ಮಂಡ್ಯ:
ಪ್ರತಿಷ್ಠಿತ ಲೂಮಿನಾರ್ಸ್ ಸಂಸ್ಥೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡುತ್ತಿರುವ 25ಕ್ಕೂ ಹೆಚ್ಚು ಸಾಧಕರಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲು ಕಾರ್ಯಕ್ರಮದ ಅತಿಥಿಗಳಾಗಿ ಲಂಡನ್‌ನಲ್ಲಿ ನಾಲ್ಕು ಬಾರಿ ಸಂಸದರಾಗಿ ಸೇವೆ ಸಲ್ಲಿಸಿರುವ ವೀರೇಂದ್ರ ಶರ್ಮಾ ಹಾಗೂ ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಭಾಗವಹಿಸಿದ್ದರು.
ವಿದೇಶದ ಸಾಧಕರ ಜೊತೆಗೆ ಬೆಂಗಳೂರು ಕಿಂಗ್ಸ್ ಕ್ಲಬ್‌ನ ಮಾಲೀಕ ವಿ.ರವಿಕುಮಾರ್ ಹಾಗೂ ದುಬೈನಲ್ಲಿರುವ ಎಂ.ಕೆ. ಇಂಟರ್ ನ್ಯಾಷನಲ್ ಕಂಪನಿಯ ಮಾಲೀಕ ಚಿಕ್ಕಮಗಳೂರು ಮೂಲದ ಕಾರ್ತಿಕ್‌ಗೌಡ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಕಾರ್ಯಕ್ರಮದ ನಂತರ ಶಾಸಕ ಪಿ.ರವಿಕುಮಾರ್ ಕನ್ನಡ ಭಾಷಣ. ಆಂಗ್ಲ ಭಾಷೆಯಲ್ಲಿ ಮಾತು ಆರಂಭಿಸಿ ನನ್ನ ಮಾತೃಭಾಷೆಯಲ್ಲಿ ಮಾತನಾಡುವುದಾಗಿ ಹೇಳಿ ಎಲ್ಲರಿಗೂ ನಮಸ್ಕಾರ ತಿಳಿಸಿದರು. ಈ ವೇಳೆ ನೆರೆದಿದ್ದವರು ಚಪ್ಪಾಳೆ ತಟ್ಟುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಡ್ಯದಿಂದ 90 ರಾಷ್ಟ್ರಕ್ಕೆ ಎಥೆನಾಲ್ ಪೂರೈಕೆ ಮಾಡಿದ ಹೆಗ್ಗಳಿಕೆ ಹೊಂದಿದೆ. ಭಾರತದಲ್ಲಿ ಬ್ರಿಟಿಷ್ ಸರ್ಕಾರವಿದ್ದಾಗ ಬೇರೆ ರಾಷ್ಟ್ರಗಳಿಗೆ ಎಥೆನಾಲ್ ಅನ್ನು ರಫ್ತು ಮಾಡುತ್ತಿತ್ತು. ಕರ್ನಾಟಕ ಇಷ್ಟು ಸಮೃದ್ಧಿಯಾಗಿದೆ. ದುಬೈ ಸೇರಿದಂತೆ ವಿದೇಶಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಟ್ರಾಫಿಕ್ ಹೆಚ್ಚಾಗಿಲ್ಲ. ಇಲ್ಲಿನ ಉದ್ಯಮಿಗಳು ಕರ್ನಾಟಕ್ಕೆ ಬಂದು ಉದ್ಯಮಕ್ಕೆ ಹಣ ಹೂಡಿಕೆ ಮಾಡಬಹುದು. ನಮ್ಮ ರಾಜ್ಯ ಸರ್ಕಾರ ಸ್ನೇಹಮಯ ವಾತಾವರಣ ಕಲ್ಪಿಸಿಕೊಡಲಿದೆ ಎಂದರು.