ಉಪ್ಪಾರ ಸಮಾಜ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಲಿ

KannadaprabhaNewsNetwork |  
Published : Jun 08, 2025, 01:57 AM ISTUpdated : Jun 08, 2025, 01:58 AM IST
ಸಂಭ್ರಮದಿಂದ ಭಗೀರಥ ಜಯಂತಿ ಆಚರಣೆ | Kannada Prabha

ಸಾರಾಂಶ

ಪ್ರತಿಯೊಬ್ಬರೂ ಕಡ್ಡಾಯ ಶಿಕ್ಷಣ ಪಡೆದುಕೊಳ್ಳಬೇಕು. ಅಲ್ಲದೇ ಸರಕಾರ ಶಿಕ್ಷಣಕ್ಕೆ ಸಾಕಷ್ಟು ಅನುದಾನ ನೀಡುತ್ತಿದ್ದು, ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು. ಪ್ರತಿಯೊಬ್ಬರಿಗೂ ಶಿಕ್ಷಣದ ಹಕ್ಕು ಇದೆ. ಸಂಘಟನೆಗಳು ಸಮಾಜದ ಅಭಿವೃದ್ಧಿಗೆ ಹೆಚ್ಚು ಶ್ರಮಿಸಬೇಕು. ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಉನ್ನತ ಶಿಕ್ಷಣ ಕೊಡಿಸಬೇಕು

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಪ್ರಯತ್ನ ಹಾಗೂ ಸಾಧನೆಯ ಧ್ಯೋತಕವಾದ ಭಗೀರಥ ಮಹರ್ಷಿಯ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು, ಸಮಾಜದ ಅಭಿವೃದ್ಧಿಗೆ ಸಂಘಟನೆ ಅಗತ್ಯವಾಗಿದ್ದು, ಸಂಘಟನೆಯಿಂದ ಸಮಾಜದ ಮಕ್ಕಳಿಗೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ ಹೇಳಿದರು.ನಗರದ ಡಾ.ಎಚ್.ಎನ್.ಕಲಾಭವನದಲ್ಲಿ ಉಪ್ಪಾರ ಸಮಾಜದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಭಗೀರಥರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಭಗೀರಥರು ಪೌರಾಣಿಕ ಪುರುಷರು. ಸಮಾಜದಲ್ಲಿ ಇಂದಿಗೂ ಕಠಿಣ ಪರಿಶ್ರಮಕ್ಕೆ ಭಗೀರಥ ಯತ್ನ ಎಂದೇ ಉದಾಹರಣೆ ನೀಡಲಾಗುತ್ತದೆ. ಭಗೀರಥರು ಎಂದರೆ ಸಾಧನೆಯ ಧ್ಯೋತಕವಾಗಿದ್ದು, ಸಾಕ್ಷತ್ ಗಂಗೆಯನ್ನು ಧರೆಗಿಳಿಸಿದ ಮಹಾಪುರುಷರು ಎಂದು ಬಣ್ಣಿಸಿದರು.ಕಡ್ಡಾಯವಾಗಿ ಶಿಕ್ಷಣ ಪಡೆಯಿರಿ

ಪ್ರತಿಯೊಬ್ಬರೂ ಕಡ್ಡಾಯ ಶಿಕ್ಷಣ ಪಡೆದುಕೊಳ್ಳಬೇಕು. ಅಲ್ಲದೇ ಸರಕಾರ ಶಿಕ್ಷಣಕ್ಕೆ ಸಾಕಷ್ಟು ಅನುದಾನ ನೀಡುತ್ತಿದ್ದು, ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು. ಪ್ರತಿಯೊಬ್ಬರಿಗೂ ಶಿಕ್ಷಣದ ಹಕ್ಕು ಇದೆ. ಸಂಘಟನೆಗಳು ಸಮಾಜದ ಅಭಿವೃದ್ಧಿಗೆ ಹೆಚ್ಚು ಶ್ರಮಿಸಬೇಕು. ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಉನ್ನತ ಶಿಕ್ಷಣವನ್ನು ನೀಡುವ ಕೆಲಸವಾಗಬೇಕು ಎಂದರು.ಉಪ್ಪಾರ ಸಮುದಾಯ, ಶಾಂತಿ ಸಹಬಾಳ್ವೆ ಯಿಂದ ಸಮಾಜದಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ, ಸಮುದಾಯದ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು, ಜ್ಞಾನವೇ ಶಕ್ತಿ ಮತ್ತು ಸಂಪತ್ತು ಎಂದು ಅರಿತು ಶಿಕ್ಷಣ ಪಡೆದು ಸಮಾಜದಲ್ಲಿ ಮುಂದುವರೆಯಬೇಕು. ಉಪ್ಪಾರ ಸಮಾಜದ ಆರಾಧ್ಯ ದೈವ ಶ್ರೀ ಭಗೀರಥ ಮಹರ್ಷಿಗಳು ಲೋಕ ಕಲ್ಯಾಣಾರ್ಥವಾಗಿ ಮನುಕುಲದ ಉದ್ದಾರಕ್ಕಾಗಿ ಕಠಿಣ ತಪಸ್ಸಿನ ಮೂಲಕ ಶಿವನನ್ನು ಒಲಿಸಿಕೊಂಡು ದೇವಗಂಗೆಯನ್ನು ಧರೆಗೆ ಇಳಿಸಿ ಸಕಲ ಜೀವರಾಶಿಗಳನ್ನು ಉದ್ದರಿಸಿ ಪಾವನಗೊಳಿಸಿದ್ದಾರೆ.

