ಶಾಸಕ ಪ್ರದೀಪ್‌ ಈಶ್ವರ್‌ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ

KannadaprabhaNewsNetwork | Published : May 20, 2025 1:09 AM
ಕಾಂಗ್ರೆಸ್ ಪಕ್ಷದ ಬಹುತೇಕ ಮುಖಂಡರು ಶಾಸಕ ಪ್ರದೀಪ್ ಈಶ್ವರ್ ವಿರುದ್ದ ತೊಡೆತಟ್ಟುತಿದ್ದಾರೆ. ಈಗಾಗಲೆ ಶಾಸಕರ ವಿರುದ್ದ ಮೂರು ಸಭೆಗಳನ್ನ ನಡೆಸಿದ್ದಾರೆ. ನಾಳೆ ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆ ಕಾರ್ಯಕ್ರಮ ಮುಗಿದ ನಂತರ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ಕಾರ್ಯವೈಖರಿ ಬಗ್ಗೆ ವರಿಷ್ಠರಿಗೆ ದೂರು ನೀಡಿದ್ದೇವೆ.
Follow Us

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಶಾಸಕರಾಗಿ ಯಾವುದೆ ಅಭಿವೃದ್ದಿ ಕಾರ್ಯಕ್ರಮಗಳನ್ನ ಕೈಗೆತ್ತಿಕೊಂಡಿಲ್ಲ. ಪಕ್ಷದ ಸಂಘಟನೆ ಹದಗೆಟ್ಟುಹೋಗಿದೆ ಸ್ಥಳೀಯ ಸಂಸ್ಥೆಗಳ ಚುನಾವಣೆವಣೆಗಳಲ್ಲಿ ಹೀನಾಯ ಸೋಲಿಗೆ ನೇರವಾದ ಕಾರಣ ಶಾಸಕ ಪ್ರದೀಪ್ ಈಶ್ವರ್ ಬರೀ ಭ್ರಷ್ಟಾಚಾರ ರಲ್ಲಿ ಮುಳುಗಿದ್ದಾರೆ ಎಂದು ಕೆಪಿಸಿಸಿ ಮಾಜಿ ಸದಸ್ಯ ನಂದಿ.ಎಂ.ಆಂಜಿನಪ್ಪ ಗಂಭೀರ ಆರೋಪ ಮಾಡಿದರು.

ನಗರ ಹೊರವಲಯದ ಖಾಸಗಿ ಗೆಸ್ಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರ ವಿರುದ್ದ ಕೆಪಿಸಿಸಿ, ಎಐಸಿಸಿ ಹಾಗು ಸಿಎಂ ಸಿದ್ದರಾಮಯ್ಯಗೆ ದೂರು ಸಲ್ಲಿಸಿ ಪಕ್ಷದಿಂದ ಹೊರಹಾಕುವಂತೆ ಒತ್ತಾಯ ಹೇರುವುದಾಗಿ ಸ್ವಪಕ್ಷದ ಶಾಸಕರ ವಿರುದ್ದ ತಿರುಗಿಬಿದ್ದಿರುವುದಾಗಿ ತಿಳಿಸಿದರು.

