾರಿಗಳು ನಿಗಾ ವಹಿಸಬೇಕು. ಮುಂದಿನ ದಿನಗಳಲ್ಲಿ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಇನ್ನಷ್ಟು ಅನುದಾನ ತರಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಕೆಆರ್‌ಡಿಎಲ್ ಎಇ ಚಿಕ್ಕಲಿಂಗಯ್ಯ, ಎಂಜಿನಿಯರ್‌ ಕಾರ್ತಿಕ್, ಸಿಂಗನಲ್ಲೂರು ರಾಜಣ್ಣ, ಮಂಜೇಶ್ ಗೌಡ, ನಟರಾಜು ಗೌಡ, ಜೇಸಿಂ ಪಾಷಾ, ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್‌, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ರಮೇಶ್, ಶಿವು, ರಾಕೇಶ್, ಕಿಶೋರ್‌, ಗುರುಮೂರ್ತಿ, ಗುರುಸ್ವಾಮಿ, ಮಾದಮ್ಮ, ಬಸವಣ್ಣ, ಶಿವಮಲ್ಲು, ತಮ್ಮಯ್ಯ ಶೆಟ್ಟಿ, ನಂಜುಂಡ, ನಟೇಶ್, ಚಿನ್ನಸ್ವಾಮಿ, ಅರಸಶೆಟ್ಟಿ, ಮೋಹನ್ ಕುಮಾರ್‌, ಗೋವಿಂದ, ಪ್ರಭುಸ್ವಾಮಿ, ಶ್ರೀನಿವಾಸ್, ಪುಟ್ಟರಾಜು ಸೇರಿದಂತೆ ಸ್ಥಳೀಯ ಮುಖಂಡರು ಮತ್ತು ಗ್ರಾಮಸ್ಥರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಕಿ ವೇತನ ಬಿಡುಗಡೆಗೆ ಆಶಾ ಕಾರ್ಯಕರ್ತೆಯರ ಆಗ್ರಹ
ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದಿದ್ದು ಕನ್ನಡದ ಹೆಮ್ಮೆ: ವಾಮದೇವಪ್ಪ