ಶಿಗ್ಗಾಂವಿ: ಪಟ್ಟಣದ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಶಾಸಕ ಯಾಸೀರಖಾನ ಪಠಾಣ ಪ್ರಾರ್ಥನೆ ಸಲ್ಲಿಸಿದರು.
ನಂತರ ಹಬ್ಬದ ಶುಭಾಶಯಗಳನ್ನು ಕೋರಿ ಮಾತನಾಡಿ, ಅಲ್ಲಾ ನಮಗೆ ಜನರ ಸೇವೆಯನ್ನು ಮಾಡಲು ಒಂದು ಒಳ್ಳೆಯ ಅವಕಾಶ ನೀಡಿದ್ದಾನೆ. ಅದರ ಸದುಪಯೋಗವನ್ನು ಪಡೆದುಕೊಂಡು ಸೇವೆ ಸಲ್ಲಿಸುತ್ತೇನೆ ಎಂದರು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಗೌಸಖಾನ ಮುನಶಿ, ಜಾಫರಖಾನ ಪಠಾಣ, ಮುಕ್ತಾರಾಹ್ಮದ ತಹಶೀಲ್ದಾರ, ಮಾಜಿ ಪುರಸಭೆ ಅಧ್ಯಕ್ಷ ಅಬ್ದುಲ್ ಕರೀಂ ಮೊಗಲಲ್ಲಿ, ಮಜೀದ ಮಾಳಗಿಮನಿ, ಮುನ್ನಾ ಲಕ್ಷೇಶ್ವರ, ಮುಕ್ತಾರ ತಿಮ್ಮಾಪೂರ, ರಶೀದ ಗೋಟಗೋಡಿ, ಮುನ್ನಾ ಮಾಲ್ದಾರ, ಸಾಧಿಕ ಸವಣೂರ, ಅತ್ತಾವುಲ್ಲಾ ಖಾಜೇಖಾನವರ, ಎಚ್.ಎಂ. ಕಳಸ, ಜಾವೀದ ದೊಡ್ಡಮನಿ, ಕಾಶಿಂ ಸವಣೂರ, ಮುಕ್ತಿಯಾರ ಜಮಾದಾರ, ಬೇಫಾರಿ ಇತರರು ಇದ್ದರು.ತಂಪು ಪಾನೀಯ ವಿತರಣೆ: ಪಟ್ಟಣದ ಈದ್ಗಾ ಮೈದಾನ ಹೋಗುವ ಮಾರ್ಗಮಧ್ಯೆ ರಂಜಾನ್ ಹಬ್ಬದ ಪ್ರಯುಕ್ತ ಶಾಸಕ ಯಾಶೀರಖಾನ ಪಠಾಣ ಹಾಗೂ ಸುಜೀತ ಶೆಟ್ಟಿ ಹಾಗೂ ಮನೀಷ ಶೆಟ್ಟಿ ನೇತೃತ್ವದಲ್ಲಿ ಮಜ್ಜಿಗೆ ಮತ್ತು ತಂಪು ಪಾನೀಯವನ್ನು ವಿತರಿಸಿದರು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಗೌಸಖಾನ ಮುನಶಿ, ಸಾಧಿಕ ಸವಣೂರ, ಅತ್ತಾವುಲ್ಲಾ ಖಾಜೇಖಾನವರ ಇತರರು ಇದ್ದರು.ಶ್ರದ್ಧಾ ಭಕ್ತಿಯಿಂದ ರಂಜಾನ್ ಆಚರಣೆರಾಣಿಬೆನ್ನೂರು: ಅಲ್ಲಾನ ಆರಾಧನೆ ಮತ್ತು ಉಪವಾಸ ಮಾಸದ ಪ್ರತೀಕವಾದ ಪವಿತ್ರ ರಂಜಾನ್ ಹಬ್ಬವನ್ನು ನಗರದ ಮುಸಲ್ಮಾನರು ಸೋಮವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.ಇಲ್ಲಿನ ಮಾರುತಿನಗರದಲ್ಲಿರುವ ಈದ್ಗಾ ಮೈದಾನದಲ್ಲಿ ಬೆಳಗ್ಗೆ 10.30ರ ಸಮಯದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಸಮಾಜದವರು ಮೌಲ್ವಿಗಳ ಸಮ್ಮುಖದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಅಬಾಲವೃದ್ಧರಾಗಿ ಹೊಸಬಟ್ಟೆಗಳನ್ನು ಧರಿಸಿದ ಎಲ್ಲರೂ ಒಂದಾಗಿ ಬಂದು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ನಂತರ ಒಬ್ಬರಿಗೊಬ್ಬರು ಆಲಂಗಿಸಿಕೊಳ್ಳುವ ಮೂಲಕ ಹಬ್ಬದ ಶುಭಾಶಯ ಕೋರಿದರು. ಉಳ್ಳವರು ಇಡೀ ವರ್ಷದ ಆದಾಯದಲ್ಲಿ ಉಳಿತಾಯ ಮಾಡಿದ ಹಣದಲ್ಲಿ ಬಡಬಗ್ಗರಿಗೆ ದವಸ, ಧಾನ್ಯಗಳನ್ನು ಕಾಣಿಕೆಯಾಗಿ ನೀಡಿದರು.ಶಾಸಕ ಪ್ರಕಾಶ ಕೋಳಿವಾಡ ಮುಸಲ್ಮಾನರ ಜತೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಜತೆಗೆ ಅವರಿಗೆ ಹಬ್ಬದ ಶುಭಾಶಯ ಕೋರಿದರು.
ಅಂಜುಮನ್ ಸಂಸ್ಥೆ ಅಧ್ಯಕ್ಷ ಎಚ್.ಎಫ್. ಬಿದರಿ, ಉಪಾಧ್ಯಕ್ಷ ಜಬೀವುಲ್ಲಾ ದಾವಣಗೆರಿ, ಕಾರ್ಯದರ್ಶಿ ರಫೀಕ್ ಮೆಣಸಿನಕಾಯಿ, ಖಜಾಂಚಿ ಆರ್.ಬಿ. ಕುಪ್ಪೇಲೂರ, ಸದಸ್ಯರಾದ ಶೇರುಖಾನ ಕಾಬೂಲಿ, ಬಾಷಾಸಾಬ ಹಾವನೂರ, ಅತಾವುಲ್ಲಾ ಉದಗಟ್ಟಿ, ಅಬ್ದುಲ್ ವಹಾಬ್ ಶಾಫಿ, ನೂರುಲ್ಲಾ ಖಾಜಿ, ಮುನವ್ವರ್ ಬಾಗವಾಲೆ, ಸೈಯದ್ ಅಹ್ಮದ್ ಕಿಲ್ಲೇದಾರ, ಇಲಿಯಾಸ್ ಬಳ್ಳಾರಿ, ಜಮ್ಮುಣ್ಣಿಸಾಬ್ ಅತ್ತಾರ ಮತ್ತಿತರು ಇದ್ದರು.