ದಾರ್ಶನಿಕರ ಸಾಧನೆ ಪಾಲಿಸಿಡಾ.ಶ್ರೀ ಪುರುಷೋತ್ತಮಾನಂದ ಪುರಿ ಮಹಾಸ್ವಾಮೀಜಿ ಮಾತನಾಡಿ, ಯಾರೂ ಮಾಡಲಾಗದ ಕೆಲಸವನ್ನು ಮಾಡಿದಾಗ ಅದನ್ನು ಭಗೀರಥ ಪ್ರಯತ್ನಮಾಡಿ ಸಾಧಿಸಿದ್ದಾನೆ ಎನ್ನುತ್ತಾರೆ, ಹಾಗೆಯೇ ವಿದ್ಯಾರ್ಥಿಗಳು ಸಂಕಲ್ಪ ಮಾಡಿ, ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದರೆ ಸಾಧನೆಮಾಡಬಹುದು, ಸಂತರು ದಾರ್ಶನಿಕರು ಎಲ್ಲರೂ ಸಾಧನೆ ಮಾಡಿದವರು, ಅಂಬೇಡ್ಕರ್, ಬಸವ, ವಾಲ್ಮೀಕಿ, ಕನಕದಾಸ, ಕೆಂಪೇಗೌಡ, ಅಂಬಿಗರ ಚೌಡಯ್ಯ, ಎಲ್ಲರೂ ಜಾತಿ ಧರ್ಮವನ್ನು ಮೀರಿ ಬೆಳೆದವರು. ಅವರ ಆದರ್ಶಗಳನ್ನು ಜೀವನದಲ್ಲಿ ಪಾಲಿಸಬೇಕು ಎಂದರು.ನಂತರ ಸ್ವಾಮೀಜಿರವರು ಗೌರಿಬಿದನೂರು ತಾಲ್ಲೂಕು ಉಪ್ಪಾರ ಸಮುದಾಯದ ಸರ್ವತೋಮುಖ ಅಭಿವೃದ್ದಿಗೆ ಸರ್ಕಾರಿ ಅಧಿಕೃತ 30ಗುಂಟೆ ನಿವೇಶವನ್ನು ಮತ್ತು ನಗರದ ವ್ಯಾಪ್ತಿಯ ಮುಖ್ಯ ವೃತ್ತದಲ್ಲಿ ಶ್ರೀ ಭಗೀರಥ ಪುತ್ಥಳಿಯನ್ನು ಪ್ರತಿಷ್ಠಾಪಿಸಿ, ಆ ವೃತ್ತಕ್ಕೆ ಶ್ರೀ ಭಗೀರಥ ವೃತ್ತವೆಂದು ನಾಮಕರಣ ಮಾಡುವಂತೆ ಕೋರಿ ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು.

ಮನವಿಪತ್ರ ಸ್ವೀಕರಿಸಿದ ಶಾಸಕರು ಮುಂದಿನ ದಿನಗಳಲ್ಲಿ ಸಮದುಆಯದವರು ಮನವಿ ಪತ್ರದ ಮೇರೆಗೆ ನಿವೇಶನವನ್ನು ಮತ್ತು ವೃತ್ತವನ್ನು ಗುರುತಿಸಿ ಕೊಡುವುದಾಗಿ ತಿಳಿಸಿದರು.

ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ

ಜಿಲ್ಲಾಧ್ಯಕ್ಷರಾದ ಜಯರಾಮ್.ಎನ್ ಮಾತನಾಡಿ, ಭಗೀರಥರು ರಾಜರಾಗಿದ್ದರೂ ಸಹ ಜನಸಾಮಾನ್ಯರ ಒಳಿತಿಗಾಗಿ ಮಿಡಿಯುತ್ತಿದ್ದರು. ಇಂದಿಗೂ ಅವರ ಛಲ, ಹಠದ ಸಾಧನೆ ಜನರ ಮನದಲ್ಲಿವೆ. ಉಪ್ಪಾರ ಸಮಾಜವು ರಾಜಕೀಯವಾಗಿ, ಶೈಕ್ಷಣಿಕವಾಗಿ ಮುಂದೆ ಬರಬೇಕು. ಜನಾಂಗದ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವತ್ತ ಪೋಷಕರು ಗಮನ ಹರಿಸಬೇಕು ಎಂದರು.

ಪ್ರತಿಭಾವಂತರಿಗೆ ಸನ್ಮಾನ

ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ವಿಶೇಷಸಾಧಕರಿಗೆ, ಸನ್ಮಾನಿಸಲಾಯಿತು. ಭಗೀರಥ ಚರಿತ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಇದೇ ಸಂದರ್ಭದಲ್ಲಿ, ಭಾ.ರಾ.ಸೆ.ಆದಾಯತೆರಿಗೆ ಉಪಆಯುಕ್ತ-ಲಕ್ಕಪ್ಪ ಉದ್ದಪ್ಪ ಹಣಮನ್ನ, ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್ ನಿರ್ದೇಶಕ ನಾಗರಾಜ್.ಎ.ಜಿ, ಮಹರ್ಷಿ ಭಗೀರಥ ಸಾಹಿತ್ಯ ಪರಿಷತ್ ಟ್ರಸ್ಟ್ ರಾಜ್ಯಾಧ್ಯಕ್ಷ ಸುರೇಶ್ ಮಲ್ಲಾಡದ, ಸಮುದಾಯದ ಮುಖಂಡರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