ಜನರ ಬೇಡಿಕೆಗೆ ಶಾಸಕ ನಾಡಗೌಡರಿಂದ ಸ್ಪಂದನೆ

KannadaprabhaNewsNetwork |  
Published : Mar 11, 2026, 02:45 AM IST
ತಾಳಿಕೋಟೆ 1 | Kannada Prabha

ಸಾರಾಂಶ

ಕೊಣ್ಣೂರ ಗ್ರಾಮವು ಮತಕ್ಷೇತ್ರದಲ್ಲಿಯೇ ದೊಡ್ಡ ಗ್ರಾಮವಾಗಿದೆ. ಈ ಗ್ರಾಮದ ಅಭಿವೃದ್ಧಿಗಾಗಿ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಸರ್ಕಾರದಿಂದ ವಿವಿಧ ಅನುದಾನದಡಿಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಬಹುದಿನಗಳ ಬೇಡಿಕೆಯಾಗಿ ಉಳಿದಿದ್ದ ರಸ್ತೆ ಕಾಮಗಾರಿಗೆ ಚಾಲನೆ ದೊರಕಿರುವುದು ಸಂತಸ ತಂದಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬಸನಗೌಡ ಹಡಲಗೇರಿ ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಕೊಣ್ಣೂರ ಗ್ರಾಮವು ಮತಕ್ಷೇತ್ರದಲ್ಲಿಯೇ ದೊಡ್ಡ ಗ್ರಾಮವಾಗಿದೆ. ಈ ಗ್ರಾಮದ ಅಭಿವೃದ್ಧಿಗಾಗಿ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಸರ್ಕಾರದಿಂದ ವಿವಿಧ ಅನುದಾನದಡಿಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಬಹುದಿನಗಳ ಬೇಡಿಕೆಯಾಗಿ ಉಳಿದಿದ್ದ ರಸ್ತೆ ಕಾಮಗಾರಿಗೆ ಚಾಲನೆ ದೊರಕಿರುವುದು ಸಂತಸ ತಂದಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬಸನಗೌಡ ಹಡಲಗೇರಿ ಹೇಳಿದರು.

ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಜಿಲ್ಲಾ ಪಂಚಾಯತಿ ವಿಜಯಪುರ ಸನ್ ೨೦೨೫-೨೬ನೇ ಸಾಲಿನ ಲೆಕ್ಕ ಶಿರ್ಷಿಕೆ ೫೦೫೪ರಡಿ ₹೧ ಕೋಟಿ ವೆಚ್ಚದಲ್ಲಿ ಎಸ್.ಸಿ.ಕಾಲೋನಿಯ ಸಿ.ಸಿ.ರಸ್ತೆ ಕಾಮಗಾರಿಗೆ ಭೂಮಿಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುದ್ದೇಬಿಹಾಳ ಮತಕ್ಷೇತ್ರದ ಪ್ರತಿ ಗ್ರಾಮಗಳಿಗೆ ಅನುದಾನ ಒದಗಿಸುವುದರೊಂದಿಗೆ ಜನರಿಗೆ ಅವಶ್ಯವಿರುವ ಕೆಲಸ ಕಾರ್ಯಗಳನ್ನು ಮಾಡುತ್ತ ಸಾಗಿದ್ದಾರೆ. ಅದರಂತೆ ನಮ್ಮ ಕೊಣ್ಣೂರ ಗ್ರಾಮದ ಕುರಿತು ವಿಶೇಷ ಕಾಳಜಿ ವಹಿಸುವುದರೊಂದಿಗೆ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಅವರ ಅಭಿವೃದ್ಧಿ ಪರ ಚಿಂತನೆಗಳು ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಮುನ್ನುಡಿ ಬರೆಯಲಿದೆ ಎಂದರು.ಕಾಂಗ್ರೆಸ್ ಪಕ್ಷದ ಯುವ ಮುಖಂಡ ಶರಣುಧನಿ ದೇಶಮುಖ ಮಾತನಾಡಿ, ಕ್ಷೇತ್ರದ ವಿವಿಧ ಗ್ರಾಮಗಳನ್ನು ಹೋಲಿಸಿದರೇ ಮುಖ್ಯವಾಗಿ ಕೊಣ್ಣೂರ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿಗೆ ಹೆಚ್ಚಿಗೆ ಆದ್ಯತೆಯನ್ನು ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಪ್ರತಿ ಗ್ರಾಮಗಳಲ್ಲಿಯೂ ರಸ್ತೆ ಅಭಿವೃದ್ಧಿ ಕಾರ್ಯಗಳು ಇನ್ನಷ್ಟು ವೇಗ ಸಿಗಲಿದೆ ಎಂದರು.ಕೆ.ಆರ್.ಐ.ಡಿ.ಎಲ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಆನಂದ ಸ್ವಾಮಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಸದರಿ ರಸ್ತೆಯು ೫ ಮೀಟರ್ ಅಗಲ ಹಾಗೂ ೧ ಕಿಮೀ ಉದ್ದದಾಗಿದ್ದು, ₹೧ ಕೋಟಿ ವೆಚ್ಚದ ಕಾಮಗಾರಿಯಾಗಿದೆ. ಈ ರಸ್ತೆ ಎರಡೂ ಪಕ್ಕದಲ್ಲಿ ಚರಂಡಿ ಮಾಡಿಸಿಕೊಡಲು ಬೇಡಿಕೆದ್ದು ಮುಂದಿನ ಅನುದಾನದಲ್ಲಿ ಇದನ್ನು ಮಾಡಿಕೊಡಲಾಗುವುದು. ಸದರಿ ರಸ್ತೆ ಗುಣಮಟ್ಟದ್ದಾಗಿರುವಂತೆ ನೋಡಿಕೊಳ್ಳಲಾಗುವುದು ಇದಕ್ಕೆ ಎಲ್ಲರ ಸಹಕಾರ ಇರಲಿ ಎಂದರು.ಈ ಸಮಯದಲ್ಲಿ ಗಣ್ಯರಾದ ಮುದೇಪ್ಪಗೌಡ ಹಡಲಗೇರಿ, ಜಿ.ಜಿ.ಪಾಟೀಲ, ಮುತ್ತುಗೌಡ ಹಿಪ್ಪರಗಿ, ಜಿ.ಜಿ.ಅಸ್ಕಿ, ಅಶೋಕಗೌಡ ಬಿರಾದಾರ, ಶಿವನಗೌಡ ಚೌಧರಿ, ಬಿ.ಸಿ.ಪಾಟೀಲ, ಸಂಗನಗೌಡ ಅಸ್ಕಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗಮೇಶ ದೇಸಾಯಿ, ಅಬ್ದುಲ್ ರೆಹಮಾನ ಅವಟಿ, ಜಿ.ಎಸ್.ಐನಾಪೂರ, ಹುಸೇನ್‌ ವಾಲಿಕಾರ, ಸುರೇಶ ನೀರಲಗಿ, ಅಭಿಯಂತರ ಸಚಿನ ಮುಳಗಿ, ಸಾಹೇಬಗೌಡ ಬಿರಾದಾರ ಮೊದಲಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾಸ್ ಸಿಲಿಂಡರ್ ದರ ಹೆಚ್ಚಳ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ
ಪರೀಕ್ಷಾ ಭಯ ಹೋಗಲಾಡಿಸುವ ಪ್ರೇರಣಾ ಶಿಬಿರ