ಕನ್ನಡಪ್ರಭ ವಾರ್ತೆ ಮಧುಗಿರಿ
ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಾಲ್ಕನೇ ತ್ರೈಮಾಸಿಕ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರಗಳಿಂದ ಬರುವ ಹಣವನ್ನು ಸಮಪರ್ಕವಾಗಿ ಸದುಪಯೋಗ ಪಡಿಸಿಕೊಂಡು ಸಕಾಲದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸದೆ ವಿಳಂಬ ನೀತಿ ಅನುಸರಿಸುವ ಮೂಲಕ ಅಭಿವೃದ್ಧಿ ವಿಚಾರದಲ್ಲಿ ಮಂದಗತಿಯಲ್ಲಿ ಸಾಗುತ್ತಿರುವ ಬಗ್ಗೆ ಅಧಿಕಾರಿಗಳ ಕಾರ್ಯ ವೈಖರಿಗೆ ಶಾಸಕ ಕೆ.ಎನ್.ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದರು. ಫಲಾನುಭವಿಗಳಿಗೂ ತಲುಪಬೇಕಾದ ಸೌಲಭ್ಯಗಳನ್ನು ಸಕಾಲಕ್ಕೆ ತಲುಪಿಸಬೇಕು. ಅದೇ ರೀತಿ ಸರ್ಕಾರಿ ಜಾಗ ಮತ್ತು ಕಟ್ಟಗಳ ದಾಖಲಾತಿ ಪತ್ರಗಳನ್ನು ವ್ಯವಸ್ಥಿತವಾಗಿ ಸಂರಕ್ಷಿಸುವುದಲ್ಲದೆ ಆಯಾಯ ಎಲ್ಲ ಇಲಾಖೆಯ ಮುಸ್ಥರು ಸರ್ಕಾರಿ ಕಟ್ಟಗಳ ಖಾತೆ ಮತ್ತು ಸಂಬಂಧ ಪಟ್ಟ ದಾಖಲಾತಿ ಪತ್ರಗಳನ್ನು ರಕ್ಷಿಸಿ ಸಂಗ್ರಹಿಸುವ ನಿಟ್ಟಿನಲ್ಲಿ ಜೋಪಾನ ಮಾಡಬೇಕು ಎಂದು ಇಓ ಮತ್ತು ಎಲ್ಲ ಇಲಾಖೆಯ ಅಧಿಕಾರಿಗಳಿಗೆ ರಾಜಣ್ಣ ಸಲಹೆ ನೀಡಿದರು.
ತಾಲೂಕಿನಲ್ಲಿ ಪ್ರಗತಿಯಲ್ಲಿರುವ ಜಲಜೀವನ್ ಮಿಷನ್ ಕಾಮಗಾರಿಗಳು ಉತ್ತಮ ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕು. ಈಗಾಗಲೇ ಜೆಜೆಎಂ ಬಗ್ಗೆ ಸಾರ್ವಜನಿಕರು ಬೇಸರ ಪಟ್ಟಿದ್ದು ಮೊದಲೇ ಪಟ್ಟಣ ಸೇರಿದಂತೆ ಎಲ್ಲ ಹಳ್ಳಿಗಳಲ್ಲಿ ರಸ್ತೆಗಳು ಚೆನ್ನಾಗಿದ್ದವು. ಆದರೆ ಜೆಜೆಎಂ ಕಾಮಗಾರಿಯಿಂದಾಗಿ ಎಲ್ಲ ರಸ್ತೆಗಳನ್ನು ಗುಂಡಿ ಇಟ್ಟು ಹಾಗೇ ಬಿಟ್ಟು ಜನರ ಓಡಾಟಕ್ಕೆ ತೊಂದರೆ ಮಾಡಿದ್ದಾರೆ. ಆದ್ದರಿಂದ ರಸ್ತೆ ಗುಂಡಿ ಇಟ್ಟಿರುವ ಜಾಗವನ್ನು ಅಚ್ಚುಕಟ್ಟಾಗಿ ಮುಚ್ಚಬೇಕು.ಸರಿಯಾಗಿ ಕೆಲಸ ಮಾಡದಿದ್ದರೆ ಗುತ್ತಿಗೆದಾರರಗೆ ಹಣ ಬಿಡುಗಡೆ ಮಾಡಬೇಡಿ ಎಂದು ತಾಕೀತು ಮಾಡಿದರು.ತಾಲೂಕಿನ ಶ್ರಾವಂಡನಹಳ್ಲಿ ಕೆರೆ ಅಂಗಳವನ್ನೇ ಒತ್ತುವರಿ ಮಾಡಿ ಖಾತೆ ಮಾಡಿಸಿ ಕೊಂಡಿದ್ದಾರೆ ಎಂಬ ದೂರು ಕೇಳಿ ಬಂದಿದ್ದು ಈ ತಕ್ಷಣ ಅದನ್ನು ಪರಿಶೀಲಿಸಿ ಕೆರೆ ಅಂಗಳವನ್ನು ಸಾರ್ವಜನಿಕರ ಮತ್ತು ಪ್ರಾಣಿ ಪಕ್ಷಿಗಳ ಅನುಕೂಲಕ್ಕೆ ರಕ್ಷಿಸುವಂತೆ ಎಸಿ ಮತ್ತು ತಹಸೀಲ್ದಾರ್ ಸೂಚಿಸಿದರು. ಕಾರ್ಮಿಕ ಇಲಾಖೆಯಿಂದ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಿದ್ದು, ನನ್ನ ಗಮನಕ್ಕೆ ತಂದಿಲ್ಲ ಎಂದು ಕಾರ್ಮಿಕ ನಿರೀಕ್ಷಕ ಶ್ರೀಕಾಂತ್ ಕಾರ್ಯ ವೈಖರಿ ವಿರುದ್ಧ ಹರಿಹಾಯ್ದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಸಿಇಒ ಅಶ್ವಿಜ, ಎಸಿ ಗೋಟೂರು ಶಿವಪ್ಪ, ಜಿ.ಪಂ.ಉಪ ಕಾರ್ಯದರ್ಶಿ ಸಂಜೀವಪ್ಪ, ತಾಪಂ ಆಡಳಿತಾಧಿಕಾರಿ ಸೋನಿಯಾ ವಾರ್ಣೇಕರ್,ಇಒ ಉತ್ತಮ್,ಎಡಿಎ ಧನಂಜಯ್ ಪ್ರಭಾರ ತಹಸೀಲ್ದಾರ್ ಮಂಜುನಾಥ್, ಕೆಎಸ್‌ಆರ್‌ಟಿಸಿ ವಿಭಾಗೀಯ , ನಿಯಂತ್ರಣಾಧಿಕಾರಿ ನಾಗೇಂದ್ರ, ಬಡವನಹಳ್ಳಿ ಚೌಡಪ್ಪ, ಎಂ.ಎಸ್.ಮಲ್ಲಿಕಾರ್ಜುನಯ್ಯ, ಬಿ.ನಾಗೇಶ್ ಬಾಬು, ಹೊಸಕೆರೆ ದೇವರಾಜು ,ನಜೀರ್ ಅಹಮದ್ ಇತರರಿದ್ದರು.