ಕನ್ನಡಪ್ರಭ ವಾರ್ತೆ ಮಾಲೂರು
ಕನ್ನಡ ಅನ್ನದ ಭಾಷೆಯಾಗಬೇಕು. ಏಕೆಂದರೆ ಎಲ್ಲ ಭಾಷಿಕರನ್ನು ತೆರದ ಮನಸ್ಸಿನಿಂದ ಬರಮಾಡಿಕೊಳ್ಳುವ ಕನ್ನಡಿಗರ ಹೃದಯ ವೈಶ್ಯಾಲತೆ ದುರುಪಯೋಗವಾಗುತ್ತಿದ್ದು, ಈ ಬಗ್ಗೆ ಕನ್ನಡಿಗರ ಎಚ್ಚರ ವಹಿಸಬೇಕು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ಅವರು ತಾಲೂಕು ಆಡಳಿತದ ಸಹಕಾರದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟವು ಆಯೋಜಿಸಿದ್ದ 69 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ನಾಡದೇವಿ ಭುವನೇಶ್ವರಿಯ ಭವ್ಯ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಕನ್ನಡಿಗರೇ ಪರಕೀಯರುದೇಶದಲ್ಲಿ ಕರ್ನಾಟಕ ಒಂದೇ ರಾಜ್ಯ ಹತ್ತುಕ್ಕೂ ಹೆಚ್ಚು ಭಾಷಿಕರು ನೆಮ್ಮದಿಯಿಂದ ಜೀವಿಸುತ್ತಿದ್ದಾರೆ. ಇಲ್ಲಿಗೆ ಬಂದ ಅನ್ಯಭಾಷಿಕರು ಅವರ ಪ್ರದೇಶ ಎಂಬಂತೆ ಬದುಕುತ್ತಿದ್ದಾರೆ. ನಮ್ಮ ಔದರ್ಯತೆಯಿಂದಾಗಿ ನಾವೇ ಪರಕೀಯರಾಗುವ ಸಂಭವ ಹೆಚ್ಚಾಗುತ್ತಿದೆ. ಇಲ್ಲಿಗೆ ಬರುವವರಿಗೆ ಕನ್ನಡವೇ ಅನ್ನದ ಭಾಷೆಯಾಗಬೇಕು. ಈ ನಿಟ್ಟಿನಲ್ಲಿ ಸಂಘಸಂಸ್ಥೆಗಳು ವಾತಾವರಣ ಸೃಷ್ಠಿಸಬೇಕು. ನಮ್ಮ ಕ್ಷೇತ್ರ ತಮಿಳುನಾಡು-ಆಂಧ್ರ ಗಳ ಗಡಿಭಾಗದಲ್ಲಿದ್ದರೂ ಇಲ್ಲಿ ಕನ್ನಡವೇ ಸಾರ್ವಭೌಮವಾಗಿರಲು ಇಲ್ಲಿನ ಕನ್ನಡ ಪರ ಸಂಘಟನೆಗಳ ಚಟುವಟಿಕೆಗಳೇ ಕಾರಣ ಎಂದರು.
ಡೊಳ್ಳು ಬಾರಿಸುತ್ತ ನರ್ತಿಸಿದ ಶಾಸಕಮೆರವಣಿಗೆಯಲ್ಲಿ ಹತ್ತಾರು ಕಲಾತಂಡಗಳು,ಗ್ರಾ.ಪಂ.ವತಿಯಿಂದ ಬಂದ ಇಪ್ಪತ್ತುಕ್ಕೂ ಹೆಚ್ಚು ಪಲ್ಲಕ್ಕಿಗಳು ಮೆರವಣಿಗೆಗ ಮೆರಗು ನೀಡಿದವು.ಈ ಬಾರಿ ವಿಶೇಷವಾಗಿ ಗ್ರಾಮ ದೇವತೆಗಳ ಪಲ್ಲಕ್ಕಿಗಳು ಸಹ ಮೆರವಣಿಗೆಯಲ್ಲಿದ್ದವು.ಶಾಸಕ ನಂಜೇಗೌಡರು ಮೆರವಣಿಗೆಯಲ್ಲಿ ಡೊಳ್ಳು ಬಾರಿಸುತ್ತ ನರ್ತಿಸಿದರು.
ತಹಸೀಲ್ದಾರ್ ಕೆ.ರಮೇಶ್,ತಾ.ಪಂ.ಇ.ಒ.ಕೃಷ್ಣಪ್ಪ ,ಬಿಇಓ ಚಂದ್ರಕಲಾ ,ಮುಖ್ಯಾಧಿಕಾರಿ ಪ್ರದೀಪ್ ಕುಮಾರ್,ಸಹಾಯಕ ಅಭೀಯಂತರ ಅನ್ವರ್ ಪಾಷ,ಇನ್ಸ್ ಪೆಕ್ಟರ್ ವಸಂತ್ ಕುಮಾರ್ ,ಸ್ಥಾಯಿ ಸಮಿತಿ ಅಧ್ಯಕ್ಷ ಎ.ರಾಜಪ್ಪ ,ಒಕ್ಕೂಟದ ಅಧ್ಯಕ್ಷ ಎಂ.ವಿ.ಹನುಮಂತಯ್ಯ,ಎಸ್.ಎಂ.ರಾಜು.ಚಾಕನಹಳ್ಳಿ ನಾಗರಾಜ್,ಅಶ್ವಥ ರೆಡ್ಡಿ,ಪ್ರದೀಪ್ ರೆಡ್ಡಿ ,ಕೊಡೋರ್ ಗೋಪಾಲ್ .ಸಂತೋಷ್ ,ಶಬ್ಬೀರ್ ವುಲ್ಲಾ ,ದಯಾನಂದ್ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಧುಸೂಧನ್ , ವಿಜಯನಾರಸಿಂಹ, ಪುರಸಭೆ ಸದಸ್ಯ ಪರಮೇಶ್, ಇಂತಿಯಾಜ್, ರಾಮಮೂರ್ತಿ, ಆಂಜಿನಪ್ಪ, ಇನ್ನಿತರರು ಇದ್ದರು.