ಹಿರಿಯರಿಗೂ ಮರ್ಯಾದೆ ಕೊಡ್ತಿಲ್ಲ

ಲೀಡರ್‌ಗಳೆ ಬೇಡ ನಾವು ನೇರವಾಗಿ ಮತದಾರರ ಮನೆಗೆ ಬೇಟಿ ಕೊಟ್ಟು ಅವರ ವಿಶ್ವಾಸ ಗಳಿಸಿ ಓಟು ಪಡೆಯುತ್ತೇವೆಂದು ಶಾಸಕ ಪ್ರದೀಪ್ ಈಶ್ವರ್ ಹೇಳಿಕೆ ವಿರುದ್ದ ಪಕ್ಷದಲ್ಲಿಯೇ ಭಾರಿ ವಿರೋಧ ವ್ಯಕ್ತವಾಗಿದೆ. ಈತ ಗೆದ್ದಾಗಿನಿಂದ ಯಾವ ಲೀಡರುಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಪಕ್ಷದ ಸಂಘಟನೆಗೆ ತಲೆಕೆಡಿಸಿಕೊಂಡಿಲ್ಲ. ಯಾವ ಹಿರಿಯರಿಗೂ ಮರ್ಯಾದೆ ಕೊಡ್ತಿಲ್ಲ. ಎಲ್ಲರನ್ನೂ ಕಡೆಗಣಿಸುತಿದ್ದಾರೆ. ಅಭಿವೃದ್ದಿ ಕೆಲಸ ಮಾಡದೆ ದುಡ್ಡು ಮಾಡುವುದರಲ್ಲಿ ಮಗ್ನರಾಗಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷದ ಬಹುತೇಕ ಮುಖಂಡರು ಶಾಸಕ ಪ್ರದೀಪ್ ಈಶ್ವರ್ ವಿರುದ್ದ ತೊಡೆತಟ್ಟುತಿದ್ದಾರೆ. ಈಗಾಗಲೆ ಶಾಸಕರ ವಿರುದ್ದ ಮೂರು ಸಭೆಗಳನ್ನ ನಡೆಸಿದ್ದಾರೆ. ನಾಳೆ ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆ ಕಾರ್ಯಕ್ರಮ ಮುಗಿದ ನಂತರ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ಕಾರ್ಯವೈಖರಿ. ಅ‍ವರ ವಿರುದ್ಧ ಪಕ್ಷದ ಹೈಕಮಾಂಡ್ ಗೆ ದೂರು ಸಲ್ಲಿಸಿದ್ದೇವೆ ಎಂದರು. ಪ್ರದೀಪ್ ಈಶ್ವರ್ ಬರೀ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಸರ್ಕಾರದಿಂದ ಅನುಧಾನ ಮುಂಜೂರಾಗುವ ಮೊದಲೆ ಗುದ್ದಲಿ ಪೂಜೆ ನೆರವೇರಿಸಿಬಿಡುತ್ತಾರೆ. ನಾಯಕರಿಲ್ಲದೆ ಯಾವುದೆ ಶಾಸಕರು ಗೆಲ್ಲಲು ಸಾದ್ಯವಿಲ್ಲ. ಅದನ್ನ ಮರೆತ ಪ್ರದೀಪ್ ಪಕ್ಷದ ಯಾವ ಹಿರಿಯರಿಗೂ ಗೌರವ ಕೊಡುತ್ತಿಲ್ಲ ಇತನು ಓದಿರೋದು ಕೇವಲ ಪಿಯುಸಿ ಮಾತ್ರ. ಆದ್ರೆ ಈತ ಬಾಯಬಿಟ್ಟರೆ ನಾನು ಮೆಡಿಕಲ್ ಮೇಸ್ಟ್ರು ನಾನು ಮೆಡಿಕಲ್ ಪ್ರಿಲಿಮಿನರಿ ಬರೆಯುತಿದ್ದೇನೆ ಎಂದು ಸುಳ್ಳು ಹೇಳಿ ಕ್ಷೇತ್ರ ಜನರಿಗೆ ಮೋಸ ಮಾಡುತಿದ್ದಾರೆ ಎಂದು ಟೀಕಿಸಿದರು.

ಶಾಸಕರು ಅವರ ಸಹೋದರನನ್ನು ಕ್ಷೇತ್ರಾದ್ಯಂತ ಒಡಾಡಿಸಿ ಲಂಚ ವಸೂಲಿಗೆ ಇಳಿಸಿದ್ದಾರೆ. ಆವರು ಶಾಸಕನಾಗುವ ಮೊದಲೆ ಅನುಮೋದನೆ ಸಿಕ್ಕಿದ್ದ ಕಟ್ಟಡ, ರಸ್ತೆಗೆ ಅಡಿಗಲ್ಲು ಹಾಕುತಿದ್ದಾರೆ. ಇವರನ್ನು ಪಕ್ಷದಿಂದ ಹೊರಗೆ ಹಾಕೋವರೆಗೂ ಇಲ್ಲಿ ಪಕ್ಷ ಬೆಳವಣಿಗೆ ಆಗೊಲ್ಲ ಎಂದು ಹೈಕಮಾಂಡ್‌ಗೆ ದೂರು ಸಲ್ಲಿಸಲು ಮೊನ್ನೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಶಾಸಕರ ವಿರುದ್ದ ಕಿಡಿಕಾರಿದರು

ಈ ವೇಳೆ ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ನಗರಸಭಾ ಸದಸ್ಯ ಮಿಲ್ಟನ್ ವೆಂಕಟೇಶ್, ಎಸ್.ಎಂ.ಜಗದೀಶ್, ಮತ್ತಿತರರು ಇದ್ದರು.