ಕೋಟಿ ವೆಚ್ಚದ ವೃಕ್ಷೋದ್ಯಾನಕ್ಕೆ ಶಾಸಕ ಪಾಟೀಲ್ ಶಂಕು

KannadaprabhaNewsNetwork |  
Published : Jul 12, 2026, 02:30 AM IST
 | Kannada Prabha

ಸಾರಾಂಶ

MLA Patil lays foundation stone for tree park costing crores

-ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಕಾಮಗಾರಿಗೆ ಅಡಿಗಲ್ಲು

---

ಕನ್ನಡಪ್ರಭ ವಾರ್ತೆ ಅಫಜಲಪುರ

ಅಫಜಲಪುರ ತಾಲೂಕು ಕೇಂದ್ರದಲ್ಲಿ ಸಾರ್ವಜನಿಕರಿಗೆ ವಾಯು ವಿಹಾರಕ್ಕಾಗಿ ಸುಸಜ್ಜಿತ ಉದ್ಯಾನವನ ಇಲ್ಲ ಎನ್ನುವ ಕೊರಗನ್ನು ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ನೀಗಿಸಲಿದೆ ಎಂದು ಶಾಸಕ ಎಂ.ವೈ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.

ವಿಜಯಪುರ ರಸ್ತೆಯಲ್ಲಿರುವ ಸಣ್ಣ ನೀರಾವರಿ ಇಲಾಖೆಯ 2.5 ಎಕರೆ ಜಾಗದಲ್ಲಿ 1 ಕೋಟಿ ಅನುದಾನದಲ್ಲಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಕಾಮಗಾರಿಗೆ ಅಡಿಗಲ್ಲು ನೇರವೇರಿಸಿ ಮಾತನಾಡಿದ ಅವರು ಅರಣ್ಯ ಇಲಾಖೆಯವರು ಬಹಳ ಮಹತ್ವದ ಯೋಜನೆ ಕೈಗೆತ್ತಿಕೊಂಡಿದ್ದಾರೆ, ಯೋಜನೆಯಂತೆ ಎಲ್ಲಾ ರೀತಿಯ ಸಸ್ಯ ಸಂಕುಲ, ಗಿಡಮರಗಳನ್ನು ನೆಟ್ಟು ಬೆಳೆಸಿ ಉತ್ತಮ ಪರಿಸರವನ್ನು ಪಟ್ಟಣದ ನಾಗರಿಕರಿಗೆ ದೊರಕಿಸುವ ಕೆಲಸ ಮಾಡಿ ಎಂದು ಸಲಹೆ ನೀಡಿದ ಅವರು ಬಳಿಕ ದುಧನಿ ರಸ್ತೆಯಲ್ಲಿರುವ ಅರಣ್ಯ ಇಲಾಖೆ ಜಾಗದಲ್ಲಿ 50 ಲಕ್ಷ ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಹೊಸ ಉಪ ವಲಯ ಅರಣ್ಯಾಧಿಕಾರಿಗಳ ಕಚೇರಿಯನ್ನು ಉದ್ಘಾಟಿಸಿದರು.

ಅರಣ್ಯ ಇಲಾಖೆಯಿಂದ ಪ್ರತಿವರ್ಷ ನೆಡುತೋಪು, ವಿವಿಧ ಬಗೆಯ ಸಸಿಗಳನ್ನು ನೆಡುವ ಕಾರ್ಯಕ್ರಮ ಮಾಡುತ್ತೀರಿ, ಆದರೆ, ನೆಟ್ಟ ಸಸಿ ಮರವಾಗಿ ಬೆಳೆಸುವ ಜವಾಬ್ದಾರಿ ಕೂಡ ಇಲಾಖೆ ಮೇಲಿದೆ. ಹೀಗಾಗಿ ಸಾರ್ವಜನಿಕರನ್ನು, ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೆಚ್ಚು ಮರಗಳನ್ನು ಬೆಳೆಸುವ ಕೆಲಸ ಮಾಡಿ, ಅರಣ್ಯ ಸಂಪತ್ತಿನ ವೃದ್ಧಿಗೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡಲು ನಾನು ಸಿದ್ದನಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್, ಜಿಲ್ಲಾ ಎಪಿಎಂಸಿ ಅಧ್ಯಕ್ಷ ಮಂಜುನಾಥ ಅಂಜುಟಗಿ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪ್ರಕಾಶ ಜಮಾದಾರ, ಪ್ರಮುಖರಾದ ಸಿದ್ಧಾರ್ಥ್ ಬಸರಿಗಿಡ, ಶಿವಾನಂದ ಗಾಡಿಸಾಹುಕಾರ, ಸಿದ್ದು ಸಿರಸಗಿ, ಶರಣು ಕುಂಬಾರ, ರಾಜು ಪಾಟೀಲ, ಶಿವು ಪದಕಿ, ವಿಶ್ವನಾಥ ಕರ್ಜಗಿ, ಮಳೇಂದ್ರ ದೇಸಾಯಿ, ಪ್ರವೀಣ ಕಲ್ಲೂರ, ಸೈಫನ್ ಚಿಕ್ಕಳಗಿ, ಮಹಾದೇವ ಕಲಕೇರಿ, ಅನಸೂಯಾ ಸುಲೇಕರ್, ಬೀಸ್ಮಿಲ್ಲಾ ಶೇಕ್, ಕವಿತಾ ರಾಠೋಡ, ಮಲ್ಲು ವಾಳಿ, ಮಲ್ಲು ಬಳಗೊಂಡಿ, ನಿಂಗು ಚಲವಾದಿ, ತಹಸೀಲ್ದಾರ್‌ ಸಂಜೀವಕುಮಾರ ದಾಸರ್, ತಾಪಂ ಇಒ ಶಂಕರ ರಾಠೋಡ, ಉಪವಿಭಾಗ ಅರಣ್ಯಸಂರಕ್ಷಣಾಧಿಕಾರಿ ಸಾಗರ್ ತಾವಡೆ, ಉಪವಲಯ ಅರಣ್ಯಾಧಿಕಾರಿ ಜಗನ್ನಾಥ ಕೊರಳ್ಳಿ, ಅಧಿಕಾರಿಗಳಾದ ರೇವಣಸಿದ್ದ ತಾವರಖೇಡ, ಬಸವರಾಜ ಡಾಂಗೆ, ಮಂಜುಳಾ, ಶಾಂತಪ್ಪ ಜಾಧವ, ಸಿಬ್ಬಂದಿ ಶಿವರಾಜ ಪದಕಿ, ಸಿಪಿಐ ಲಖನ್ ಮಸಗುಪ್ಪಿ, ಪಿಎಸ್‌ಐ ವಾತ್ಸಾಲ್ಯ ಬಿರಾದಾರ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರ ಹಕ್ಕುಗಳ ರಕ್ಷಣೆಗೆ ಸಂಸತ್ತಿನಲ್ಲಿ ಧ್ವನಿಯಾಗಲು ಮನವಿ
ಸಿದ್ದೇಶ್ವರ ಕೈ ಬಲಪಡಿಸಲು ಕಾರ್ಯಕರ್ತರಿಗೆ ಸುನಿಲ ಕರೆ